ತರೀಕೆರೆ: ತಾಲೂಕಿನ ಕುಂಟಿನಮಡು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ತಂಡ ವಿವಿಧ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ವಾಲಿಬಾಲ್, ಥ್ರೋ ಬಾಲ್, ುಟ್‌ಬಾಲ್, ಟೆನಿಕಾಯ್ಟ, ಎತ್ತರ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಜಾವಲಿನ್ ಥ್ರೋ, ವಾಕ್‌ರೇಸ್, 800 ಮೀ. ಹಾಗೂ 1,500 ಮೀ. ಓಟದಲ್ಲಿ ಪ್ರಥಮ, ಕಬಡ್ಡಿ, ಖೋಖೋ, ಟ್ರಪಲ್ ಜಂಪ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಉತ್ತಮ ನಿರ್ವಹಣೆ ತೋರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ಬಿ.ಮಮತಾ, ದೀಕ್ಷಿತಾ, ಬಿ.ನಯನಾ, ಆರ್.ಬಿ.ಪಲ್ಲವಿ, ಎಂ.ಎಸ್.ಲಕ್ಷ್ಮೀ, ನಯೋಮಿ, ಲಿಖಿತಾ, ಯಶೋಧಾ, ಕವಿತಾ ಬಾಯಿ ಅವರ ಸಾಧನೆಗೆ ಪ್ರಾಚಾರ್ಯ ಸಿದ್ದಪ್ಪ ಟಕ್ಕಳಕಿ ಹಾಗೂ ಕಾಲೇಜು ಮೇಲುಸ್ತುವಾರಿ ಸಮಿತಿ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.