ನಿಪ್ಪಾಣಿ: ಭಾರತ ಸೇನೆ ಪಾಕಿಸ್ತಾನದ ವಿರುದ್ಧ ಕೈಗೊಂಡ `ಆಪರೇಷನ್ ಸಿಂಧೂರ' ಯಶಸ್ವಿ ಹಿನ್ನೆಲೆ ಸೋಮವಾರ ಅದ್ದೂರಿ ತಿರಂಗಾ ರ‍್ಯಾಲಿ ಜರುಗಿತು. ಇಲ್ಲಿನ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಭಾರತಾಂಭೆಯ ಭಾವಚಿತ್ರಕ್ಕೆ ಗಣ್ಯರು ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಿದರು.
ರ‍್ಯಾಲಿಯಲ್ಲಿ ೯೦೦ ಮೀ ಉದ್ದದ ತ್ರಿವರ್ಣ ಧ್ವಜ ಗಮನ ಸೆಳೆಯಿತು.
ಜೊಲ್ಲೆ ಗ್ರೂಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಮಾತನಾಡಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ ಮಾರ್ಗದರ್ಶನದಿಂದ ನಗರದಲ್ಲಿ `ಆಪರೇಷನ್‌ಸಿಂಧೂರ' ಸ್ಮರಣಾರ್ಥವಾಗಿ ಸ್ಮಾರಕ ನಿರ್ಮಿಸಲಾಗುವುದು. ಈಗಾಗಲೇ ನಗರಸಭೆ ಸೈನಿಕರ ಸ್ಮಾರಕಕ್ಕಾಗಿ ಭೂಮಿ ಅನುಮೋದಿಸಿದೆ ಎಂದರು.
ನಿವೃತ್ತ ಮೇಜರ್ ಸುಬೇದಾರ ರವೀಂದ್ರ ಪೊವಾರ, ಗಜಾನನ ಚವ್ಹಾಣ ಮಾತನಾಡಿದರು.
ರ‍್ಯಾಲಿ ಮುನ್ಸಿಪಲ್ ಹೈಸ್ಕೂಲ್‌ನಿಂದ ಆರಂಭಗೊಂಡು ಛತ್ರಪತಿ ಶಿವಾಜಿ ಮಹಾರಾಜ ವೃತ್ತ ತಲುಪಿ ಕೊನೆಗೊಂಡಿತು.
ವಿರೂಪಾಕ್ಷಲಿಂಗ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ, ಅರುಣಾನಂದ ಸ್ವಾಮೀಜಿ, ಬಸವಪ್ರಸಾದ ಜೊಲ್ಲೆ, ನಗರಸಭೆ ಅಧ್ಯಕ್ಷೆ ಸೋನಾಲಿ ಕೊಠಡಿಯಾ, ಉಪಾಧ್ಯಕ್ಷ ಸಂತೋಷ ಸಾಂಗಾವಕರ, ತಹಸೀಲ್ದಾರ್ ಮುಜಫರ್ ಬಳಿಗಾರ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ನಾಯಿಕ, ಸಿಡಿಪಿಒ ಸುಪ್ರಿಯಾ ಜಡಗೆ, ಸಿಪಿಐ ಬಿ.ಎಸ್.ತಳವಾರ, ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲಗೊಂಡಾ ಪಾಟೀಲ, ಉಪಾಧ್ಯಕ್ಷ ಪವನಕುಮಾರ ಪಾಟೀಲ ಇತರರಿದ್ದರು.