ನ್ಯೂಸ್

ಕೋಲಾರದಲ್ಲಿ ರಿಕ್ಕಿ ರೈ ಕೊಲೆ ಯತ್ನ ಖಂಡಿಸಿ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಜಯ ಕರ್ನಾಟಕ ಸಂಘಟನೆಯ ಮುತ್ತಪ್ಪ ರೈ ರವರ ಕಿರಿಯ ಪುತ್ರ ರಿಕ್ಕಿ ರೈ ರವರನ್ನು ಶುಕ್ರವಾರ ರಾತ್ರಿ ಅವರ ನಿವಾಸದ ಹೊರಗೆ ಗುಂಡಿನ ದಾಳಿ ನಡೆಸಿ ಕೊಲೆಗೆ ಪ್ರಯತ್ನಿಸಿದ ಹೇಯ ಕೃತ್ಯವನ್ನು ಖಂಡಿಸಿ ಕೋಲಾರ ಜಿಲ್ಲಾ ಜಯ ಕರ್ನಾಟಕ ಸಂಘಟನೆಯ ವತಿಯಿಂದ ನಗರದ ಗಾಂಧಿವನದಲ್ಲಿ ಪ್ರತಿಭಟನೆ ನಡೆಸಿ, ರಿಕ್ಕಿ ರೈ ರವರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಹಾಗೂ ಹತ್ಯೆಗೆ ಸಂಚು ರೂಪಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.

ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಕೆ ಆರ್. ತ್ಯಾಗರಾಜ್ ಮಾತನಾಡಿ, ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಮುತ್ತಪ್ಪ ರೈ ರವರು ನಿಧನರಾದ ನಂತರ ಜವಾಬ್ದಾರಿಯನ್ನು ರಿಕ್ಕಿ ರೈ ನಿಭಾಯಿಸುತ್ತಿದ್ದರು. ಸಂಘಟನೆಗೆ ಬೆನ್ನೆಲುಬಾಗಿ ನಿಂತಿದ್ದರು. ರಾಜ್ಯಾದ್ಯಂತ ೪೦ ಲಕ್ಷ ಕ್ಕು ಹೆಚ್ಚು ಸದಸ್ಯತ್ವವನ್ನು ಹೊಂದಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ರಾಜ್ಯಾಧ್ಯಕ್ಷರಾದ ಬಿ.ಎನ್.ಜಗದೀಶ್ ರವರ ನೇತೃತ್ವದಲ್ಲಿ ಸಂಘಟನೆಯ ಮೂಲಕ ಸಮಾಜ ಸೇವೆ, ಅನ್ಯಾಯದ ವಿರುದ್ಧ ಹೋರಾಟಗಳನ್ನು ಮಾಡುತ್ತಾ ಬಂದಿದೆ.

ರಿಕ್ಕಿ ರವರ ಮೇಲೆ ಕೊಲೆ ಯತ್ನ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಕೊಲೆಯತ್ನಕ್ಕೆ ಪ್ರಯತ್ನಿಸಿದವರನ್ನು ಹಾಗೂ ಈ ಸಂಚಿನಲ್ಲಿ ಭಾಗಿಯಾದವರನ್ನು ಬಂಧಿಸಿ ಅವರಿಗೆ ತಕ್ಕ ಶಿಕ್ಷೆಯನ್ನು ವಿಧಿಸಬೇಕು. ರಿಕ್ಕಿ ರೈ ರವರಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಓತ್ತಾಯಿಸಿ ಗೃಹ ಸಚಿವರಿಗೆ, ಕೋಲಾರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರವನ್ನು ಸಲ್ಲಿಸುವುದಾಗಿ ತಿಳಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಕೆ.ಎನ್ ಪ್ರಕಾಶ್, ಎಮ್.ಎನ್ ಮಂಜುನಾಥ್. ಜಿಲ್ಲಾ ಸಂಚಾಲಕ ವಿ.ಜಗದೀಶ್, ಕಾರ್ಮಿಕ ಘಟಕದ ಅಧ್ಯಕ್ಷ ಲೋಕನಾಥ್ ಸಿಂಗ್, ತಾಲೂಕು ಅಧ್ಯಕ್ಷ ಬಿ.ಮುನಿರಾಜು, ಸಂಘಟನಾ ಕಾರ್ಯದರ್ಶಿ ಆರ್. ಮಂಜುನಾಥ್ ಸಿಂಗ್ ಮತ್ತು ಎಂ.ನAದೀಶ್, ಮುಖಂಡರುಗಳಾದ ಆರ್.ವೆಂಕಟೇಶ್, ಕೆ.ಎನ್ ರವೀಂದ್ರನಾಥ್, ಎ ಶ್ರೀನಿವಾಸ್, ಎಂ ಅರವಿಂದ್, ಸಂಜಯ್, ಎಂ.ರAಜಿತ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಚಿತ್ರ ೨೦ ಕೆ.ಎಲ್.ಆರ್ ೦೭ : ರಿಕ್ಕಿ ರೈ ಕೊಲೆ ಯತ್ನ ಖಂಡಿಸಿ ಜಯ ಕರ್ನಾಟಕದ ವತಿಯಿಂದ ಕೋಲಾರದ ಗಾಂಧಿನಗರದಲ್ಲಿ ಪ್ರತಿಭಟನೆ