ನ್ಯೂಸ್

ಕೋಲಾರದಲ್ಲಿ ಪತ್ರಿಕಾ ದಿನಾಚರಣೆ / ವಾರ್ಷಿಕ ಪ್ರಶಸ್ತಿ ಪ್ರದಾನ / ಸಾಧಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ / ಸುದ್ದಿಯಲ್ಲಿ ವಾಸ್ತವಾಂಶಗಳಿರಬೇಕು / ಅಭಿಪ್ರಾಯಗಳು ಬೇಡ / ಸ್ವಾಸ್ಥö್ಯ ಹಾಳಾಗದಂತೆ ಎಚ್ಚರವಹಿಸಿ / ಡಾ.ಎಂ.ಆರ್.ರವಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಸತ್ಯಶೋಧನೆಯ ಜವಾಬ್ದಾರಿ ಹೊತ್ತ ಪತ್ರಕರ್ತರು ಸುದ್ದಿ ಮಾಡುವಾಗ ಅದರಲ್ಲಿ ವಾಸ್ತವಾಂಶವಿರಬೇಕೇ ಹೊರತೂ ತಮ್ಮ ಅಭಿಪ್ರಾಯಗಳಿಗೆ ಅವಕಾಶ ಇರಬಾರದು. ವೃತ್ತಿಧರ್ಮಕ್ಕೆ ಕುತ್ತು ಬಾರದಂತೆ ಮತ್ತು ಸಮಾಜದ ಸ್ವಾಸ್ಥö್ಯ ಹಾಳಾಗದಂತೆ ಎಚ್ಚರವಹಿಸಬೇಕು. ಬರಹದಲ್ಲಿ ಸಮಾಜದ ಹಿತವಿರಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿAದ ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ಹಾಗೂ ವಾರ್ಷಿಕ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಸನ್ಮಾನ ಮತ್ತು ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.

ಸುದ್ದಿ ಮಾಡುವಾಗ ಭಾಷೆ ಮೇಲೆ ಹಿಡಿತ ಇರಬೇಕು. ಪ್ರೌಢಿಮೆಯೂ ಅಗತ್ಯ, ಪ್ರತಿ ಪತ್ರಿಕೆಗೂ ತನ್ನದೇ ಆದ ವಿನ್ಯಾಸ, ಬರಹದ ಶೈಲಿ ಇರುತ್ತದೆ. ತಾವು ೧೯೯೨ ರಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿದ್ದನ್ನು ನೆನಪಿಸಿಕೊಂಡು ನನ್ನ ಜೀವನದ ಯೌವನವನ್ನು ಪತ್ರಕರ್ತನಾಗಿ ಬಳಸಿಕೊಂಡೆ, ನನಗೆ ಮಾತೃಬೇರು ಪತ್ರಿಕೋದ್ಯಮ ಎಂದು ತಿಳಿಸಿದರು.

ಬರಹ ಗೊತ್ತಿದ್ದರೆ ಮಾತ್ರ ಪತ್ರಕರ್ತರಾಗಲು ಸಾಧ್ಯವಿಲ್ಲ. ಆಧುನಿಕತೆಯ ಉತ್ಪನ್ನಗಳನ್ನು ಸಹಿಸಿಕೊಳ್ಳಬೇಕು. ಅದು ನಮ್ಮನ್ನು ದಾರಿತಪ್ಪಿಸುವ ಕೆಲಸವಾಗದಂತೆ ಎಚ್ಚರವಹಿಸಬೇಕು. ಪತ್ರಿಕೋದ್ಯಮವನ್ನು ಪ್ರೀತಿಯಿಂದ ಅಪ್ಪಿಕೊಂಡಾಗ ತಾನಾಗಿಯೇ ನಿಷ್ಠೂರತೆ ಬದ್ದತೆ ಬರುತ್ತದೆ. ವೃತ್ತಿಯ ರಕ್ಷಣೆಗೆ ವೃತ್ತಿಪರತೆ ಅಗತ್ಯವಿದೆ. ಆಗ ಗೌರವವೂ ಸಿಗುತ್ತದೆ ಎಂದರು.

ಪತ್ರಕರ್ತನಿಗೆ ಸಮಾಜ ಮತ್ತು ಜೀವನದಲ್ಲಿ ಹೊಂದಾಣಿಕೆ ಇರಬೇಕು. ಉತ್ತಮ ಸಂಪರ್ಕ ಸಾಧಿಸಿದರೆ ಸುದ್ದಿಗಳು ಹೆಚ್ಚು ಸಿಗುತ್ತವೆ. ಆಗ ಮಾತ್ರ ಪತ್ರಿಕೋದ್ಯಮದ ರೇಸ್‌ನಲ್ಲಿ ಗೆಲ್ಲಬಹುದು ಎಂದರು.

ಪೋಲಿಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾತನಾಡಿ, ಪೋಷಕರು ಮಕ್ಕಳೊಂದಿಗೆ ಕೆಲವು ಸಮಯ ಕಳೆಯಬೇಕು. ಅವರಲ್ಲಿ ತಾವಾಗಿಯೇ ಯೋಚಿಸುವ ಮನಸ್ಥಿತಿ ಬೆಳೆಸಿ, ಕೇವಲ ೪ ರೂಪಾಯಿಗೆ ವಿಶ್ವದ ಜ್ಞಾನ ನೀಡುವ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿ ಎಂದರು.

ಸಿನಿಮಾ, ಕ್ರೆöÊಂ ಬಿಟ್ಟು ಕೇವಲ ೨ ವರ್ಷ ಪತ್ರಿಕೆಯೊಂದರ ಮೊದಲಿಂದ ಕೊನೆವರೆಗೂ ಓದಿದರೆ ಅಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಜ್ಞಾನ ಸಿಗುವುದರಿಂದ ಖಂಡಿತಾ ಯುಪಿಎಸ್ಸಿ ತೇರ್ಗಡೆ ಸುಲಭ ಎಂದು ತಮ್ಮ ಅನುಭವ ಹಂಚಿಕೊAಡರು.

ಹೆಲ್ಮೆಟ್ ಧರಿಸಿ ಜೀವ ಉಳಿಸಿ :

ಇದೇ ಸಂದರ್ಭದಲ್ಲಿ ಹೆಲ್ಮೆಟ್ ಅಗತ್ಯತೆ ಕುರಿತು ಮಕ್ಕಳಿಗೆ ತಿಳಿಹೇಳಿ, ಸ್ವಯಂ ರಕ್ಷಣೆಗೆ ಜ್ಞಾನದ ಕೋಟೆ ಕಟ್ಟಿಕೊಳ್ಳಿ ಹಾಗೆಯೇ ನಿಮ್ಮ ತಂದೆತಾಯಿಯ ಮೇಲೆ ಪ್ರೀತಿ ಇದ್ದರೆ ಹೆಲ್ಮೆಟ್ ಧರಿಸಿ ನಿಮ್ಮ ಹಾಗೂ ನಿಮ್ಮ ಕುಟುಂಬದ ಜೀವ ಉಳಿಸಿ ಎಂದು ಸಲಹೆ ನೀಡಿದರು.

ಪತ್ರಕರ್ತರ ಆಪತ್ಕಾಲದ ನಿಧಿ ೧ ಕೋಟಿಗೇರಲಿ :

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಪತ್ರಕರ್ತರಿಗೆ ಆಪತ್ಕಾಲದಲ್ಲಿ ನೆರವಾಗುವ ಉದ್ದೇಶದಿಂದ ಕ್ಷೇಮಾಭಿವೃದ್ದಿ ನಿಧಿ ಸ್ಥಾಪಿಸಿ ಅದಕ್ಕ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಬಯಸಿದಾಗ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ೨೫ ಲಕ್ಷ ರೂ ಕೊಡಿಸಿದ್ದು,ಈಗ ೩೦ ಲಕ್ಷ ಇಡುಗಂಟು ಆಗಿದೆ ಎಂದರು.

ಕೋಲಾರಮ್ಮ ದೇವಾಲಯ ರಸ್ತೆಯನ್ನು ರಥಬೀದಿ ಎಂದು ಕರೆದ ಮೊದಲ ಡಿಸಿ ಡಾ.ಎಂ.ಆರ್.ರವಿ, ಇದೀಗ ದೇವಾಲಯ ರಸ್ತೆ ಅಭಿವೃದ್ದಿಗೆ ಸಂಕಲ್ಪದೊAದಿಗೆ ಕೆಲಸ ಮಾಡಿದ್ದು, ಕೋಲಾರದ ಜನತೆ ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ ಎಂದರು.

ಪತ್ರಕರ್ತರ ಸಂಘದ ರಾಜ್ಯಕಾರ್ಯಕಾರಿ ಸದಸ್ಯ ವಾಸುದೇವಹೊಳ್ಳ ಮಾತನಾಡಿ, ಕೋಲಾರ ಜಿಲ್ಲಾ ಸಂಘ ಪ್ರಥಮಗಳಲ್ಲಿ ಪ್ರಥಮವಾಗಿದೆ. ಜಿಲ್ಲಾ ಸಂಘ ಕಟ್ಟಡ ರಾಜ್ಯಕ್ಕೆ ಮೊದಲು, ಅತ್ಯುತ್ತಮ ಭವನ ಪ್ರಶಸ್ತಿಯೂ ನಮಗೆ ಮೊದಲು ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಪತ್ರಿಕಾರಂಗ ಇಂದು ಡೋಲಾಯಮಾನ ಪರಿಸ್ಥಿತಿಯಲ್ಲಿದ್ದು ಸವಾಲುಗಳನ್ನು ಎದುರಿಸುತ್ತಿದೆ, ಸೋಶಿಯಲ್ ಮೀಡಿಯಾ ಪೈಪೋಟಿಯಿಂದ ಇಂದು ಸತ್ಯ,ಸುಳ್ಳು ಎರಡೂ ಹೇಳಬೇಕಾದ ಸ್ಥಿತಿ ಇದೆ ಎಂದರು.

ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಯ ಮತ್ತೊಬ್ಬ ಸದಸ್ಯ ಮುನಿರಾಜು ಮಾತನಾಡಿ, ಜಿಲ್ಲೆಯ ಪತ್ರಕರ್ತರಿಗೆ ಜಿಲ್ಲಾಧಿಕಾರಿಗಳು ನಿವೇಶನಗಳನ್ನು ನೀಡಲು ೫ ಎಕೆರೆ ಜಮೀನನ್ನು ಸಂಘಕ್ಕೆ ಮಂಜೂರು ಮಾಡಿಕೊಡಬೇಕು. ಜಿಲ್ಲಾಧಿಕಾರಿಗಳು ಕೆಲವು ದಿನಗಳ ಹಿಂದೆ ತಿಳಿಸಿದ್ದಾರೆ. ನೀವೇ ಸ್ಥಳವನ್ನು ಹುಡುಕಿ ನೀಡಬೇಕಾಗಿದೆ ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಪತ್ರಕರ್ತರ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ವಂಶೋಧಯಾ ಆಸ್ಪತ್ರೆ ವತಿಯಿಂದ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆಯೂ ನಡೆಯಿತು.

ಹಿರಿಯ ಪತ್ರಕರ್ತರಾದ ಎಂ.ಜಿ.ಪ್ರಭಾಕರ್, ಸಿ.ಎಂ.ಮುನಿಯಪ್ಪ, ಮಹಮದ್ ಯೂನಸ್, ಅನಂತರಾಮು, ಜಿಲ್ಲಾ ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್, ನೌಕರರ ಸಂಘದ ನಿಟಪೂರ್ವ ಪದಾಧಿಕಾರಿಗಳಾದ ಕೆ.ಎನ್.ಮಂಜುನಾಥ್, ರವಿಚಂದ್ರ, ರೈತಸಂಘದ ಕಲ್ವಮಂಜಲಿ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್‌ಕುಮಾರ್ ಮುಂತಾದವರು ಇದ್ದರು.

ಚಿತ್ರ ೦೧ ಕೆ.ಎಲ್.ಆರ್. ೦೨ : ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿAದ ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಚಾಲನೆ ನೀಡಿದರು. ಎಸ್.ಪಿ.ಬಿ.ನಿಖಿಲ್ ಮುಂತಾದವರು ಇದ್ದರು.

ಚಿತ್ರ ೦೧ ಕೆ.ಎಲ್.ಆರ್. ೦೨ಎ : ಪತ್ರಕರ್ತರ ಸಂಘದಿAದ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಚಿತ್ರ ೦೧ ಕೆ.ಎಲ್.ಆರ್. ೦೨ಬಿ : ಪ್ರತಿಭಾನ್ವಿತ ಮಕ್ಕಳನ್ನು ಪುರಸ್ಕರಿಸಲಾಯಿತು.