ನ್ಯೂಸ್

ಗಣಿಜಿಲ್ಲೆಯಲಿ ಎರಡು ಶಂಕಿತ ಪ್ರಕರಣ ಪತ್ತೆ


ಬಳ್ಳಾರಿ

ಕರೊನಾ ವೈರಸ್ ಭೀತಿಯು ಗಣಿಜಿಲ್ಲೆಗೂ ಆವರಿಸಿದ್ದು, ಹೊಸಪೇಟೆ ಹಾಗೂ ಸಂಡೂರು ತಾಲೂಕಿನ ಜಿಂದಾಲ್ ನಲ್ಲಿ ಶಂಕಿತ ಎರಡು ಪ್ರಕರಣ ಪತ್ತೆಯಾಗಿವೆ.


ಹೊಸಪೇಟೆಯಲ್ಲಿ ವ್ಯಕ್ತಿಯೊರ್ವನು ದುಬೈನಿಂದ ಬಂದಾತ ನಾಗಿದ್ದಾನೆ.ಇತನಿಗೆ ಕರೋನಾ ರೋಗದ ಕೆಲ ಗುಣ ಲಕ್ಷಣ ಕಂಡು ಬಂದಿರುವುದರಿಂದ ಆತನಿಗೆ ಕರೊನಾ ವೈರಸ್ ಕಾಯಿಲೆ ಇದೆಯಾ ಇಲ್ಲವಾ ಎಂಬ ಬಗ್ಗೆ ಪರೀಕ್ಷೆ ಮಾಡಲು ಬೆಂಗಳೂರಿಗೆ ನಿನ್ನೆಯ ದಿನ ರಕ್ತದ ಮಾದರಿ ಕಳುಹಿಸಿ ಕೊಡಲಾಗಿದೆ.


ಮತ್ತೊಂದು ಪ್ರಕರಣ ತೋರಣಗಲ್ಲಿನ ಜಿಂದಾಲ್ ಪ್ರದೇಶದಿಂದ ವರದಿಯಾಗಿದ್ದು, ಆ ವ್ಯಕ್ತಿಯ ರಕ್ತದ ಮಾದರಿಯನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಖಚಿತಪಡಿಸಿವೆ.

ಕೋಟ್
ಕರೊನಾ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಹೊರಗಿಂದ ಬಂದಂತಹ ವ್ಯಕ್ತಿಗಳಿಗೆ ಇರಬಹುದು ಎಂದು ಪರೀಕ್ಷೆ ಮಾಡಲಾಗಿದೆ. ನಮ್ಮ ಜನರಲ್ಲಿ ಕರೊನಾ ವೈರಸ್ ಬಗ್ಗೆ ಯಾವುದೇ ಗುಣ ಲಕ್ಷಣ ಕಂಡು‌ಬಂದಿಲ್ಲ. ಜನರು ಯಾವುದೇ ಕಾರಣಕ್ಕೆ ವದಂತಿ ಸುದ್ದಿಗಳಿಗೆ ಕಿವಿಗೊಡಬೇಡಿ.ಇಲ್ಲಿ ಸಕಾಲಕ್ಕೆ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಕಲ‌ ಸಿದ್ದತೆ ಮಾಡಿಕೊಂಡಿದೆ.
ಎಸ್.ಎಸ್.ನಕುಲ್ ಡಿಸಿ ಬಳ್ಳಾರಿ