ನ್ಯೂಸ್

ಗಂಗಾರಪುರದಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ / ಕನ್ನಡದಲ್ಲಿ ಹಲವು ವಿಶೇಷತೆಗಳನ್ನು ಕಾಣಬಹುದಾಗಿದೆ / ಎಂ.ರಾಮಮೂರ್ತಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಕರ್ನಾಟಕದ ಬಹು ಜನರ ಮಾತೃಭಾಷೆ ಕನ್ನಡವೇ ಆದರೂ ಅದರಲ್ಲಿ ಹಲವು ವಿಶೇಷತೆಗಳನ್ನು ಕಾಣಬಹುದು. ಬೆಂಗಳೂರಿನ ಕಂಗ್ಲೀಷ್ ಕನ್ನಡ, ಮೈಸೂರಿನ ಮೆಲುಧನಿ ಕನ್ನಡ, ದಾರವಾಡದ ಗಂಡು ಕನ್ನಡ, ದಕ್ಷಿಣದ ಗ್ರಾಂಥಿಕ ಕನ್ನಡ, ಕಾಸರಗೂಡಿನ ಮಲೆಯಾಳಮ್ ಕನ್ನಡ, ಕಲ್ಯಾಣ ಕರ್ನಾಟಕದ ಉರ್ದು ಮಿಶ್ರಿತ ಕನ್ನಡ, ಕರಾವಳಿಯ ಕುಂದಗನ್ನಡ ಮುಂತಾದ ವಿಶೇಷಗಳನ್ನು ರಾಜ್ಯದಲ್ಲಿ ಕನ್ನಡ ಭಾಷೆಯಲ್ಲಿ ಕಾಣಬಹುದಾಗಿದೆ ಎಂದು ಕನ್ನಡ ಹೋರಾಟಗಾರರಾದ ಎಂ. ರಾಮಮೂರ್ತಿ ತಿಳಿಸಿದರು.

ಕೋಲಾರ ತಾಲ್ಲೂಕು ವಕ್ಕಲೇರಿ ಹೋಬಳಿಯ ಗಂಗಾಪುರದಲ್ಲಿ ಭುವನೇಶ್ವರಿ ಕನ್ನಡ ಯುವಕರ ಸಂಘ ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕನ್ನಡ ಭಾಷೆಯ ಉಳಿವಿಗೆ ಮತ್ತು ಬೆಳವಣಿಗೆಗೆ ಭಾಷಾಭಿಮಾನ, ಭಾಷೆಯ ಬಗ್ಗೆ ಅಪಾರವಾದ ಜ್ಞಾನ, ಭಾಷೆಯನ್ನು ಶ್ರೀಮಂತಗೊಳಿಸುವ ಮತ್ತು ಮುನ್ನಡೆವ ಇಚ್ಚಾ ಶಕ್ತಿ ಬೇಕು. ಅನ್ಯಭಾಷಿಗರಿಗೆ ಕನ್ನಡ ಕಲಿಸುವ ಕೆಲಸ ಆಗಬೇಕು ಎಂದರು.

ಕನ್ನಡ ಶಿಕ್ಷಕ ಅನೀಫ್ ಸಾಬ್ ಮಾತನಾಡಿ, ಮಗು ಭಾಷೆಯನ್ನು ಅನುಕರಣೆಯ ಮೂಲಕ ಕಲಿಯುತ್ತದೆ. ಆದುದರಿಂದ ಮಗುವಿಗೆ ಮೊದಲು ಮಾತೃಭಾಷೆಯ ಮೂಲಕ ಶಿಕ್ಷಣ ಕೊಡಬೇಕು. ಅಗತ್ಯವಿದ್ದರೆ ಪರಭಾಷೆಯನ್ನು ಕಲಿಸಬೇಕು. ಭಾಷೆ ಮಕ್ಕಳ ಸರ್ವಾಂಗೀಣ ಸಾಧನೆಯಾಗಬೇಕೆಂದರು.

೧೯೫೦ ರಲ್ಲಿ ಭಾರತವು ಗಣರಾಜ್ಯವಾಗಿ ನಂತರ ಭಾರತದ ವಿವಿಧ ಪ್ರಾಂತ್ಯಗಳು ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪುಗೊಂಡವು. ಮದ್ರಾಸ್, ಮುಂಬಯಿ ಹೈದರಾಬಾದ್. ನಲ್ಲಿಯ ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ ೧೯೫೬ ನಂ.೧ ರಂದು ಏಕೀಕೃತ ಕನ್ನಡ ನಾಡು ಮೈಸೂರು ರಾಜ್ಯ ಎಂಬ ಅಭಿದಾನದೊಂದಿಗೆ ಉದಯವಾಯಿತು ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀನಿವಾಸ್ ಮಾಜಿ ಸದಸ್ಯರಾದ ಮಾರ್ಕಂಡಪ್ಪ, ಶಿಕ್ಷಕರಾದ ಗಾಯತ್ರಿ, ಲಕ್ಷಿö್ಮÃ, ಭುವನೇಶ್ವರಿ ಕನ್ನಡ ಯುವಕರ ಸಂಘದ ಪಧಾದಿಕಾರಿಗಳು ಉಪಸ್ಥಿತರಿದ್ದರು.

ಚಿತ್ರ ೧೦ ಕೆ.ಎಲ್.ಆರ್. ೦೧ : ಗಂಗಾಪುರದಲ್ಲಿ ಕನ್ನಡ ಭುವನೇಶ್ವರಿ ಯುವಕರ ಸಂಘ ಏರ್ಪಡಿಸಲಾಗಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡಾಂಭೆಗೆ ಪುಷ್ಪನಮನ ಸಲ್ಲಿಸುತ್ತಿರುವುದು.