ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ನಗರದಲ್ಲಿ ಇನ್ನು ಮುಂದೆ ಬೆಂಗಳೂರು ಮಹಾನಗರ ಸಾರಿಗೆ ರೀತಿಯಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಕವಚವುಳ್ಳ ನಗರಸಾರಿಗೆ ಸಂಚಾರ ಪ್ರಾರಂಭಗೊAಡಿದೆ. ಜೂ.೩೦ ರಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ನಗರ ಸಾರಿಗೆಯ ಬಸ್ಸುಗಳು ಸಂಗೊAಡನಹಳ್ಳಿ ಯಿಂದ ಹಸಾಳ ಗೇಟ್ ಮತ್ತು ವಡಗೂರು ಗೇಟ್ ಯಿಂದ ಅಮ್ಮೇರಹಳ್ಳಿ ವರೆಗೂ ಕೋಲಾರ ವಾಹನ ನಿಲ್ದಾಣದಿಂದ ಬೆಳಿಗ್ಗೆ ೬.೫೦ ರಿಂದ ಸಂಜೆ ೧೮.೫೦ರ ವರೆಗೆ ೮೦ ಟ್ರಿಪ್‌ಗಳನ್ನು ಆಚರಣೆ ಮಾಡಲಾಗುತ್ತಿದೆ.
ನಗರ ಸಾರಿಗೆ ಕಾರ್ಯಾಚರಣೆಗೆ ಬೆ.ಮ.ಸಾ.ಸಂಸ್ಥೆಯ ನಗರ ಸಾರಿಗೆ ವಾಹನಗಳ ರೀತಿ ನೀಲಿ ಮತ್ತು ಬಿಳಿ ಬಣ್ಣದ ಕವಚವುಳ್ಳ ಮತ್ತು ಸಾರ್ವಜನಿಕ ಪ್ರಯಾಣಿಕರು ಹತ್ತಲು ಮತ್ತು ಇಳಿಯಲು ಕಡಿಮೆ ಎತ್ತರದ ಮೆಟ್ಟಿಲುಗಳನ್ನು ಹೊಂದಿದ್ದು, ಮುಂಭಾಗದಲ್ಲಿ ಒಂದು ಮತ್ತು ಮಧ್ಯ ಭಾಗದಲ್ಲಿ ಅಗಲವಾದ ದ್ವಾರಗಳನ್ನು ಹೊಂದಿರುತ್ತದೆ ಮತ್ತು ಸ್ವಯಂ ಚಾಲಿತವಾದ ಬಾಗಿಲುಗಳನ್ನು ಹೊಂದಿರುತ್ತವೆ. ಈ ವಾಹನಗಳು ಸಾಮಾನ್ಯ ಮತ್ತು ವೇಗದೂತ ವಾಹನಗಳಿಗಿಂತ ವಿಭಿನ್ನವಾದ ಬಣ್ಣದ ವಾಹನಗಳಾಗಿರುವುದರಿಂದ ಸಾರ್ವಜನಿಕ ಪ್ರಯಾಣಿಕರು ನಗರ ಸಾರಿಗೆ ವಾಹನಗಳನ್ನು ದೂರದಿಂದಲೇ ಗುರುತಿಸಲು ಸಹ ಅನುಕೂಲವಾಗುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀಧರ್ ರವರು ತಿಳಿಸಿದ್ದಾರೆ.
ಇದು ಪ್ರಾಯೋಗಿಕವಾಗಿ ೨ ರೂಟ್‌ಗಳಿಂದ ನಾಲ್ಕು ಬಸ್ಸುಗಳ ಸಂಚಾರ ಪ್ರಾರಂಭವಾಗಿದೆ. ನಗರದ ಇತರೆ ಕಡೆಗಳಲ್ಲಿ ಸಂಚಾರ ಪ್ರಾರಂಭಿಸಲಾಗುವುದು. ಸರ್ವೇ ನಡೆಸಿ ಅವಶ್ಯಕತೆಗೆ ತಕ್ಕಂತೆ ಹೆಚ್ಚುವರಿ ಬಸ್ಸುಗಳನ್ನು ಹಾಗೂ ಹೆಚ್ಚುವರಿ ರೂಟ್‌ಗಳನ್ನು ಮಾಡಲಾಗುವುದು. ಕೋಲಾರದಿಂದ ಶ್ರೀನಿವಾಸಪುರ ಮತ್ತು ಚಿಂತಾಮಣಿ ಬಸ್ಸುಗಳು ಹೆಚ್ಚಾಗಿ ಇರುವ ಕಾರಣ ಕೋಡಿಕಣ್ಣೂರು, ಸಿ.ಬಿ.ಐ.ಟಿ.ಕಾಲೇಜು ತನಕ ನಗರಸಾರಿಗೆ ವಿಸ್ತಾರ ಮಾಡಿಲ್ಲ. ಮುಂದಿನ ದಿನಗಳಲ್ಲಿ ಈ ರಸ್ತೆಯೂ ಸೇರಿದಂತೆ ಅಂತರಗAಗೆ ಮತ್ತು ನಗರದ ಕೆಲವು ವಾರ್ಡುಗಳಿಗೆ ಹಾಗೂ ಟೇಕಲ್ ರಸ್ತೆಗೆ ನಗರಸಾರಿಗೆ ವಿಸ್ತರಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಚಿತ್ರ ೦೧ ಕೆ.ಎಲ್.ಆರ್. ೦೪ : ಕೋಲಾರ ನಗರಸಂಚಾರ ಸೇವೆಯನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಶಾಸಕ ಕೊತ್ತೂರು ಮಂಜುನಾಥ್, ಎಂ.ಎಲ್.ಸಿ. ನಸೀರ್ ಅಹ್ಮದ್, ಅನಿಲ್‌ಕುಮಾರ್, ಕೋಲಾರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀಧರ್, ಮುಂತಾದವರು ಇದ್ದರು.