ಬೆಂಗಳೂರು : ರಾಜಧಾನಿಯಲ್ಲಿ ಶನಿವಾರ 1,195 ಹೊಸ ಕೋವಿಡ್ ಪ್ರಕರಣ ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತ ಪ್ರಕರಣ ಸಂಖ್ಯೆ 3,56,440ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ 9 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 4 ಸಾವಿರ ಗಡಿ ಸಮೀಪಕ್ಕೆ ಧಾವಿಸಿದೆ.
ಇನ್ನು 771 ಮಂದಿ ಸೋಂಕು ಮುಕ್ತರಾಗಿದ್ದು, ಈವರೆಗೆ ಒಟ್ಟು ಗುಣಮುಖರ ಸಂಖ್ಯೆ 3,34,258ಕ್ಕೆ ತಲುಪಿದೆ. ಕೋವಿಡ್ ನಿಗದಿತ ಆಸ್ಪತ್ರೆ, ಆರೈಕೆ ಕೇಂದ್ರ ಮತ್ತು ಮನೆ ನಿಗಾದಲ್ಲಿ 18,184 ಕೋವಿಡ್ ಸಕ್ರಿಯ ಪ್ರಕರಣಳಿವೆ. ಅದರಲ್ಲಿ 386 ಮಂದಿ ಗಂಭೀರ ಸ್ಥಿತಿಯಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಒಂದೇ ದಿನ ಸೋಂಕಿಗೆ 9 ಮಂದಿ ಬಲಿಯಾಗಿದ್ದಾರೆ. ಒಟ್ಟು ಕೋವಿಡ್ ಸಾವಿನ ಸಂಖ್ಯೆ 3,997 ಕ್ಕೆ ಏರಿಕೆಯಾಗಿದ್ದು, ಭಾನುವಾರ 4 ಸಾವಿರ ಗಡಿ ದಾಟುವ ನಿರೀಕ್ಷೆಯಿದೆ.