ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ರಾಜ್ಯೋತ್ಸವವನ್ನು ಆಚರಿಸಲಾಯಿತು. ವಿಶೇಷವಾಗಿ ಈ ವರ್ಷ ಬಸ್‌ನಿಲ್ದಾಣದಲ್ಲಿ ಏರ್ಪಡಿಸಲಾಗಿದ್ದ ೭೦ನೇ ರಾಜ್ಯೋತ್ಸವವನ್ನು ಉತ್ತಮ ಕಾರ್ಯನಿರ್ವಹಿಸಿರುವ ಸಿಬ್ಬಂದಿಗೆ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿಶೇಷ ಆಕರ್ಷಿತ ಸ್ತಬ್ದಚಿತ್ರವನ್ನು ಬಸ್ ನಿಲ್ದಾಣದಲ್ಲಿ ಏರ್ಪಡಿಸದ್ದ ಕಾರಣ ಸಾವಿರಾರು ಸಾರ್ವಜನಿಕರು ವೀಕ್ಷಿಸಿ ಆನಂದಿಸಿದರು.
ಪ್ರತಿವರ್ಷ ಕೆ.ಎಸ್.ಆರ್.ಟಿ.ಸಿ. ಡಿಪೋ ಘಟಕದಲ್ಲಿ ರಾಜ್ಯೋತ್ಸವವನ್ನು ಆಚರಣೆ ಮಾಡಿ ಸ್ತಬ್ಧಚಿತ್ರವನ್ನು ಜಿಲ್ಲಾಡಳಿತದ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದರು. ಆದರೆ ಈ ಬಾರಿ ವಿಶೇಷವಾಗಿ ಕೆ.ಎಸ್.ಆರ್.ಟಿ.ಸಿ. ಬಸ್‌ನಿಲ್ದಾಣದಲ್ಲಿಯೇ ಸ್ತಬ್ಧಚಿತ್ರವನ್ನು ರಚನೆ ಮಾಡಿದ್ದರು. ಅದರಲ್ಲಿ ಒಂದು ಬಸ್ ಮಾದರಿ ಚಿತ್ರ, ಕೋಲಾರಮ್ಮ ಮತ್ತು ಸೋಮೇಶ್ವರಸ್ವಾಮಿ ದೇವಸ್ಥಾನದ ಆಕಾರದಲ್ಲಿ ಸ್ತಬ್ದಚಿತ್ರವನ್ನು ರಚನೆ ಮಾಡಿದ್ದರು.
ಕೆ.ಎಸ್.ಆರ್.ಟಿ.ಸಿ. ಬಸ್‌ನಿಲ್ದಾಣದ ಮುಖ್ಯದ್ವಾರವನ್ನು ಅಲಂಕರಿಸಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಮಹಿಳಾ ಸಿಬ್ಬಂದಿ ಕನ್ನಡಾಂಭೆಯ ವೇಷ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಇಡೀ ಬಸ್‌ನಿಲ್ದಾಣವನ್ನು ಅಲಂಕರಿಸಲಾಗಿತ್ತು. ಹೂವಿನಿಂದ ಕರ್ನಾಟಕದ ನಕ್ಷೆಯನ್ನು ಬಿಡಿಸಲಾಗಿತ್ತು ಮತ್ತು ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು.
ಚಿತ್ರ ೦೧ ಕೆ.ಎಲ್.ಆರ್. ೦೭ : ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ನಗರದ ಪ್ರಸಿದ್ಧ ದೇವಸ್ಥಾನಗಳಾದ ಕೋಲಾರಮ್ಮ ಮತ್ತು ಸೋಮೇಶ್ವರ ದೇವಾಲಯಗಳಿರುವ ಸ್ತಬ್ದಚಿತ್ರ
ಚಿತ್ರ ೦೧ ಕೆ.ಎಲ್.ಆರ್. ೦೭ಎ : ಕೆ.ಎಸ್.ಆರ್.ಟಿ.ಸಿ. ಬಸ್‌ನಿಲ್ದಾಣದ ಮುಖ್ಯದ್ವಾರವನ್ನು ರಾಜ್ಯೋತ್ಸವ ಅಂಗವಾಗಿ ಅಲಂಕರಿಸಿರುವುದು ಮತ್ತು ಮಹಿಳಾ ಸಿಬ್ಬಂದಿ ಕನ್ನಡಾಂಭೆಯ ವೇಷ ಧರಿಸಿರುವುದು.