ನ್ಯೂಸ್

ಖಾಸಗಿ ಆಂಬುಲೆನ್ಸ್ಗಳ ಚಾಲಕನಿಂದ ಪಿ.ಜಿ ವೈದ್ಯೆಗೆ ಕುಡಿದ ಮತ್ತಿನಲ್ಲಿ ತನ್ನ ಖಾಸಗಿ ಅಂಗಾAಗಗಳ ಪ್ರದರ್ಶನ/ಕ್ರಮಕ್ಕೆ ಪಿ.ಜಿ ವೈದ್ಯರ ಒತ್ತಾಯ/ದುರು ನೀಡಲು ಮಿನಾವೇಶ/ ಎಸ್ ಎನ್ ಆರ್ ಆಸ್ಪತ್ರೆಯಲ್ಲಿ ರಾತ್ರಿ ಪಾಳಯದಲ್ಲಿ ಕೆಲಸ ಮಾಡುವ ಮಹಿಳಾ ವೈದ್ಯರಿಗೆ, ಸಿಬ್ಬಂದಿಗೆ ರಕ್ಷಣೆ ಇಲ್ಲ.

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ನಗರದ ಎಸ್ ಎನ್ ಆರ್ ಆಸ್ಪತ್ರೆಯಲ್ಲಿ ರಾತ್ರಿ ಪಾಳಯದಲ್ಲಿ ಕೆಲಸ ಮಾಡುವ ಮಹಿಳಾ ವೈದ್ಯರಿಗೆ ಮತ್ತು ಸಿಬ್ಬಂದಿಗೆ ಇತ್ತೀಚಿನ ದಿನಗಳಲ್ಲಿ ಕಿರುಕುಳಗಳು ಹೆಚ್ಚಾಗಿದ್ದು ಆಸ್ಪತ್ರೆ ಮುಂಭಾಗದ ಖಾಸಗಿ ಆಂಬುಲೆನ್ಸ್ಗಳ ಚಾಲಕರು ರಾತ್ರಿ ವೇಳೆಯಲ್ಲಿ ಆಸ್ಪತ್ರೆಯ ಒಳಗಡೆ ಓಡಾಡಿಕೊಂಡು ಮಹಿಳಾ ವೈದ್ಯರು ಮತ್ತು ಸಿಬ್ಬಂದಿ ವಿರುದ್ದ ಅಸಭ್ಯ ವರ್ತನೆಗಳನ್ನು ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಭಾನುವಾರ ಮಧ್ಯರಾತ್ರಿ ಖಾಸಗಿ ಆಂಬುಲೆನ್ಸ್ ಚಾಲಕನೋರ್ವ ಕುಡಿದ ಮತ್ತಿನಲ್ಲಿ ಆರ್ ಎಲ್ ಜಾಲಪ್ಪ ಆಸ್ಪತ್ರೆಯ ಪಿ.ಜಿ ವೈದ್ಯೆಗೆ ತನ್ನ ಖಾಸಗಿ ಅಂಗಾAಗಗಳನ್ನು ತೋರಿಸುತ್ತಾ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ, ಈ ಚಾಲಕ ಇದೇ ಮೊದಲಲ್ಲ ಅನೇಕ ಭಾರಿ ಮಹಿಳಾ ವೈದ್ಯರು ಮಹಿಳಾ ಸಿಬ್ಬಂದಿಯ ವಿರುದ್ದ ಅಸಭ್ಯವಾಗಿ ವರ್ತಿಸಿರುವ ಸಾಕಷ್ಟು ಉದಾಹರಣೆಗಳಿವೆ ಎಂಬುದು ಅಲ್ಲಿನ ಸಿಬ್ಬಂದಿಯಿAದ ಕೇಳಿ ಬಂದಿದೆ.

ಇದಲ್ಲದೆ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಇರುವ ರೋಗಿಗಳ ಬಳಿ ಹೋಗಿ ರೋಗಿ ಮೃತಪಟ್ಟರೆ ಮೃತ ದೇಹವನ್ನು ಸಾಗಿಸಲು ನಮ್ಮ ಆಂಬುಲೆನ್ಸ್ ವಾಹನಕ್ಕೆ ನೀಡಬೇಕು ಎಂದು ರೋಗಿಗಳ ಸಂಬAಧಕರ ಬಳಿ ತಾಕೀತು ಮಾಡುತ್ತಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ.

ಸೋಮವಾರ ಬೆಳಿಗ್ಗೆ ಪಿ.ಜಿ ವೈದ್ಯರು ರಾತ್ರಿಯಾದ ಗಲಾಟೆಯ ಬಗ್ಗೆ ದೂರು ನೀಡುವಂತೆ ಆಡಳಿತ ಮಂಡಳಿಗೆ ಒತ್ತಾಯಪಡಿಸಿದ್ದಾರೆ, ಆಡಳಿತ ಮಂಡಳಿಯವರು ದೂರು ನೀಡದೆಯೇ ಮೀನಾಮೇಷ ಎಣಿಸಿಕೊಂಡು ಇದ್ದಾಗ ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ, ಪೊಲೀಸರು ಆಡಳಿತ ಮಂಡಳಿಯ ಸಿ.ಎಂ.ಓ ರವರನ್ನು ಭೇಟಿ ಮಾಡಿದಾಗ ಇಲ್ಲಿಯೇ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ, ಆದರೆ ಅದಕ್ಕೆ ಪಿ.ಜಿ ವೈದ್ಯರು ವಿರೋಧ ವ್ಯಕ್ತಪಡಿಸಿ ನಮ್ಮ ಮೆಡಿಕಲ್ ಕಾಲೇಜಿನ ಮೇಲಾಧಿಕಾರಿಗೆ ತಿಳಿಸಿ ಇನ್ನು ಮುಂದೆ ನಾವು ನಿಮ್ಮ ಆಸ್ಪತ್ರೆಗೆ ಬರುವುದಿಲ್ಲ. ನಮಗೆ ರಕ್ಷಣೆ ಇಲ್ಲ ಎಂದು ಅಸಹನೆ ವ್ಯಕ್ತಪಡಿಸಿದ್ದಾರೆ.

ಸೋಮವಾರ ಮಧ್ಯಾಹ್ನದ ನಂತರ ಸಿ.ಎಂ.ಓ ಅಧಿಕಾರಿ ನಗರ ಠಾಣೆಗೆ ಖಾಸಗಿ ಆಂಬುಲೆನ್ಸ್ ಚಾಲಕನ ವಿರುದ್ಧ ದೂರು ನೀಡಲು ಮುಂದಾದಾಗ ಪೋಲಿಸರು ದೂರನ್ನು ಬದಲಾಯಿಸಿಕೊಂಡು ಬನ್ನಿ ಎಂದಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿರುವುದರ ವಿರುದ್ಧ ಆಡಳಿತ ಮಂಡಳಿಯಿAದ ದೂರು ನೀಡಲಾಗುವುದು. ಮಹಿಳಾ ಠಾಣೆಗೆ ಅಸಭ್ಯ ವರ್ತನೆ ವಿರುದ್ಧ ನೀವೇ ದೂರು ನೀಡಬೇಕೆಂದು ಪಿಜಿ. ವೈದ್ಯೆಗೆ ತಿಳಿಸಿದ ಕಾರಣ ಆಕೆ ನಾನು ವಿದ್ಯಾರ್ಥಿನಿ ನನ್ನ ಭವಿಷ್ಯ ಹಾಳಾಗುತ್ತದೆ. ನಾನು ದೂರು ನೀಡುವುದಿಲ್ಲ. ನೀವೇ ಕ್ರಮ ಕೈಗೊಳ್ಳಬೇಕೆಂದು ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ದೂರು ನೀಡಲು ಮುಂದಾಗಿರುವ ಕಾರಣ ಖಾಸಗಿ ಅಂಬುಲೆನ್ಸ್ ಚಾಲಕ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಬಾಕ್ಸ್

ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ನಡೆದಿರುವ ಘಟನೆಯ ಬಗ್ಗೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಜಗದೀಶ್ ರನ್ನು ವಿಜಯವಾಣಿ ಸಂಪರ್ಕಿಸಿದಾಗ ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ, ವೈದ್ಯರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ನಮ್ಮ ಸಿ.ಎಂ.ಓ ದೂರು ನೀಡರಬಹುದು ಎಂದು ಜಾಣತನದಿಂದ ಜಾರಿಕೊಳ್ಳುತ್ತಿದ್ದಾರೆ.

ಕೋಟ್:

ಎಸ್ ಎನ್ ಆರ್ ಆಸ್ಪತ್ರೆಯ ಆವರಣ ಹಾಗು ಆಸ್ಪತ್ರೆಯ ಒಳಗೆ ಇತ್ತೀಚೆಗೆ ಕುಡುಕರ ಸಂಖ್ಯೆ ಹೆಚ್ಚಾಗಿದೆ, ಶುಶ್ರೋಷಕಿಯರು ಮತ್ತು ಮಹಿಳಾ ವೈದ್ಯೆಯರು ವಸತಿ ಗೃಹಗಳಿಂದ ರಾತ್ರಿ ವೇಳೆ ಆಸ್ಪತ್ರೆಗೆ ಬರಲು ಭಯದ ವಾತಾವರಣ ಉಂಟಾಗಿದೆ, ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿ ಇಲ್ಲ, ಹೊರಗಿನವರು ಆಸ್ಪತ್ರೆಯ ಒಳಗೆ ಬಂದು ಮಹಿಳಾ ವೈದ್ಯರು ಮತ್ತು ದಾದಿಯರ ವಿರುದ್ದ ಅಸಭ್ಯವಾಗಿ ವರ್ತನೆ ಮಾಡುವುದರ ಜೊತೆಗೆ ರೋಗಿಯ ಬಳಿಯಿರುವ ಆರೈಕೆಯ ಮಹಿಳೆಯರಿಗೂ ಕಿರುಕುಳ ನೀಡಲು ಮುಂದಾಗುತ್ತಿದ್ದಾರೆ, ರಾತ್ರಿಯಾದ ಕಾರಣ ಅವರನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ. ಆಸ್ಪತ್ರೆಗೆ ಜಗದೀಶ್ ಅವರು ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿ ಬಂದ ನಂತರ ಹೊಸ ಹೊಸ ಸಮಸ್ಯೆಗಳು ಉದ್ಭವಿಸುತ್ತಿದ್ದರೂ ಅವುಗಳ ಪರಿಹರಿಸುವ ಕೆಲಸಕ್ಕೆ ಅವರು ಮುಂದಾಗುತ್ತಿಲ್ಲ.

-ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ.

ಬಾಕ್ಸ್

ಖಾಸಗಿ ಆಂಬುಲೆನ್ಸ್ ಚಾಲಕ ಮಧ್ಯರಾತ್ರಿಯಲ್ಲಿ ಸಿಗರೇಟ್ ಸೇದುತ್ತಾ ಆಸ್ಪತ್ರೆಯ ಒಳಕ್ಕೆ ಪ್ರವೇಶ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದರೂ ಅದನ್ನು ಬಹಿರಂಗಪಡಿಸಲು ಆಡಳಿತ ಮಂಡಳಿ ನಿರಾಕರಿಸುತ್ತಿದೆ ಎನ್ನಲಾಗಿದ್ದು ಪೊಲೀಸರು ಸಮಗ್ರ ತನಿಖೆ ನಡೆಸಲು ಸಿದ್ದರಿದ್ದರು ಆಸ್ಪತ್ರೆಯ ಮೇಲಾಧಿಕಾರಿಗಳು ಆತನ ಭಯಕ್ಕೋ ಅಥವಾ ರಾಜಕೀಯ ಒತ್ತಡಗಳಿಗೆ ಹೆದರಿ ಮೌನಕ್ಕೆ ಶರಣಾಗಿದ್ದಾರೆ.

ಚಿತ್ರ ೨೨ ಕೆ.ಎಲ್.ಆರ್. ೦೧ : ಜಿಲ್ಲಾ ಎಸ್.ಎನ್.ಆರ್. ಆಸ್ಪತ್ರೆ ಭಾವಚಿತ್ರ