ನ್ಯೂಸ್

ಕೋವಿಶೀಲ್ಡ್ ಲಸಿಕೆ ಪಡೆದ ಉಡುಪಿ ಡಿಸಿ,‌ ಜಿ.ಪಂ ಸಿಇಒ

ಉಡುಪಿ: ಜಿಲ್ಲೆಯಲ್ಲಿ ಎರಡನೇ ಹಂತದ ಕೋವಿಶಿಲ್ಡ್ ಲಸಿಕೆಗೆ ಸೋಮವಾರ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ಜಿ.ಜಗದೀಶ್,‌ ಜಿಲ್ಲಾ ಪಂಚಾಯಿತಿ‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ವೈ.ನವಿನ್ ಭಟ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ‌‌ ಕುಮಾರಚಂದ್ರ, ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಪೌರಾಯುಕ್ತ ಉದಯ ಶೆಟ್ಟಿ ಲಸಿಕೆ ಪಡೆದರು. ಎರಡನೇ ಹಂತದಲ್ಲಿ ಪೊಲೀಸ್, ಕಾಂದಾಯ, ಸ್ಥಳೀಯಡಳಿತ, ಪಂಚಾಯಿತಿ ರಾಜ್ ಇಂಜಿನಿಯರಿಂಗ್ ಇಲಾಖೆ ವಿಭಾಗದ 4040 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಸೋಮವಾರ ಮೊದಲ ದಿನ‌ 593 ಮಂದಿಗೆ ಲಸಿಕೆ ನೀಡಲಾಗುತ್ತದೆ ಎಂದು ಡಿಎಚ್ ಒ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ಪಡೆದ ಡಿಸಿ ಜಗದೀಶ್, ಜಿ.ಪಂ ಸಿಇಒ ನವೀನ್‌ಭಟ್,ಪೌರಾಯುಕ್ತ ಉದಯ ಶೆಟ್ಟಿ, ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರನ್ನು ಅರ್ದ ಗಂಟೆಗಳಕಾಲ ಆಸ್ಪತ್ರೆ ನಿಗಾ ಕೊಠಡಿಯಲ್ಲಿರಿಸಲಾಯಿತು.