ನ್ಯೂಸ್

ಗರ್ಭಿಣಿಯರಿಗೆ ಯೋಗ ತರಬೇತಿ

ಗರ್ಭಿಣಿಯರಿಗೆ ಯೋಗ, ಗರ್ಭ ಸಂಸ್ಕಾರ ಕುರಿತ ಅಂತಾರಾಷ್ಟ್ರೀಯ ಶಿಕ್ಷಕರ ತರಬೇತಿ ಕೋರ್ಸ್ ಹಾಗೂ ಈ ಕುರಿತ ಉಚಿತ ಮಾಹಿತಿ ಕಾರ್ಯಾಗಾರವನ್ನು ಪರಮಹಂಸ ಕಲಾ ಅಕಾಡೆಮಿ, ಪರಮಹಂಸ ಯೋಗ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದೆ ಎಂದು ಸಂಸ್ಥೆ ಮುಖ್ಯಸ್ಥ ಯೋಗ ಪ್ರವೀಣ ಶಿವಪ್ರಕಾಶ್ ಗುರೂಜಿ ತಿಳಿಸಿದರು.

ಏ.25 ರಿಂದ ರಾಮಕೃಷ್ಣ ನಗರದ ಇ ಮತ್ತು ಎಫ್ ಬ್ಲಾಕ್‌ನಲ್ಲಿ ಯೋಗ ಪಾರ್ಕ್ ಬಳಿಯ ಪರಮಹಂಸ ಯೋಗ ಮಹಾ ವಿದ್ಯಾಲಯದಲ್ಲಿ ಕೋರ್ಸ್ ಆರಂಭವಾಗಲಿದೆ. ಈ ವೇಳೆ ನುರಿತ ಯೋಗ ತಜ್ಞರು, ಪರಿಣಿತ ವೈದ್ಯರು ಗರ್ಭಿಣಿ ಯೋಗ, ಪ್ರಸವ ಪೂರ್ವ ಯೋಗ, ಗರ್ಭ ಸಂಸ್ಕಾರ ಮೊದಲಾದವುಗಳ ಬಗ್ಗೆ ಕಲಿಸಿಕೊಡಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಏ.22 ರಂದು ಉಚಿತ ಕಾರ್ಯಾಗಾರ ಇರಲಿದೆ. ಹೆಚ್ಚಿನ ಮಾಹಿತಿಗೆ ದೂ. 70901 57993 ಸಂಪರ್ಕಿಸಲು ಕೋರಿದರು.