ನ್ಯೂಸ್

ಗಡಿ ದಾಟಲು ಪರದಾಡಿದ ನವದಂಪತಿ

ಕಾರವಾರ: ನವ ದಂಪತಿ ಗೋವಾ ಗಡಿ ದಾಟಲು ಸಂಕಷ್ಟ ಅನುಭವಿಸಿದ ಘಟನೆ ಶುಕ್ರವಾರ ನಡೆದಿದೆ. ಮುಂಡಗೋಡಿನ ಕಿನ್ನಿ ಓಣಿಯ ಯುವತಿಯ ವಿವಾಹ ಗೋವಾ ಮೂಲದ ಯುವಕನ ಜತೆ ಗುರುವಾರ ಮುಂಡಗೋಡಿನಲ್ಲಿ ನೆರವೇರಿತ್ತು.

ವರನ ಕಡೆಯವರು ಸೇವಾ ಸಿಂಧು ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸಿ ಮುಂಡಗೋಡ ತಹಸೀಲ್ದಾರ್​ರ ಅನುಮತಿ ಪಡೆದು ಮದುವೆಗೆ ಬಂದಿದ್ದರು. ಆದರೆ, ವಾಪಸ್ ತೆರಳಲು ಪಾಸ್ ಸಿಗದೆ ತೊಂದರೆಗೆ ಒಳಗಾಗಿದ್ದರು.

ಶುಕ್ರವಾರ ಮಾಜಾಳಿಯ ಚೆಕ್​ಫೋಸ್ಟ್​ನಲ್ಲಿ ನಾಲ್ಕೈದು ತಾಸು ನವ ದಂಪತಿ ತಮ್ಮ ಮದುವೆಯ ವಸ್ತ್ರದಲ್ಲೇ ಹೆದ್ದಾರಿ ಪಕ್ಕ ಕಾದು ಕುಳಿತುಕೊಳ್ಳುವಂತಾಯಿತು. ಶುಕ್ರವಾರ ಬೆಳಗ್ಗೆ 11 ನಂತರ ಗೋವಾ ಪ್ರವೇಶಕ್ಕೆ ಅನುಮತಿ ದೊರೆಯಿತು.