ನ್ಯೂಸ್

ಖಾಸಗಿ ಫೈನಾನ್ಸ್ಗಳ ಅಟ್ಟಹಾಸವನ್ನು ಜಿಲ್ಲಾಡಳಿತ ಮಟ್ಟ ಹಾಕಬೇಕು/ ಡಿ.ಸಿ.ಸಿ.ಬ್ಯಾಂಕ್ ಮೂಲಕ ಸ್ತಿçÃಶಕ್ತಿ ಸಂಘ, ರೈತರಿಂದ ಹಾಗೂ ಬೀದಿ ಬದಿಯ ವ್ಯಾಪಾರಸ್ಥರು ಮತ್ತೆ ಸಾಲ ಸಿಗುವಂತೆ ಮಾಡಬೇಕೆಂದು ಸಾರ್ವಜನಿಕರ ಒತ್ತಾಯ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ಗಳ ಅಟ್ಟಹಾಸ ಹೆಚ್ಚಾಗಿದೆ. ಇದರಿಂದ ಭಾನುವಾರ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ವರ್ಷ ಪ್ರಥಮ ಬಾರಿಗೆ ಮೈಕ್ರೋ ಫೈನಾನ್ಸ್, ಖಾಸಗಿ ಲೇವಾದೇವಿಗಳ ಅಡಕತ್ತರಿಯಲ್ಲಿ ಸಿಕ್ಕಿ ಆತ್ಮಹತ್ಯೆಗೆ ಶರಣಾದ ಏಕೈಕ ವ್ಯಕ್ತಿಯಾಗಿದ್ದಾನೆ.

ರೈತರು ಬೆಳೆ ಸಾಲ, ಕೈಸಾಲ ಸೇರಿದಂತೆ ವಿವಿಧ ಖಾಸಗಿ ಲೇವಾದೇವಿ ಕಂಪನಿಗಳಲ್ಲಿ ಸಾಲ ಮಾಡಿ ಬೆಳೆ ಕೈಕೊಟ್ಟ ಹಿನ್ನಲೆಯಲ್ಲಿ ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ವ್ಯಾಪಾರಿಯೊಬ್ಬ ತನ್ನ ವ್ಯಾಪಾರದಲ್ಲಿ ನಷ್ಟ ಅನುಭವಿಸಿ ಖಾಸಗಿ ಫೈನಾನ್ಸ್ಗಳಿಂದ ಪಡೆದಿದ್ದ ಸಾಲವನ್ನು ಮರುಪಾವತಿ ಮಾಡಲಾಗದೆ ಕೋಲಾರ ತಾಲ್ಲೂಕಿನ ಚಿಟ್ನಹಳ್ಳಿ ಗ್ರಾಮದ ನಾಗರಾಜ್ ಎಂಬ ವ್ಯಕ್ತಿ ಭಾನುವಾರ ಬೆಳ್ಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಳೆದ ೦೮ ವರ್ಷಗಳಿಂದ ಡಿ.ಸಿ.ಸಿ.ಬ್ಯಾಂಕ್ ಮೂಲಕ ಸ್ತಿçÃಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿ ಸಾಲ ಹಾಗೂ ರೈತರಿಗೆ ೩ ಲಕ್ಷದ ತನಕ ಶೂನ್ಯ ಬಡ್ಡಿಯಲ್ಲಿ ಸಾಲ ಸೇರಿದಂತೆ ಬೀದಿ ಬದಿ ವ್ಯಾಪಾರಸ್ಥರಿಗೂ ಕೋಲಾರ ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಲ್ಲಿ ಸಾಲ ನೀಡಿವ ಯೋಜನೆಯನ್ನು ಜಾರಿಗೆ ತರಲಾಯಿತು.

ಇದರಿಂದ ಎರಡೂ ಜಿಲ್ಲೆಗಳಲ್ಲಿ ಕೋಟ್ಯಾಂತರ ರೂ.ಗಳ ಸಾಲವನ್ನು ನೀಡಲಾಯಿತು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭಗಳಲ್ಲಿ ಡಿ.ಸಿ.ಸಿ.ಬ್ಯಾಂಕ್ ಸಾಲವನ್ನು ಬೇರೆ ಬೇರೆ ರೀತಿಯಲ್ಲಿ ರಾಜಕೀಯ ಪಕ್ಷಗಳ ಅರ್ಥೈಸಿಕೊಂಡು ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡು ಸಾಲ ಮನ್ನಾ ಮಾಡುವ ಘೋಷಣೆಗಳನ್ನು ಮಾಡಲಾಯಿತು. ಇದರಿಂದ ಬ್ಯಾಂಕಿಗೆ ಸಾಲ ಪಡೆದವರಿಂದ ಮರುಪಾವತಿಯಾಗದೆ ಹೊಸ ಸಾಲ ನೀಡಲು ತೊಂದರೆಯಾಯಿತು.

ಸ್ತಿçÃಶಕ್ತಿ ಸಂಘಗಳು ಸೇರಿದಂತೆ ಶೂನ್ಯ ಬಡ್ಡಿಯಿಂದ ಸಾಲ ಪಡೆದ ರೈತರು ಹಾಗೂ ಬೀದಿ ಬದಿ ವ್ಯಾಪಾರಸ್ಥರು ಪಡೆದಿದ್ದ ಸಾಲ ಮರುಪಾವತಿ ಮಾಡಲು ಮುಂದಾಗದ ಕಾರಣ ಹೊಸ ಸಾಲ ನೀಡಲು ಬ್ಯಾಂಕಿನಿAದ ಹಣದ ಅಭಾವವೂ ಉಂಟಾಯಿತು. ಡಿ.ಸಿ.ಸಿ.ಬ್ಯಾಂಕ್ ಆಡಳಿತ ಮಂಡಳಿಗೆ ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಯಲಿಲ್ಲ.

ಡಿ.ಸಿ.ಸಿ.ಬ್ಯಾಂಕ್‌ನಿAದ ಸಾಲ ಸಿಗದ ಕಾರಣ ಮೈಕ್ರೋ ಫೈನಾನ್ಸ್, ಖಾಸಗಿ ಫೈನಾನ್ಸ್ಗಳು ಸೇರಿದಂತೆ ವಿವಿಧ ಫೈನಾನ್ಸ್ಗಳಲ್ಲಿ ಸಾಲ ಪಡೆಯಲು ಸಾರ್ವಜನಿಕರು ಮುಂದಾದರು. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಫೈನಾನ್ಸ್ಗಳವರು ಯಾವುದೇ ದಾಖಲೆಗಳು ಇಲ್ಲದೆ ಲಕ್ಷ ಲಕ್ಷ ರೂ.ಗಳನ್ನು ಸಾಲ ನೀಡಿ, ಬಡವರ ರಕ್ತವನ್ನು ಹೀರುವ ಕೆಲಸ ಮಾಡುತ್ತಿದ್ದಾರೆ.

ಕರ್ನಾಟಕವಲ್ಲದೆ ಪಕ್ಕದ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಂದ ಖಾಸಗಿ ಫೈನಾನ್ಸ್ಗಳವರು ಕೋಲಾರ ಜಿಲ್ಲೆಗೆ ಲಗ್ಗೆ ಹಾಕಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಡವರನ್ನೇ ಟಾರ್ಗೆಟ್ ಮಾಡಿಕೊಂಡು ಅವರ ಮನೆಬಾಗಿಲಿಗೆ ಹೋಗಿ ಸಾಲ ನೀಡುವಂತಹ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಮಧ್ಯವರ್ತಿಗಳನ್ನು ನೇಮಕ ಮಾಡಿಕೊಂಡಿದ್ದಾರೆ.

ಊರಿಗೆ ಒಬ್ಬರನ್ನು ಅಥವಾ ಪಂಚಾಯ್ತಿಗೆ ಒಬ್ಬರನ್ನು ಮಧ್ಯವರ್ತಿಗಳನ್ನಾಗಿ ನೇಮಿಸಿಕೊಂಡು ಬಡವರನ್ನೇ ಟಾರ್ಗೆಟ್ ಮಾಡಿಕೊಂಡು ಹಣದ ಅವಶ್ಯಕಗೆ ಇರುವವರನ್ನು ಮಧ್ಯವರ್ತಿಗಳ ಮೂಲಕ ಪರಿಚಯಿಸಿ ಅವರಿಗೆ ಸಾಲ ನೀಡುವ ಕೆಲಸ ಮಾಡುತ್ತಿದ್ದಾರೆ. ಮಧ್ಯವರ್ತಿಗಳಿಗೆ ಸಾಲ ಪಡೆದವರಿಂದಲೇ ಕಮೀಷನ್ ನೀಡುವ ಕೆಲಸ ಮಾಡುತ್ತಿದ್ದಾರೆ.

ಸಾಲ ವಸೂಲಾತಿಗೆ ಗೂಂಡಾಗಳನ್ನು ರೀತಿಯಲ್ಲಿರುವವರನ್ನು ನೆಮಕ ಮಾಡಿ ತಿಂಗಳ ಅಥವಾ ವಾರಕ್ಕೊಮ್ಮೆ ಮರುಪಾವತಿಗೆ ದಿನಾಂಕ ನೀಡುತಾರೆ. ಆ ದಿನದಿಂದು ಗೂಂಡಾಗಳ ರೀತಿಯಲ್ಲಿರುವ ವ್ಯಕ್ತಿಗಳನ್ನು ಸಾಲ ವಸೂಲಾರ್ತಿಗೆ ಅವರ ಮನೆಯ ಮುಂದೆ ಬೆಳಗಾಗುವ ಒಳಗಾಗಿ ನಿಲ್ಲುಸುತ್ತಾರೆ.

ಮಾನ ಮರ್ಯಾದೆಗೆ ಅಂಜಿ ಹಣ ಇಲ್ಲದಿದ್ದರೂ ಮೀಟರ್ ಬಡ್ಡಿಗೆ ಹೋಗಿ ಹಣ ತಂದು ಸಾಲ ಕಟ್ಟುತ್ತಿದ್ದಾರೆ. ಇದರಿಂದ ಬಡ್ಡಿಗೆ ಬಡ್ಡಿ ಮತ್ತು ಚಕ್ರ ಬಡ್ಡಿಗಳಿಗೆ ಸಿಲುಕಿ ಹತ್ತಾರು ಜಾಗಗಳಲ್ಲಿ ಸಾಲ ಮಾಡುವಂತಹ ಪರಿಸ್ಥಿತಿಗೆ ತಲುಪಿದ್ದಾರೆ.

ಜಿಲ್ಲಾಡಳಿತ ಈಗಲೇ ಎಚ್ಚೆತ್ತುಕೊಂಡು ಖಾಸಗಿ ಫೈನಾನ್ಸ್ಗಳವರನ್ನು ಹತೋಟಿಗೆ ತೆಗೆದುಕೊಂಡು ಬಡ್ಡಿ ಚಕ್ರಬಡ್ಡಿಯನ್ನು ಮನ್ನಾ ಮಾಡಿ ಅಸಲನ್ನು ಕಟ್ಟುವಂತೆ ಮಾಡಿ ಮತ್ತೊಂದು ಬಾರಿ ಖಾಸಗಿ ಫೈನಾನ್ಸ್ಗಳಿಗೆ ಹೋಗದಂತೆ ಡಿ.ಸಿ.ಸಿ.ಬ್ಯಾಂಕ್ ಮೂಲಕ ಅಥವಾ ರಾಷ್ಟಿçÃಕೃತ ಬ್ಯಾಂಕ್‌ಗಳಿAದ ಸಾಲ ಸಿಗುವಂತಹ ವ್ಯವಸ್ಥೆ ಜಿಲ್ಲಾಡಳಿತ ಮಾಡಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಚಿತ್ರ ೦೩ ಕೆ.ಎಲ್.ಆರ್. ೦೧ : ಜಿಲ್ಲಾಡಳಿತ ಭವನ