ನ್ಯೂಸ್

ಕೋಲಾರದಲ್ಲಿ ಮೈತ್ರಿ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ / ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಶಕ್ತಿ ಪ್ರದರ್ಶನಗೊಂಡ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ / ಕಾಂಗ್ರೇಸ್ ವಿರುದ್ಧ ಹರಿಹಾಯ್ದ ಜೆಡಿಎಸ್ ಬಿಜೆಪಿ ನಾಯಕರು.

ವಿಜಯವಾಣಿ ಸುದ್ದಿಜಾಲ ಕೋಲಾರ
ರಾಜ್ಯದ ಖಜಾನೆಯನ್ನು ಲೂಟಿ ಮಾಡಲು ಕಾಂಗ್ರೇಸ್ ನಾಯಕರು ಶಪಥ ಮಾಡಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ರಾಜ್ಯದ ಜನತೆಗೆ ಕುಡಿಯುವ ನೀರು ಒದಗಿಸಲು ಸರ್ಕಾರ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಕೋರ್ ಕಮಿಟಿ ಸದಸ್ಯ ಜಿ.ಟಿ.ದೇವೇಗೌಡ ವಾಗ್ದಾಳಿ ನಡೆಸಿದರು.

ಕೋಲಾರ ಲೋಕಸಭಾ ಮೀಸಲು ಕ್ಷೇತ್ರದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಕಾರ್ಯಕರ್ತರ ರೋಡ್‌ಸಭೆಯಲ್ಲಿ ಮಾತನಾಡಿ, ಸದೃಢ ಭಾರತ ಕಟ್ಟಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಂತಹ ಪ್ರಧಾನಮಂತ್ರಿಗಳನ್ನು ದೇಶವಲ್ಲದೆ ವಿಶ್ವನಾಯಕರು ಗೌರವದಿಂದ ಕಾಣುತ್ತಿದ್ದಾರೆ. ಅಂತಹವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಜನ್ಮ ಪಡೆದು ಜೆಡಿಎಸ್ ಪಕ್ಷದಲ್ಲಿಯೇ ಬೆಳೆದು ಇದೀಗ ಕಾಂಗ್ರೇಸ್ ಪಕ್ಷ ಸೇರಿಕೊಂಡಿದ್ದಾರೆ. ಇಂತಹವರು ಜೆಡಿಎಸ್ ಪಕ್ಷದ ಅಸ್ತಿತ್ವದ ಬಗ್ಗೆ ಮಾತನಾಡುತ್ತಾರೆ ಎಂದು ಸಿದ್ಧರಾಮಯ್ಯನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ರಾಜ್ಯಕ್ಕೆ ಭೀಕರ ಬರ ಆವರಿಸಿತು, ರಾಜ್ಯದಲ್ಲಿರುವ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಆಗದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿರಲು ನೈತಿಕತೆ ಇಲ್ಲ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನ ತಕ್ಕ ಪಾಠ ಕಲಿಸ್ತಾರೆ ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅದಷ್ಟಕ್ಕೇ ಅದೇ ಪತನವಾಗುತ್ತದೆ ಎಂದು ಭವಿಷ್ಯ ನುಡಿದರು.

ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಕೋಲಾರ ಜಿಲ್ಲೆಗೆ ನೀರಾವರಿ ಯೋಜನೆಗಳಿಗೆ ಅನುದಾನಗಳು ಕೊಟ್ಟಿದ್ದು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು, ಜಿಲ್ಲೆಗೆ ಮೊದಲ ನೀರಾವರಿ ಯೋಜನೆ ಯರಗೋಳ್ ಯೋಜನೆಗೆ ಕುಮಾರಸ್ವಾಮಿಯವರು ಅನುದಾನ ಕೊಟ್ಟರೆ ಎತ್ತಿನಹೊಳೆ ಯೋಜನೆಗೆ ಸದಾನಂದಗೌಡರು ಅನುದಾನಗಳು ಕೊಟ್ಟರು, ಆದರೆ ಕಾಂಗ್ರೆಸ್ ನವರು ಎಲ್ಲವನ್ನೂ ನಾವೇ ಮಾಡಿದ್ದು ಅಂತ ತಮ್ಮ ಭುಜ ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಆದ್ದರಿಂದ ಜಿಲ್ಲೆಯ ಜನ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿಗೆ ಮತ ನೀಡುವ ಮೂಲಕ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಪಣ ತೊಡಬೇಕು ಎಂದು ಮನವಿ ಮಾಡಿದರು.

ನಾಮಪತ್ರ ಸಲ್ಲಿಕೆಗೆ ಮುನ್ನ ಕೋಲಾರ ನಗರದ ಬಂಗಾರಪೇಟೆ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಮೈತ್ರಿ ನಾಯಕರು ಸಾವಿರಾರು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಮ್ಮುಖದಲ್ಲಿ ಬಂಗಾರಪೇಟೆ ವೃತ್ತದಿಂದ ಮೆಕ್ಕೆ ವೃತ್ತದವರೆಗೂ ರಾಜ್ಯ ನಾಯಕರು ಮತ್ತು ಜಿಲ್ಲಾ ನಾಯಕರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ದ ತೀವ್ರ ಹರಿಹಾಯ್ದು, ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿದರು.

ಬೃಹತ್ ಮೆರವಣಿಗೆಯಲ್ಲಿ ಶಾಸಕರಾದ ಜಿ.ಕೆ ವೆಂಕಟಶಿವಾರೆಡ್ಡಿ, ಸಮೃದ್ದಿ ಮಂಜುನಾಥ್, ಎಂ.ರವಿಕುಮಾರ್, ಮಾಜಿ ಶಾಸಕರಾದ ಜೆ.ಕೆ ಕೃಷ್ಣಾರೆಡ್ಡಿ, ವರ್ತೂರು ಆರ್.ಪ್ರಕಾಶ್, ಮಂಜುನಾಥಗೌಡ, ಎಂ.ನಾರಾಯಣಸ್ವಾಮಿ ಮುಖಂಡರಾದ ಸಿ.ಎಂ.ಆರ್ ಶ್ರೀನಾಥ್, ಜಿ.ಇ ರಾಮೇಗೌಡ ಸೇರಿದಂತೆ ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ, ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

ಎರಡು ಬಾರಿ ಪ್ರತ್ಯೇಕ ನಾಮಪತ್ರಗಳ ಸಲ್ಲಿಕೆ :
ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ೫ ಜನಕ್ಕಿಂತ ಹೆಚ್ಚಿಗೆ ನಾಮ ಪತ್ರ ಸಲ್ಲಿಸಲು ಬಿಡದೇ ಇದ್ದ ಕಾರಣ ಪ್ರಥಮಬಾರಿಗೆ ಅಭ್ಯರ್ಥಿ ಜೊತೆಯಲ್ಲಿ ಜೆಡಿಎಸ್ ಕೋರ್ ಕಮಿಟಿ ಸದಸ್ಯ ಜಿ.ಟಿ.ದೇವೇಗೌಡ, ಬಿಜೆಪಿ ಮಾಜಿ ಸಚಿವ ಅರವಿಂದ್ ಲಿಂಬಾವಳಿ, ಸಂಸದ ಮುನಿಸ್ವಾಮಿ, ಎಂ.ಎಲ್.ಸಿ.ಗೋವಿAದರಾಜು ಒಂದು ಬಾರಿ ತೆರಳಿ ನಾಮಪತ್ರ ಸಲ್ಲಿಸಿದರು.

ಎರಡನೇ ಬಾರಿ ಅಭ್ಯರ್ಥಿ ಜೊತೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಶಾಸಕ ಸಮೃದ್ಧಿ ಮಂಜುನಾಥ್, ಮಾಜಿ ಸಚಿವ ವರ್ತೂರು ಪ್ರಕಾಶ್, ಕೋಲಾರ ಜೆಡಿಎಸ್ ಪರಾಭವಿತ ಅಭ್ಯರ್ಥಿ ಸಿ.ಎಂ.ಆರ್.ಶ್ರೀನಾಥ್ ತೆರಳಿ ನಾಮಪತ್ರ ಸಲ್ಲಿಸಿದರು.

ಕೋಟ್
ಸಿದ್ಧರಾಮಯ್ಯನವರು ಮೊದಲು ಬಾರಿ ೫ ವರ್ಷ ಸಿ.ಎಂ ಆಗಿದ್ದಲ್ಲಿ ಕಾಂಗ್ರೇಸ್‌ನಲ್ಲಿ ಕೇಳುವವರಿಲ್ಲ. ಅವರ ಅದೃಷ್ಟ ಚೆನ್ನಾಗಿತ್ತು. ಈ ಬಾರಿ ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಸೋತರೆ ನಿಮ್ಮನ್ನು ಬದಲಾವಣೆ ಮಾಡುತ್ತೇನೆಂದು ಹೇಳಿದ್ದಾರೆ. ಜೆಡಿಎಸ್. ಬಿಜೆಪಿ ಹೊಂದಾಣಿಕೆ ಸಾಧ್ಯವಿಲ್ಲ ಎಂದುಕೊAಡಿದ್ದರು. ಆದರೆ ಬೂತ್ ಮಟ್ಟದಿಂದ್ದಲೂ ಹೊಂದಾಣಿಕೆ ಆಗುತ್ತಿದೆ. ಮೈಸೂರಿನಲ್ಲಿ ನಾವು ಗೆದ್ದೇಗೆಲ್ಲುತ್ತೇವೆ. ಈ ಚುನಾವಣೆಯಲ್ಲಿಯೂ ಗೆಲ್ಲುತ್ತೇವೆ. ಮುಂದಿನ ಚುನಾವಣೆಯಲ್ಲಿಯೂ ಗೆದ್ದೇ ಗೆಲ್ಲುತ್ತೇವೆ.

-ಜಿ.ಟಿ.ದೇವೇಗೌಡ, ಕೋರ್ ಕಮಿಟಿ ಸದಸ್ಯ.

ಕೋಟ್
ಬಿಜೆಪಿ ಜೆಡಿಎಸ್ ಮೈತ್ರಿ ಒಗ್ಗಟ್ಟಾಗಿದೆ. ಇದನ್ನು ನೋಡಿ ಕಾಂಗ್ರೇಸ್‌ನವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ನಾನು ಹುಟ್ಟಿದ್ದು ಮೈಸೂರಿನಲ್ಲಿಯೇ ಆಗ ನಮ್ಮ ತಂದೆ ಡಿ.ಸಿ.ಆಗಿದ್ದರು. ಊಟಿಗೆ ಒಂದು ಬಾರಿ ಮಾತ್ರ ಹೋಗಿದ್ದೇನೆ. ಎಲ್ಲಾ ಕೋಲಾರದಲ್ಲಿ ಕಳೆದಿದ್ದೇನೆ. ನನ್ನ ಮೇಲೆ ಪ್ರೀತಿ ಜಾಸ್ತಿಯಾಗಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆ ರೀತಿ ಆರೋಪ ಮಾಡುತ್ತಿರಬಹುದು.

-ಎಂ.ಮಲ್ಲೇಶ್‌ಬಾಬು, ಜೆಡಿಎಸ್. ಬಿಜೆಪಿ ಮೈತ್ರಿ ಅಭ್ಯರ್ಥಿ.

ಕೋಟ್
ಬಿಜೆಪಿ ಜೆಡಿಎಸ್ ಹೊಂದಾಣಿಕೆಯಿAದ ಕೋಲಾರ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ. ಎಡಗೈ ಸಮುದಾಯ ಬಲಗೈ ಸಮುದಾಯ ಬೋವಿ ಸಮುದಾಯ ಗೌಡರ ಸಮುದಾಯ ಎಲ್ಲಾ ಸಮುದಾಯಗಳು ನರೇಂದ್ರಮೋದಿಯವರಿಗಾಗಿ ಕೆಲಸ ಮಾಡುತ್ತಿವೆ. ೨೫ ಸೀಟುಗಳನ್ನು ನಮಗೆ ಬಿಟ್ಟುಕೊಡಲಾಗಿದೆ. ೩ ಸೀಟುಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ರಾಜ್ಯದ ಉದ್ದಗಲಕ್ಕೂ ಜೆಡಿಎಸ್ ಶಕ್ತಿಯಿದೆ. ಕೋಲಾರದಲ್ಲಿ ಜೆಡಿಎಸ್ ಗೆದ್ದೇಗೆಲ್ಲುತ್ತೇವೆ.

-ಅರವಿಂದ್ ಲಿಂಬಾವಳಿ, ಮಾಜಿ ಸಚಿವ.

ಕೋಟ್
ಮನೆಗೊಂದು ೩ ಬಾಗಿಲಿರಾಗಿರುವ ಕಾಂಗ್ರೇಸ್ ಪಕ್ಷ ಕೆ.ಹೆಚ್.ಮುನಿಯಪ್ಪನವರು ಒಂದು ಬಾರಿ ಕರೆದುಕೊಂಡು ಹೋಗಿ ನಾಮಪತ್ರ ಸಲ್ಲಿಸುವುದು. ನಜೀರ್ ಅಹ್ಮದ್‌ರವರನ್ನು ಕರೆದುಕೊಂಡು ಹೋಗಿ ಒಂದು ಬಾರಿ ನಾಮಪತ್ರ ಸಲ್ಲಿಸುವ ಕೆಲಸ ಮಾಡಲಾಗುತ್ತಿದೆ. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ನರೇಂದ್ರಮೋದಿ ಮತ್ತು ದೇವೇಗೌಡರ ಅಭಿಮಾನಿಗಳಿದ್ದಾರೆ. ಸುಮಾರು ೩ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿAದ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಾಂಗ್ರೇಸ್‌ನವರೇ ಕಾಂಗ್ರೇಸ್ ಅಭ್ಯರ್ಥಿಯನ್ನು ಸೋಲಿಸಲು ಸಿದ್ದರಿರುವವರು ಜೆಡಿಎಸ್ ಎಲ್ಲಿದೆ ಎಂದು ಕೇಳುತ್ತಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಧರ್ಮ ಮತ್ತು ಅಧರ್ಮದ ಮಧ್ಯೆ ನಡೆಯುತ್ತಿರುವ ಚುನಾವಣೆ ಧರ್ಮ ಗೆದ್ದೇ ಗೆಲ್ಲುತ್ತದೆ.
-ಎನ್.ಮುನಿಸ್ವಾಮಿ, ಸಂಸದರು, ಕೋಲಾರ.

ಚಿತ್ರ ೦೪ ಕೆ.ಎಲ್.ಆರ್. ೦೧ : ಜಿ.ಟಿ.ದೇವೇಗೌಡ ಜೊತೆ ಸೇರಿ ಜೆಡಿಎಸ್ ಅಭ್ಯರ್ಥಿ ಎಂ.ಮಲ್ಲೇಶ್‌ಬಾಬು ನಾಮಪತ್ರ ಸಲ್ಲಿಸುತ್ತಿರುವುದು.
ಸಂಸದ ಮುನಿಸ್ವಾಮಿ ಮಾಜಿ ಸಚಿವ ಅರವಿಂದ್ ಲಿಂಬಾವಳಿ, ಎಂ.ಎಲ್.ಸಿ. ಗೋವಿಂದರಾಜು ಇದ್ದಾರೆ.

ಚಿತ್ರ ೦೪ ಕೆ.ಎಲ್.ಆರ್. ೦೧ಎ : ಜೆ.ಡಿ.ಎಸ್.ಅಭ್ಯರ್ಥಿ ಎಂ.ಮಲ್ಲೇಶ್‌ಬಾಬು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಶಾಸಕ ಸಮೃದ್ಧಿ ಮಂಜುನಾಥ್, ಸಿ.ಎಂ.ಆರ್. ಶ್ರೀನಾಥ್ ಇದ್ದಾರೆ.

ಚಿತ್ರ ೦೪ ಕೆ.ಎಲ್.ಆರ್. ೦೧ಬಿ : ಜೆಡಿಎಸ್ ಅಭ್ಯರ್ಥಿ ಎಂ.ಮಲ್ಲೇಶ್‌ಬಾಬು ನಾಮಪತ್ರ ಸಲ್ಲಿಕೆಗೆ ಮುನ್ನ ನಗರದಲ್ಲಿ ರೋಡ್‌ಶೋ ನಡೆಸುತ್ತಿರುವುದು.

ಚಿತ್ರ ೦೪ ಕೆ.ಎಲ್.ಆರ್. ೦೧ಸಿ : ಜೆಡಿಎಸ್ ರೋಡ್‌ಶೋದಲ್ಲಿನ ಜನಸ್ಥೋಮ