ನ್ಯೂಸ್

ಕೋಲಾರದಲ್ಲಿ ತುಂತುರು ಮತ್ತು ಸಾಧಾರಣ ಮಳೆ / ಜನಜೀವನ ಅಸ್ತವ್ಯಸ್ತ

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲೆಯಾದ್ಯಂತ ತುಂತುರು ಮಳೆ ಗುರುವಾರ ಬೆಳ್ಳಿಗ್ಗಿನಿಂದಲೇ ಮುಂದುವರೆದಿತ್ತು. ಆಗಾಗ ಸಾಧಾರಣ ಮಳೆಯ ಜೊತೆಗೆ ತುಂತುರು ಮಳೆ ಮುಂದುವರೆದಿತ್ತು. ಶೀಥಗಾಳಿ ಜೊತೆಗೆ ಮೋಡ ಮುಚ್ಚಿದ ವಾತಾವರಣವಿತ್ತು.

ಬೆಳ್ಳಿಗ್ಗಿನಿಂದಲೇ ತುಂತುರು ಮಳೆ ಮುಂದುವರೆದ ಕಾರಣ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಸಮಸ್ಯೆ ಎದುರಾಯಿತು. ಮಧ್ಯಾಹ್ನದ ನಂತರ ಸಡಿಲಗೊಂಡ ತುಂತುರು ಮಳೆ ಸಂಜೆಯ ನಂತರ ಸಾಧಾರಣ ಮಳೆ ಮತ್ತು ಮೋಡಮುಚ್ಚಿದ ವಾತಾವರಣ ಮುಂದುವರೆದಿತ್ತು.

ತುಂತುರು ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ನಗರದಲ್ಲಿ ತರಕಾರಿ, ಹೂವು, ಹಣ್ಣು ವ್ಯಾಪಾರಸ್ಥರಿಗೆ ಮಳೆ ಅಡ್ಡಿಯಾಗಿತ್ತು. ಗ್ರಾಮೀಣ ಭಾಗದಲ್ಲಿ ಜಾನುವಾರುಗಳ ಮೇವಿಗೆ ಸಮಸ್ಯೆ ಎದುರಾಗಿತ್ತು. ತೋಟಗಳಿಂದ ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸಲು ಮತ್ತು ತರಕಾರಿಯನ್ನು ಬಿಡಿಸಲು ತೊಂದರೆಯಾಗಿತ್ತು.