ನ್ಯೂಸ್

ಗಾಂಜಾ ಆರೋಪಿ ಬಂಧನ ೮ ಲಕ್ಷ ಮೌಲ್ಯದ ೧೦ ಕೆ.ಜಿ. ಗಾಂಜಾ ವಶ

ವಿಜಯವಾಣಿ ಸುದ್ದಿಜಾಲ ಕೋಲಾರ
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಸುಮಾರು ೮ ಲಕ್ಷರೂ ಬೆಲೆಯ ೧೦ ಕೆಜಿ ಗಾಂಜಾವನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆಂಧ್ರಪ್ರದೇಶದ ಈಸ್ಟ್ ಗೋದಾವರಿ ಜಿಲ್ಲೆಯ ಕಾಲಾ ನರೇಶ್ (೨೯) ಬಂಧಿತ ಆರೋಪಿಯಾಗಿದ್ದು, ಕೋಲಾರ-ಬೆಂಗಳೂರು ರಾಷ್ಟಿçÃಯ ಹೆದ್ದಾರಿ ೭೫ರ ಚುಂಚದೇನಹಳ್ಳಿ ಗೇಟ್‌ನಲ್ಲಿನ ಆಂಜನೇಯಸ್ವಾಮಿ ದೇವಾಲಯದ ಬಳಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಎಸ್ಪಿ ಬಿ.ನಿಖಿಲ್, ಎಎಸ್ಪಿಗಳಾದ ರವಿಶಂಕರ್, ಜಗದೀಶ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಂ.ಎಚ್.ನಾಗ್ತೆ ಮುಂದಾಳತ್ವದಲ್ಲಿ ಕೋಲಾರ ಗ್ರಾಮಂತರ ಠಾಣೆಯ ವೃತ್ತ ನಿರೀಕ್ಷಕ ಕೆ.ಕಾಂತರಾಜ್, ಸಿಬ್ಬಂದಿ ಮುರಳಿ, ಸಾಧಿಕ್ ಪಾಷ, ರವಿಕುಮಾರ್, ರಾಜೇಶ್, ಜಿಲ್ಲಾ ಅಪರಾಧ ವಿಭಾಗದ ಪಿಎಸ್‌ಐ ಎಂ.ಆರ್.ಅಣ್ಣಯ್ಯ, ಸಿಬ್ಬಂದಿ ರಮೇಶ್, ಆಂಜಿನಪ್ಪ, ತಾಂತ್ರಿಕ ವಿಭಾಗದ ನಾಗರಾಜ್, ಮುರಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಎಸ್ಪಿ ಶ್ಲಾಘಿಸಿದ್ದಾರೆ.

ಚಿತ್ರ ೧೮ ಕೆ.ಎಲ್.ಆರ್. ೦೭ : ಗಾಂಜಾ ಆರೋಪಿಯನ್ನು ಕೋಲಾರ ಗ್ರಾಮಾಂತರ ಠಾಣೆ ಪೋಲಿಸರು ವಶಕ್ಕೆ ಪಡೆದಿರುವುದು.