ಹಲಗಾ ಪ್ರಾಥಮಿಕ ಶಾಲೆಗಳ ಕೇಂದ್ರಮಟ್ಟದ ಕ್ರೀಡಾಕೂಟ ಉದ್ಘಾಟಿಸಲಾಯಿತು. ಬಿಇಒ ಎಸ್​.ಪಿ.ದಾಸಪ್ಪನವರ, ಲಕ್ಷಿ$್ಮ ಗೆಜಪತಿ, ನಾಗರಾಜ ಮದಗೌಡ, ಗಣಪತಿ ಮರೀಹಾಳಕರ, ಭುಜಂಗ ಸಾಲಗುಡೆ, ಎಫ್​.ಎಸ್​.ಮುಲ್ಲಾ, ಸುನೀಲ ಕುಟ್ರೆ, ಬಸವರಾಜ ಸುಣಗಾರ, ಅನ್ವರ್​ ಲಂಗೋಟಿ ಇದ್ದರು. 
ನ್ಯೂಸ್

ಕ್ರೀಡೆಗಳಿಂದ ದೇಹ ಸದೃಢ

ಬೆಳಗಾವಿ: ಸೋಲು&ಗೆಲುವು ಮುಖ್ಯವಲ್ಲ. ಆಸಕ್ತಿ ವಹಿಸಿ ಆಟವಾಡುವುದರಿಂದ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ವೃದ್ಧಿಯಾಗಿ ಸದೃಢ ಆರೋಗ್ಯ ರೂಪುಗೊಳ್ಳುತ್ತದೆ ಎಂದು ಬಿಇಒ ಎಸ್​.ಪಿ.ದಾಸಪ್ಪನವರ ಹೇಳಿದರು.

ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹಲಗಾ ಕೇಂದ್ರ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದ ಅವರು, ಮಗುವಿನ ಬೌದ್ಧಿಕ ಬೆಳವಣಿಗೆ ಜತೆಗೆ ಭೌತಿಕ ಬೆಳವಣಿಗೆಯಾಗುವ ನಿಟ್ಟಿನಲ್ಲಿ ಕ್ರೀಡೆ, ಆಟೋಟಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಲಕ್ಷಿ$್ಮ ಗೆಜಪತಿ, ಎಸ್​ಡಿಎಂಸಿ ಅಧ್ಯ ನಾಗರಾಜ ಮದಗೌಡ ಅವರು ಸಂಯುಕ್ತವಾಗಿ ಸರಸ್ವತಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಗ್ರಾಪಂ ಮಾಜಿ ಅಧ್ಯ ಗಣಪತಿ ಮರೀಹಾಳಕರ, ಉಪಾಧ್ಯ ಭುಜಂಗ ಸಾಲಗುಡೆ, ಸಿಆರ್​ಪಿ ಎಫ್​.ಎಸ್​.ಮುಲ್ಲಾ, ಬಿಆರ್​ಪಿ ಸುನೀಲ ಕುಟ್ರೆ, ಬಸವರಾಜ ಸುಣಗಾರ, ತಾಲೂಕು ಶಿಕರ ಸೊಸೈಟಿ ಅಧ್ಯಕ್ಷ ಅನ್ವರ್​ ಲಂಗೋಟಿ, ಬಿ.ಎನ್.ಅಲಾಬಾದಿ, ಸಿ.ಬಿ.ನಾಯ್ಕರ ಇತರರಿದ್ದರು. ಶಿಕರಾದ ಉಮೇಶ ಹಿರೇಮಠ ಸ್ವಾಗತಿಸಿದರು. ಆರ್​.ಎಸ್​.ಭಜಂತ್ರಿ ನಿರೂಪಿಸಿದರು. ಪಿ.ಎನ್​.ಪಾಟೀಲ ವಂದಿಸಿದರು.