ಬಾಗಲಕೋಟೆ: `ಬಸವಣ್ಣನವರಂತೆ ಹೋಗಿ ಹೊಳ್ಯಾಗ ಜೀಗಿರಿ' ಎಂದು ವಿವಾದಾತ್ಮ ಹೇಳಿಕೆ ನೀಡಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಮ್ಮ ಹೇಳಿಕೆ ಬಗ್ಗೆ ಯಾವುದೇ ವಿಷಾದವೂ ಇಲ್ಲ, ಕ್ಷಮೆಯನ್ನು ಕೇಳಲ್ಲ . ಬಸವಣ್ಣನ ಕೊನೆ ಏನಾಯಿತು ಎಂದು ವಿಜಯಪುರ, ಬಾಗಲಕೋಟೆ ಜನರಿಗೆ ಗೊತ್ತಿದೆ. ನನ್ನ ಟೀಕೆ ಮಾಡುವವರಿಗೆ ಏನು ಗೊತ್ತಿದೆ?.
ಈಗ ನನ್ನ ವಿರುದ್ಧ ಮಾತನಾಡುವ ಸ್ವಾಮೀಜಿಗಳು ಹಾಗೂ ಈಶ್ವರ ಖಂಡ್ರೆ ಅವರು ಬಸವಣ್ಣನಿಗೆ ಏನು ಮಾಡಿದ್ದಾರೆ ಎಂದು ಮರು ಸವಾಲ್ ಎಸೆದರು.
ಜಿಲ್ಲೆಯ ಬನಹಟ್ಟಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಯತ್ನಾಳ್, ಯಜ್ಞ-ಯಾಗಾದಿ ಒಂದು ಭಾಗ. ದೇಶಕ್ಕೆ ಒಳ್ಳೆಯದಾಗಲು ಹೋಮ-ಹವನ ಮಾಡುತ್ತೇವೆ. ಹಾಗೆಯೇ ಬಸವಣ್ಣನನ್ನು ಒಪು÷್ಪತ್ತೇವೆ. ಬಸವಣ್ಣ ಹೇಳಿದ ಹಾದಿಯಲ್ಲಿ ನಾವು ನಡೆಯುತ್ತೇವೆ ಎಂದರು.