ನ್ಯೂಸ್

ಕೋಳಿ, ಕುರಿ, ಗೋವಿಗೆ ಇರುವ ವ್ಯತ್ಯಾಸ ಸಿದ್ದರಾಮಯ್ಯ ಅರಿಯಲಿ: ಪ್ರತಾಪ್ ಸಿಂಹ

ಮಡಿಕೇರಿ: ಕೊಡವರು ಗೋಮಾಂಸ ತಿನ್ನುತ್ತಾರೆಂಬ ಹೇಳಿಕೆ ನೀಡಿರುವ ಸಂಸದ ಪ್ರತಾಪ್ ಸಿಂಹ, ಕೋಳಿ, ಕುರಿ, ಗೋವಿಗೆ ಇರುವ ವ್ಯತ್ಯಾಸವನ್ನು ಸಿದ್ದರಾಮಯ್ಯ ಅರಿಯಲಿ ಎಂದು ಹೇಳಿದ್ದಾರೆ. ಸುಂಟಿಕೊಪ್ಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರೈತ ಕುಟುಂಬದಿಂದ ಬಂದವರು. ಕುರಿ-ಗೋವಿಗಿರುವ ವ್ಯತ್ಯಾಸವನ್ನು ಸಿದ್ದರಾಮಯ್ಯ ಅರಿಯಲಿ. ಅದರ ಅರ್ಥ ಗೊತ್ತಾದರೆ ಅವರು ಈ ರೀತಿ ಹೇಳೋದಿಲ್ಲ ಎಂದಿದ್ದಾರೆ.