ಹೋಬಳಿ ಮಟ್ಟದ ಕ್ರೀಡೆಕೂಟದಲ್ಲಿ ಭಾಗವಹಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಡಿಟಿಎಂಎನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳನ್ನು ಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು. ಚಂದ್ರಶೇಖರ್, ಶ್ರೀಶೈಲ, ಪಿ.ರವಿ, ಜೆ.ಸಿ.ನಟರಾಜ್, ಸಿ.ಟಿ.ಗುರುದತ್, ಸುಂದರೇಶ್, ಜ್ಞಾನಾನಂದ, ವಿಜಯಕುಮಾರ್, ಕೃಷ್ಣಮೂರ್ತಿ, ಸತೀಶ್, ಮುರಳಿಕೃಷ್ಣ, ಜರೀನಾ ಖಾನಮ್ ಇದ್ದರು. 
ನ್ಯೂಸ್

ಕ್ರೀಡೆಯಲ್ಲಿ ಡಿಟಿಎಂಎನ್ ವಿದ್ಯಾಸಂಸ್ಥೆಯ ಸಾಧನೆ

ಬೆಟ್ಟದಪುರ: ಬೆಟ್ಟದಪುರದ ಡಿಟಿಎಂಎನ್(ಡಿ.ತಮ್ಮಯ್ಯ ಸ್ಮಾರಕ ನವೋದಯ) ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ಹೋಬಳಿ ಮಟ್ಟದ ಕ್ರೀಡೆಕೂಟದಲ್ಲಿ ಭಾಗವಹಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸೋಮವಾರ ಸಂಸ್ಥೆ ವತಿಯಿಂದ ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು.

ಬಾಲಕರ ವಾಲಿಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ, ಬಾಲಕರ ಕಬ್ಬಡಿ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡು ಕ್ರೀಡಾಪಟುಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಥ್ಲೆಟಿಕ್‌ನಲ್ಲಿ ಬಾಲಕರ ವಿಭಾಗದಿಂದ ಕೆ.ವಿ.ಪ್ರೀತಮ್ ಎತ್ತರ ಜಿಗಿತ ಪ್ರಥಮ, ತ್ರಿವಿದ ಜಿಗಿತ ಪ್ರಥಮ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ದರ್ಶನ್‌ರಾಜ್ ಗುಂಡು ಎಸೆತ ಪ್ರಥಮ, ತಟ್ಟೆ ಎಸೆತ ಪ್ರಥಮ ಹಾಗೂ ಜಾವಲಿನ್ ಥ್ರೋ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಇಬ್ಬರು ಕೂಡ ವೈಯಕ್ತಿಕ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಶ್ರೀಶೈಲ, ಖಜಾಂಚಿ ಪಿ.ರವಿ, ಆಡಳಿತ ಅಧಿಕಾರಿ ಜೆ.ಸಿ.ನಟರಾಜ್, ನಿರ್ದೇಶಕರಾದ ಸಿ.ಟಿ.ಗುರುದತ್, ಸುಂದರೇಶ್, ಜ್ಞಾನಾನಂದ, ವಿಜಯಕುಮಾರ್, ಕೃಷ್ಣಮೂರ್ತಿ, ಪ್ರಾಂಶುಪಾಲ ಸತೀಶ್, ಮುಖ್ಯಶಿಕ್ಷಕರಾದ ಮುರಳಿಕೃಷ್ಣ, ಜರೀನಾ ಖಾನಮ್ ಸೇರಿದಂತೆ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.