ನ್ಯೂಸ್

ಕೋಲಾರದಲ್ಲಿ ತಲವಾರು ಅಳವಡಿಸಿದ್ದಕ್ಕೆ ಡಿ.ಸಿ. ಎಸ್ಪಿ ಅಮಾನತ್ತುಗೊಳಿಸಬೇಕು/ಸಂಸದ ಮುನಿಸ್ವಾಮಿ

ವಿಜಯವಾಣಿ ಸುದ್ದಿಜಾಲ ಕೋಲಾರ

ರಾಜ್ಯದಲ್ಲಿ ಕಾಂಗ್ರೆಸ್‌ನ ತಲವಾರ್, ಚಾಕು ಚೂರಿ ಪ್ರವೃತ್ತಿ ಮತ್ತೆ ಶುರುವಾಗುತ್ತಿದೆ. ಈದ್ ಮಿಲಾದ್ ಹಬ್ಬ ಆಚರಿಸಲಿ, ಪ್ರಾರ್ಥನೆ ಸಲ್ಲಿಸಲಿ. ಆದರೆ, ತಲವಾರ್ ಅಳವಡಿಸುವ ಪ್ರವೃತ್ತಿ ಬೇಡ. ನಮಗೂ ತ್ರಿಶೂಲ ಅಳವಡಿಸಲು ಅನುಮತಿ ಕೊಡಿ ಎಂದು ಕೇಳಬೇಕಾಗುತ್ತದೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ಶುಕ್ರವಾರ ನಗರದ ಕೋಲಾರಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಶಾಶ್ವತವಾಗಿ ಇರಿಸಿಕೊಳ್ಳುವ ಉದ್ದೇಶದಿಂದಲೇ ಗುರುವಾರ ಕ್ಲಾಕ್ ಟವರ್ ಬಳಿಯ ಫ್ಲೈಓವರ್ ಹೆಬ್ಬಾಗಿಲಿನಲ್ಲಿ ತಲವಾರು ಅಳವಡಿಸಲಾಗಿತ್ತು. ವಿರೋಧ ವ್ಯಕ್ತವಾದ ಮೇಲೆ ತೆರವುಗೊಳಿಸಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಹಾಗೂ ನಗರಸಭೆ ಆಯುಕ್ತ ಶಿವಾನಂದ ಅವರನ್ನು ಅಮಾನತುಗೊಳಿಸಬೇಕು. ಇಲ್ಲದಿದ್ದರೆ ಅ.೩ರಂದು ಬೆಳಿಗ್ಗೆ ೧೧ ಗಂಟೆಗೆ ಬಿಜೆಪಿ ರಾಜ್ಯಮಟ್ಟದ ನಾಯಕರ ನೇತೃತ್ವದಲ್ಲಿ ಕೋಲಾರದಲ್ಲಿ ಬೃಹತ್ ಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜನತಾ ದರ್ಶನದಲ್ಲಿ ನಡೆದ ಘಟನೆಯನ್ನು ವಿರೋಧಿಸಿ ಹೋರಾಟ ನಡೆಸಲಾಗುವುದು. ಇದಕ್ಕೆ ಸಾರ್ವಜನಿಕರು, ದೇಶ ಭಕ್ತರು ಬೆಂಬಲ ನೀಡಬೇಕು. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಹಿಂದೂಗಳನ್ನು ಹತ್ತಿಕ್ಕುವ ಕೆಲಸ ಮಾಡಿ, ಒಂದು ಕೋಮಿಗೆ ಬೆಂಬಲ ನೀಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಜಿಲ್ಲೆಯಲ್ಲಿ ೧೮ಕೊಲೆ ನಡೆದಿವೆ. ಇದನ್ನು ಖಂಡಿಸಿ ಹೋರಾಟ ನಡೆಸಲಾಗುವುದು ಎಂದರು.

ಕ್ಲಾಕ್ ಟವರ್‌ನಲ್ಲಿ ದಿನದ ೨೪ ಗಂಟೆಯೂ ಪೊಲೀಸ್ ವ್ಯಾನ್ ನಿಂತಿರುತ್ತದೆ. ಈದ್ ಮಿಲಾದ್ ಎಂದ ಮೇಲೆ ಇನ್ನೂ ಎರಡು ಪೊಲೀಸ್ ವಾಹನ ಹೆಚ್ಚಿರುತ್ತವೆ. ಆದರೆ, ತಮಗೆ ಗೊತ್ತಿಲ್ಲ, ಕೊಲೆ ಪ್ರಕರಣ ಸಂಬAಧ ಮಾಲೂರಿಗೆ ತೆರಳಿದ್ದೆ ಎಂಬುದಾಗಿ ನಾರಾಯಣ ಹೇಳಿದ್ದಾರೆ. ಕೆಳಗಿನ ಅಧಿಕಾರಿಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಕೂಡ ತಮಗೆ ಗೊತ್ತಿಲ್ಲವೆಂದಿದ್ದಾರೆ. ಇವರಿಬ್ಬರೂ ಪಕ್ಕಾ ಕಾಂಗ್ರೆಸ್ ಏಜೆಂಟ್ ಎಂಬುದು ಗೊತ್ತಾಗುತ್ತದೆ. ಕಾಂಗ್ರೆಸ್ ಏಜೆಂಟ್ ಆಗುವ ಬದಲು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚುನಾವಣೆಯಲ್ಲಿ ಕಾಂಗ್ರೆಸ್‌ನಿAದ ಸ್ಪರ್ಧಿಸಿ ಜನರಿಂದ ಆಯ್ಕೆಯಾದರೆ ತಮ್ಮ ಯೋಗ್ಯತೆ ಗೊತ್ತಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಅಕ್ರಂ ಪಾಷ ಮತ್ತು ಎಸ್ಪಿ ಎಂ.ನಾರಾಯಣ ಜಿಲ್ಲೆಗೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಭಾರತದ ಸಂವಿಧಾನದ ಮೇಲೆ ನಿಜವಾದ ಗೌರವವಿದ್ದರೆ, ಕಾನೂನು ಬಗ್ಗೆ ಅರಿವು ಇದ್ದರೆ ಗುರುವಾರ ನಡೆದ ಘಟನೆಗೆ ಇವರಿಬ್ಬರೇ ನೇರ ಹೊಣೆಯಾಗಬೇಕಾಗುತ್ತದೆ. ಚತುರ್ಥಿ ವೇಳೆ ಹಳ್ಳಿಯಲ್ಲಿ ಗಣೇಶನನ್ನು ಕೂರಿಸಲು, ಡಿ.ಜೆ.ಮಾಡಲು ಪಂಚಾಯಿತಿ, ಕೆಇಬಿ, ಪೊಲೀಸರ ಅನುಮತಿ ಪಡೆಯಬೇಕಾಗುತ್ತದೆ. ಆದರೆ, ರಾತ್ರಿ ೧.೩೦ರಿಂದ ಬೆಳಿಗ್ಗೆ ೬ ಗಂಟೆವರೆಗೆ ತಲವಾರ್ ಅಳವಡಿಸುವ ಕೆಲಸ ಮಾಡುತ್ತಿದ್ದರೂ ಪೊಲೀಸರು ಏನು ಮಾಡುತ್ತಿದ್ದರು? ಜಿಲ್ಲಾಧಿಕಾರಿ ಏನು ಮಾಡುತ್ತಿದ್ದರು' ಎಂದು ಪ್ರಶ್ನಿಸಿದ್ದರು.

'ನಂಬಿಹಳ್ಳಿಯಲ್ಲಿ ಸಾವಿರ ಮಂದಿ ಮೇಲೆ ಪ್ರಕರಣ ದಾಖಲಿಸಿದ್ದೀರಿ. ತಳವಾರ್ ಅಳವಡಿಸಿದ್ದಕ್ಕೆ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದೃಶ್ಯಗಳಿವೆ. ತಾಕತ್ತಿದ್ದರೆ ಇದಕ್ಕೆ ಕಾರಣವಾದ ಎಲ್ಲರ ಮೇಲೂ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಬಲಪಡಿಸಲು ಜೆಡಿಎಸ್‌ನವರು ಬೆಂಬಲ ನೀಡಿದ್ದಾರೆ. ಒಟ್ಟಿಗೆ ಸೇರಿ ಕಾಂಗ್ರೆಸ್ ಪಕ್ಷವನ್ನು ಮಟ್ಟ ಹಾಕುತ್ತೇವೆ' ಎಂದು ಹೇಳಿದರು.

ಚಿತ್ರ ೨೯ ಕೆ.ಎಲ್.ಆರ್. ೦೪ : ಸಂಸದ ಮುನಿಸ್ವಾಮಿ ಭಾವಚಿತ್ರ