ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್‌ಕ್ಲೇವ್‌ನ ಅತಿಮ ದಿನವಾದ ಭಾನುವಾರ ಸಂಜೆ ಹಿನ್ನೆಲೆ ಗಾಯಕಿ ಅನನ್ಯಾಭಟ್ ಮತ್ತು ತಂಡದಿಂದ ಸಂಗಿತ ಕಾರ್ಯಕ್ರಮ ನೆರವೇರಿತು.
ಹಿನ್ನೆಲೆ ಗಾಯಕಿ ಅನನ್ಯಾ ಭಟ್ ಮತ್ತು ತಂಡ 2 ಗಂಟೆಗೂ ಹೆಚ್ಚು ಕಾಲ ಕಾರ್ಯಕ್ರಮ ನೀಡಿ ಪ್ರೇಕ್ಷಕರನ್ನು ರಂಜಿಸಿದರು. ‘ಸೋಜುಗದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ’, ‘ಹೇಳದೆ ಕೇಳದೆ ಜೀವವು ಜಾರಿದೆ’, ‘ಮೆಂಟಲ್ ಹೊ ಜಾವಾ’ ಸೇರಿದಂತೆ ನಾನಾ ಹಾಡುಗಳನ್ನು ಹಾಡಿ ರಂಜಿಸಿದರು.
ಇದಕ್ಕೂ ಮುನ್ನ ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ವತಿಯಿಂದ ನಟ ಡಾಲಿ ಧನಂಜಯ ಅವರನ್ನು ಸನ್ಮಾನಿಸಲಾಯಿತು.