ಶೃಂಗೇರಿ: ಕ್ರೀಡೆ ದೈಹಿಕ ಆರೋಗ್ಯ ವೃದ್ಧಿಗೆ ಸಹಕಾರಿ. ಒತ್ತಡದ ಜೀವನ ಶೈಲಿಯಿಂದ ಉಂಟಾಗುವ ಮಾನಸಿಕ ಸಮಸ್ಯೆಗೆ ಔಷಧ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ವರಲಕ್ಷ್ಮೀ ಹೇಳಿದರು. ತಾಲೂಕು ಮಟ್ಟದ ಬೋಧಕೇತರ ನೌಕರರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ನೌಕರರು ಕ್ರೀಡೆಯಲ್ಲಿ ಪಾಲ್ಗೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಕ್ರೀಡೆಯಿಂದ ಸಮಸ್ಯೆಯನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯ ಬೆಳೆಯುತ್ತದೆ ಎಂದರು. ಕ್ಷೇತ್ರ ಸಂಪನ್ಮೂಲ ಅಧಿಕಾರಿ ಬಿ.ಆರ್.ಗಂಗಾಧರಪ್ಪ ಮಾತನಾಡಿ, ಬೋಧಕೇತರ ನೌಕರರು ಒಗ್ಗಟ್ಟಾಗಿ ಶಿಕ್ಷಕ ಸಂಘದ ಸಹಕಾರ ಪಡೆದು ಗುರುಭವನದಲ್ಲಿ ಶಟಲ್ ಕೋರ್ಟ್ ಸಿದ್ಧಪಡಿಸಿಕೊಂಡಿದ್ದಾರೆ. ಕೇರಂ, ಚೆಸ್, ಹ್ಯಾಂಡ್‌ಬಾಲ್ ಒಳಾಂಗಣ ಕ್ರೀಡೆಯಾಗಿದ್ದು ಮಳೆಗಾಲದಲ್ಲೂ ಈ ಕ್ರೀಡೆ ಆಡಬಹುದಾಗಿದೆ ಎಂದರು. ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ಪ್ರಮುಖರಾದ ಗಣೇಶ್, ಸುಂದರೇಶ್, ಮಂಜುನಾಥ್, ರಾಜಾನಾಯ್ಕ ಇದ್ದರು.