ತರೀಕೆರೆ ಪುರಸಭೆಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು. ವಸಂತ್‌ಕುಮಾರ್, ಪಾರ್ವತಮ್ಮ, ಟಿ.ಎಂ.ಭೋಜರಾಜ್, ಟಿ.ದಾದಾಪೀರ್, ಟಿ.ಒ.ವಿಜಯಕುಮಾರ್ ಇತರರಿದ್ದರು. 
ನ್ಯೂಸ್

ಗಾಂಧಿ ಜೀವನ ಎಲ್ಲರಿಗೂ ಮಾದರಿ

ತರೀಕೆರೆ: ಅಹಿಂಸೆ ಪ್ರತಿಪಾದಿಸಿದ ಮಹಾತ್ಮ ಗಾಂಧಿ ಅವರ ಜೀವನ ನಮ್ಮೆಲ್ಲರಿಗೂ ಮಾದರಿಯಾಗಬೇಕು ಎಂದು ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್ ಹೇಳಿದರು.

ಪುರಸಭೆಯಲ್ಲಿ ಏರ್ಪಡಿಸಿದ್ದ ಜಯಂತ್ಯುತ್ಸವದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಶಾಂತಿಯುತ ಹೋರಾಟದ ಮೂಲಕ ಮಹಾತ್ಮ ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದಾರೆ. ನಾವೆಲ್ಲರೂ ಅಹಿಂಸಾತ್ಮಕವಾಗಿ ದಕ್ಕಿದ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು. ಅವಿರತ ಹೋರಾಡಿ ತ್ಯಾಗ ಬಲಿದಾನ ಮಾಡಿದ ಮಹನೀಯರ ಸ್ಮರಿಸಬೇಕು ಎಂದರು.

ಲಾಲ್ ಬಹಾದೂರ್ ಶಾಸ್ತ್ರಿ ಉತ್ತಮ ಆಡಳಿತ ನೀಡಿದ್ದರಲ್ಲದೆ, ಪ್ರಾಮಾಣಿಕತೆ ಮೆರೆದಿದ್ದರು. ಇಂದಿನ ರಾಜಕಾರಣಿಗಳಿಗೆ ಅವರ ಜೀವನಾದರ್ಶ ಪ್ರೇರಣೆಯಾಗಬೇಕು ಎಂದು ಹೇಳಿದರು.

ಉಪಾಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ಟಿ.ಎಂ.ಭೋಜರಾಜ್, ಟಿ.ದಾದಾಪೀರ್, ಆದಿಲ್ ಪಾಷಾ, ಟಿ.ಡಿ.ಮಂಜುನಾಥ್, ರಿಹಾನಾ ಪರ್ವೀನ್, ಮುಖ್ಯಾಧಿಕಾರಿ ಟಿ.ಒ.ವಿಜಯಕುಮಾರ್ ಇತರರಿದ್ದರು.