ಚಿತ್ರದುರ್ಗ:ನಿವೃತ್ತ ಶಿಕ್ಷಕಿಯಿಂದ ಡಿಸಿಆರ್‌ಜಿ ಮತ್ತು ಕಮ್ಯೂಟೇಷನ್ ಸಾಲ ಮೊತ್ತದ ಬಿಲ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹೊಸದುರ್ಗ ತಾಲೂಕು ಖಜಾನೆ ಇಬ್ಬರು ನೌಕರರು ಲೋಕಾಯುಕ್ತ ಪೊಲೀಸರ ಬಲೆಗೆ ಬುಧವಾರ ಬಿದ್ದಿದ್ದಾರೆ. ಖಜಾನೆಯ ಮುಖ್ಯಲೆಕ್ಕಿಗ ಗೋವಿಂದರಾಜು, ಪ್ರಥಮ ದರ್ಜೆ ಸಹಾಯಕಿ ಕೆ.ವರಲಕ್ಷ್ಮೀ ಅವರನ್ನು ಲೋಕಾಯುಕ್ತ ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸಿದ್ದಾರೆ. ಹೊಸದುರ್ಗದ ನಿವೃತ್ತ ಶಿಕ್ಷಕಿ ಎಂ.ಶಾರದಮ್ಮ ಅವರು ಬಿಲ್ ಮಾಡಿಕೊಡುವಂತೆ ಕೇಳಿದಾಗ ಅದೇನೋ ಕೊಟ್ಟು ಮಾಡಿಸಿಕೊಂಡು ಹೋಗಿ ಎಂಬಂಥ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ಕಚೇರಿಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.
---