ನ್ಯೂಸ್

ಗದ್ದೆಯಲ್ಲಿ ಭತ್ತ ನಾಟಿ ಮಾಡಿದ ಶಾಸಕ ನಂಜೇಗೌಡ/ಬೇಸಾಯ ನಮ್ಮ ಕುಟುಂಬದ ಮೂಲವೃತ್ತಿ/ ರಾಜಕಾರಣ ನನ್ನ ಪ್ರವೃತ್ತಿ.

ವಿಜಯವಾಣಿ ಸುದ್ದಿಜಾಲ ಟೇಕಲ್

ಶಾಸಕ ಕೆ.ವೈ.ನಂಜೇಗೌಡ ಶನಿವಾರ ತಮ್ಮ ಗದ್ದೆಯಲ್ಲಿ ಕೂಲಿ ಕಾರ್ಮಿಕರ ಜೂತೆಯಲ್ಲಿ ಭತ್ತ ನಾಟಿ ಮಾಡುವ ಮೂಲಕ ಅಪ್ಪಟ ರೈತರೆಂದು ಸಾಬೀತು ಮಾಡಿದ್ದಾರೆ.

ಪ್ರತಿ ಬಾರಿ ತಮ್ಮ ಭಾಷಣದಲ್ಲಿ ರೈತ ಕುಟುಂಬದಿAದ ಬಂದಿರುವೆ. ರೈತರ ಕಷ್ಟಗಳ ಅರಿವಿದೆ ಎಂದು ವಿವರಿಸುತ್ತಿದ್ದ ಶಾಸಕರು ಶನಿವಾರ ಸ್ವತಹ ತಾವೇ ಗದ್ದೆಗೆ ಇಳಿದಿದ್ದರು.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕೃಷಿ ಕಾರ್ಮಿಕರೊಂದಿಗೆ ತಾವು ಸಹ ಭತ್ತದ ಪೈರು ನಾಟಿ ಮಾಡುವ ಕೆಲಸವನ್ನು ಯಾವುದೇ ಅಳುಕಿಲ್ಲದೆ ಸರಾಗವಾಗಿ ನಡೆಸಿದರು.

ಉಟ್ಟಿದ್ದ ಪಂಚೆ ಮೇಲಕ್ಕೆ ಕಟ್ಟಿಕೊಂಡು ಶಾಸಕರು ಗದ್ದೆಯೊಳಗೆ ಹೆಸರಿನಲ್ಲಿ ಇಳಿದು ಭತ್ತ ನಾಟಿ ಮಾಡಿದರು. ಈ ವೇಳೆ ಮಾತನಾಡಿದ ಶಾಸಕರು ನಮ್ಮ ಪೂರ್ವಿಕರ ಕಾಲದಿಂದಲೂ ನಾನು ಕೃಷಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು ಕೃಷಿಯ ಆಸಕ್ತಿ ಕುಗ್ಗಿಲ್ಲ ಎಂದು ತಿಳಿಸಿದರು.

ಕಳೆದ ವರ್ಷ ನಾವು ೩೦೦ ಮೂಟೆ ರಾಗಿ ಮತ್ತು ೧೫೦ ಮೂಟೆ ಭತ್ತ ಬೆಳೆದಿದ್ದೆವು. ರಾಜಕೀಯ ಒತ್ತಡದ ನಡುವೆಯೂ ಪ್ರತಿದಿನ ಒಮ್ಮೆಯಾದರೂ ಹೊಲದ ಕಡೆ ಹೋಗಿ ಬರುವುದು ನನ್ನ ದಿನಚರಿ ಎಂದರು.

ಬೇಸಾಯ ನಮ್ಮ ಕುಟುಂಬದ ಮೂಲವೃತ್ತಿ. ರಾಜಕಾರಣ ನನ್ನ ಪ್ರವೃತ್ತಿ. ನಮ್ಮ ಕುಟುಂಬದ ಮೂಲ ಕಸುಬು ಮುಂದುವರೆಸಲು ನನಗೆ ಸರಿಸಾಟಿಯಾಗಿ ನನ್ನ ಪತ್ನಿ ಮತ್ತು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ರತ್ನಮ್ಮ ಅವರು ನನ್ನೊಂದಿಗೆ ನಿಲ್ಲುತ್ತಾರೆ. ನನ್ನ ರಾಜಕೀಯ ಜಂಜಾಟಗಳ ನಡುವೆ ಪ್ರತಿ ದಿನ ಕೃಷಿ ಚಟುವಟಿಕೆಗಳ ಹಾಗೂ ಹೋಗುಗಳ ಉಸ್ತುವಾರಿ ವಹಿಸುವವರೇ ರತ್ನಮ್ಮ ಎಂದು ನಂಜೇಗೌಡ ವಿವರಿಸಿದರು.

ನಾವು ಬೆಳೆಯುವ ೩೦೦ ಮೂಟೆ ರಾಗಿಯಲ್ಲಿ ೧೦೦ ಮೂಟೆ ಸರ್ಕಾರಿ ಸೊಸೈಟಿಗೆ ನೀಡಿ ಉಳಿದಿದ್ದನ್ನು ನೆಂಟರಿಷ್ಟರು ಮತ್ತು ಇತರರಿಗೆ ಹಂಚಿ ನಮ್ಮ ಕುಟುಂಬಕ್ಕೂ ಇಟ್ಟುಕೊಳ್ಳುತ್ತೇವೆ ಎಂದು ಶಾಸಕರು ತಿಳಿಸಿದರು.

ನನ್ನ ಸಹೋದರ ಕೆ.ವೈ. ಈರೇಗೌಡ ಸೇರಿದಂತೆ ಇಡೀ ಕುಟುಂಬದವರೆಲ್ಲರೂ ಕೃಷಿಯಲ್ಲಿ ತೊಡಗಿಸಿಕೊಳ್ಳುವಲ್ಲಿ ಖುಷಿ ಅನುಭವಿಸುತ್ತೇವೆ ಎಂದು ಅವರು ನೋಡಿದರು.

ಚಿತ್ರ ೧೭ ಕೆ.ಎಲ್.ಆರ್. ೦೨ ಶಾಸಕ ಕೆ.ವೈ.ನಂಜೇಗೌಡ ತಮ್ಮ ಗದ್ದೆಯಲ್ಲಿ ಕೂಲಿ ಕಾರ್ಮಿಕರ ಜೂತೆಯಲ್ಲಿ ಭತ್ತ ನಾಟಿ ಮಾಡುತ್ತರಿವುದು.