ಬೆಂಗಳೂರು: ಮಧ್ಯಮ ವರ್ಗದ ಗೂಡ್ಸ್ ವಾಹನಗಳಿಗೆ ಏಕ ಕಾಲಿಕ ತೆರಿಗೆ (ಲ್ೈ ಟೈಮ್ ಟ್ಯಾಕ್ಸ್) ವಿಧಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ೆಡರೇಶನ್ ಆ್ ಕರ್ನಾಟಕ ಲಾರಿ ಓನರ್ಸ್ ಮತ್ತು ಏಜೆಂಟ್ ಅಸೋಸಿಯೇಷನ್ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಗ್ಯಾರಂಟಿ ಯೊಜನೆಗಳ ಹೊರೆ ನೀಗಿಸುವ ಆತುರದಲ್ಲಿ ರಾಜ್ಯ ಸರ್ಕಾರ ನಾನಾ ಹೊರೆಯನ್ನು ರಾಜ್ಯದ ಜನರಿಗೆ ಹೇರುತ್ತಿದೆ. ವಾಹನಗಳಿಗೆ ಲ್ೈ ಟೈಂ ಟ್ಯಾಕ್ಸ್ ಪಾವತಿಗೆ ಸರ್ಕಾರ ಆದೇಶ ಹೊರಡಿಸಿದ್ದು, ಗೂಡ್ಸ್ ವಾಹನ ಮಾಲೀಕರಿಗೆ ಈ ಕಾಯ್ದೆ ಭಾರೀ ಹೊಡೆತ ಬೀಳಲಿದೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಗೂಡ್ಸ್ ವಾಹನದ ಮಾಲೀಕರು ಸಿಡಿದೆದ್ದಿದ್ದಾರೆ. ಶಾಂತಿನಗರ ರಸ್ತೆಯುದ್ದಕ್ಕೂ ೨೫೦ಕ್ಕೂ ಹೆಚ್ಚು ಗೂಡ್ಸ್ ವಾಹನ ನಿಲ್ಲಿಸಿ ಶಾಂತಿನಗರದಲ್ಲಿನ ಸಾರಿಗೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು.
೨೫೦ ಕ್ಕೂ ಹೆಚ್ಚು ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿ ಶಾಂತಿನಗರ ಬಸ್ ನಿಲ್ದಾಣದ ಬಳಿಯ ರೋಡ್ ಬ್ಲಾಕ್ ಮಾಡಲಾಗಿತ್ತು. ಒಂದು ವೇಳೆ ಸರ್ಕಾರ ಈ ಆದೇಶ ಹಿಂಪಡೆಯದೇ ಇದ್ದರೆ ಸೆ.೧ ರಿಂದ ಬೆಂಗಳೂರಿನಾದ್ಯಂತ ಎರಡೂವರೆ ಸಾವಿರ ಗೂಡ್ಸ್ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಲಾರಿ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.
ರಾಜ್ಯಾದ್ಯಂತ ಹೆದ್ದಾರಿ ಬಂದ್ ಮಾಡುತ್ತೇವೆ:
ಈ ವೇಳೆ ಲಾರಿ ಅಸೋಸಿಯೇಷನ್ ಅಧ್ಯಕ್ಷ ಶಣ್ಮುಗಪ್ಪ ಮಾತನಾಡಿ, ಇವತ್ತು ಟ್ಯಾಕ್ಸ್ ಕಟ್ಟಲು ಕೊನೆಯ ದಿನವಾಗಿತ್ತು. ಲ್ೈ ಟೈಮ್ ಟ್ಯಾಕ್ಸ್ ಕಟ್ಟಬೇಕು ಅಂತ ತಿಂಗಳ ಹಿಂದೆ ಸರ್ಕಾರ ಹೇಳಿದೆ. ೨ ಸಾವಿರದಿಂದ ಲ್ೈ ಟ್ಯಾಕ್ಸ್ ೭೦ ಸಾವಿರ ರೂ.ಮಾಡಿದ್ದಾರೆ. ರಾಜ್ಯಾದ್ಯಂತ ೨೮ ಸಾವಿರ ಲಾರಿಗಳಿವೆ. ಬೆಂಗಳೂರು ನಗರದಲ್ಲೆ ೧೩ ಸಾವಿರ ಲಾರಿಗಳಿವೆ. ಲ್ೈ ಟ್ಯಾಕ್ಸ್ ಕಟ್ಟಲು ಆಗಲ್ಲ. ಒಂದು ವಾಹನಕ್ಕೆ ವರ್ಷಕ್ಕೆ ೮೦ ಸಾವಿರ ಕಟ್ಟಿ ಅಂದರೆ ಹೇಗೆ? ಬೇರೆ ಯಾವ ರಾಜ್ಯದಲ್ಲಿ ಇಲ್ಲದ್ದು ನಮ್ಮ ರಾಜ್ಯದಲ್ಲಿ ಏಕೆ? ಎಂದು ಪ್ರಶ್ನಿಸಿದರು.
ನಾವು ಟ್ಯಾಕ್ಸ್ ಕಟ್ಟಲು ಸಾಧ್ಯವಿಲ್ಲ. ಶುಕ್ರವಾರ ರಾಜ್ಯಾದ್ಯಂತ ಹೆದ್ದಾರಿ ಬಂದ್ ಮಾಡುತ್ತೇವೆ. ಕಾನೂನು ಸುವ್ಯವಸ್ಥೆಗೆ ತೊಂದರೆ ಆದರೆ ನಾವು ಹೊಣೆ ಅಲ್ಲ. ೪೨೫ ಕೋಟಿ ರೂ.ವನ್ನು ಸರ್ಕಾರ ನಮ್ಮ ಮೇಲೆ ಹೊರೆ ಹಾಕಿದೆ. ಟ್ಯಾಕ್ಸ್ ಫುಲ್ ಮಾಡಿದರೆ ಸರ್ಕಾರಕ್ಕೆ ೪ ಸಾವಿರ ಟ್ಯಾಕ್ಸ್ ಹೋಗುತ್ತದೆ. ಸರ್ಕಾರ ಈ ಬಗ್ಗೆ ಮಾತುಕತೆ ಮಾಡಬೇಕು. ಇವತ್ತು ಟ್ಯಾಕ್ಸ್ ಕಟ್ಟಲು ಕೊನೆ ದಿನ ನಾವು ಒಂದು ಇಂಚು ಗಾಡಿ ಅಲುಗಾಡಿಸಿದರು ಟ್ಯಾಕ್ಸ್ ಬೀಳುತ್ತೆ. ಹಾಗಾಗಿ ಎಲ್ಲ ಲಾರಿಗಳನ್ನು ಹೆದ್ದಾರಿಗೆ ತಂದು ಬಂದ್ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆ ಜಾರಿ ನೆಪದಲ್ಲಿ ನಮಗೆ ಬರೆ ಹಾಕುತ್ತಿದ್ದಾರೆ. ಇದರಿಂದ ವಾಹನಗಳ ಮಾಲೀಕರು ಕಂಗಾಲಾಗಿದ್ದಾರೆ. ಮೂರು-ನಾಲ್ಕು ವಾಹನಗಳನ್ನು ಹೊಂದಿರುವ ಮಾಲೀಕರಿಗೆ ಒಂದೇ ಬಾರಿ ದೊಡ್ಡ ಮೊತ್ತದ ತೆರಿಗೆ ಕಟ್ಟುವುದುದು ಕಷ್ಟವಾಗಿದೆ. ಇದು ಜನ ವಿರೋಧಿಯಾದ ಸರ್ಕಾರ. ಅಗತ್ಯ ಬಿದ್ದರೆ ಶುಕ್ರವಾರ ರಾಜ್ಯಾದ್ಯಂತ ಹೆದ್ದಾರಿ ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿದರು.
ಹೊರೆಯಾದ ಟ್ಯಾಕ್ಸ್:
ಜುಲೈ ೨೮ರಂದು ಗೆಜೆಟ್ ಅಧಿಸೂಚನೆ ಹೊರಡಿಸಿರುವ ಸರ್ಕಾರ ಆ.೧ರಿಂದಲೇ ಲ್ೈ ಟೈಮ್ ರೋಡ್ ಟ್ಯಾಕ್ಸ್ ಕಾಯ್ದೆ ಜಾರಿಗೊಳಿಸಿದೆ. ಈ ಹಿಂದೆ ಹಳದಿ ಫಲಕದ ಎಲ್ಜಿವಿ, ಎಂಜಿವಿ ವಾಹನಗಳ ಮಾಲೀಕರು ಮೂರು ತಿಂಗಳಿಗೊಮ್ಮೆ ೨,೦೦೦ ರೂ. ಟ್ಯಾಕ್ಸ್ ಕಟ್ಟುತ್ತಿದ್ದರು. ಆದೆರೆ ಈಗ ಈ ಕಾಯ್ದೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಕಳೆದ ಬಜೆಟ್ ಅಧಿವೇಶನದಲ್ಲಿ ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ ತಿದ್ದುಪಡಿ ಮಾಡಲಾಗಿತ್ತು. ಅದರಂತೆ ಈ ಕಾಯ್ದೆಯನ್ನು ಜಾರಿ ಮಾಡಲಾಗಿದೆ. ತ್ರೈಮಾಸಿಕ ತೆರಿಗೆ ಪಾವತಿ ಬದಲಾಗಿ ವಾಹನ ನೊಂದಣಿ ವೇಳೆ ಲ್ೈಟೈಂ (ಏಕ ಕಾಲಿಕ) ಪಾವತಿ ಪಡೆಯಲು ಸರ್ಕಾರ ಆದೇಶ ನೀಡಿದೆ. ಇದರಿಂದ ವಾಹನಗಳ ಮಾಲೀಕರು ಕಂಗಾಲಾಗಿದ್ದಾರೆ. ಮೂರು-ನಾಲ್ಕು ವಾಹನಗಳನ್ನು ಹೊಂದಿರುವ ಮಾಲೀಕರಿಗೆ ಒಂದೇ ಬಾರಿ ಭಾರೀ ಮೊತ್ತದ ಟ್ಯಾಕ್ಸ್ ಕಟ್ಟುವುದು ಕಷ್ಟವಾಗಿದೆ. ಹೀಗಾಗಿ ಸರ್ಕಾರದ ಆದೇಶದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.