ನ್ಯೂಸ್

ಕೋಲಾರದ ಡಾ.ಮಂಜುನಾಥ್ ವಿಶ್ವದ ಶ್ರೇಷ್ಟ ವಿಜ್ಞಾನಿಗಳ ಪಟ್ಟಿಗೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರದ ನಿವಾಸಿ ಹಾಗೂ ದೇವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತç ಸಹ ಪ್ರಾಧ್ಯಾಪಕ ಡಾ.ಹೆಚ್.ಸಿ.ಮಂಜುನಾಥ ಸತತವಾಗಿ ೪ನೇ ಬಾರಿ ಅಮೇರಿಕಾದ ಸ್ಪಾನ್ ಪರ‍್ಡ್ ವಿಶ್ವ ವಿದ್ಯಾಲಯವು ಸಿದ್ಧಪಡಿಸಿರುವ ವಿಶ್ವದ ಶ್ರೇಷ್ಠ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸೇರಿದ್ದಾರೆ.

ವಿಶ್ವದ ನ್ಯೂಕ್ಲಿಯಾರ್ ಮತ್ತು ಪಾರ್ಟಿಕಲ್ ಫಿಸಿಕ್ಸ್ನ ಸಂಶೋದನೆಯಲ್ಲಿ ೪೩೭ನೇ ರ‍್ಯಾಂಕ್ ಪಡೆದಿದ್ದಾರೆ. ಸದರಿ ಕ್ಷೇತ್ರದಲ್ಲಿ ರಾಷ್ಟçಮಟ್ಟದಲ್ಲಿ ೧೦ನೇ ರ‍್ಯಾಂಕ್ ಪಡೆದಿದ್ದಾರೆ.

ಅಂತರಾಷ್ಟಿçÃಯ ಗುಣಮಟ್ಟದ ಸಂಶೋಧನಾ ವರದಿ, ಸಂಶೋಧನಾ ಉಲ್ಲೇಖಗಳು, ಲೇಖನಗಳನ್ನು ಒಳಗೊಂಡ ಹೆಚ್-ಇಂಡೆಕ್ಸ್, ಐ-ಇಂಡೆಕ್ಸ್ ಸೇರಿ ವಿವಿಧ ಮಾನದಂಡಗಳನ್ನು ಪರಿಗಣಿಸಿ, ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಡಾ.ಮಂಜುನಾಥ ಈವರೆವಿಗೂ ೩೦೦ ಕ್ಕೂ ಹೆಚ್ಚು ರಾಷ್ಟಿçÃಯ ಹಾಗೂ ಅಂತರಾಷ್ಟಿçÃಯ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ೧೪ ವರ್ಷಗಳ ಕಾಲ ಕೋಲಾರದ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಡಾ. ಮಂಜುನಾಥ ಇತ್ತೀಚೆಗೆ ದೇವನಹಳ್ಳಿ ಸರ್ಕಾರ ಪ್ರಥಮ ದರ್ಜೆ ಕಾಲೇಜಿಗೆ ವರ್ಗಾವಣೆಗೊಂಡಿದ್ದಾರೆ.

ಕೋಲಾರ ತಾಲ್ಲೂಕು, ಹೊಳಲಿ ಗ್ರಾಮದವರಾಗಿರುವ ಡಾ.ಮಂಜುನಾಥ ೭-೮ ಜನಕ್ಕೆ ಪಿ.ಹೆಚ್.ಡಿ. ಪದವಿಯ ರಿಸರ್ಚ್ಗೆ ಇದುವರೆವಿಗೂ ಸಹಾಯ ಮಾಡಿದ್ದು, ಈಗಲೂ ೫-೬ ಜನ ಅವರ ಮಾರ್ಗದರ್ಶನದಲ್ಲಿ ಪಿ.ಹೆಚ್.ಡಿ. ಪದವಿ ವ್ಯಾಸಂಗ ಮಾಡುತ್ತಿದ್ದಾರೆಂದು ಅವರ ಮಾರ್ಗದರ್ಶನದಲ್ಲಿ ಪಿ.ಹೆಚ್.ಡಿ. ಪಡೆದ ಬಾಲಕಿಯರ ಕಾಲೇಜಿನ ಉಪನ್ಯಾಸಕ ಡಾ. ಸತೀಶ್ ತಿಳಿಸಿದ್ದಾರೆ.

ಮಂಜುನಾಥ್ ರವರ ಸಾಧನೆಗೆ ದೇವನಹಳ್ಳಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಮಂಜಯ್ಯ, ಕೋಲಾರದ ಸರ್ಕಾರಿ ಪ್ರಥಮ ದರ್ಜೇ ಕಾಲೇಜಿನ ಪ್ರಾಂಶುಪಾಲ ಪ್ರೋ.ಕೆ.ಎನ್.ಶ್ರೀನಿವಾಸಗೌಡ, ಪ್ರೋ.ಡಾ.ಸತೀಶ್ ಅಭಿನಂದಿಸಿದ್ದಾರೆ.

ಬಾಕ್ಸ್

ಮಂಜುನಾಥ ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರದ ೨೦೨೧ನೇ ಸಾಲಿನ ಸರ್. ಸಿ.ವಿ.ರಾಮನ್ ಅವಾರ್ಡ್, ೨೦೧೯ರಲ್ಲಿ ಭಾರತ ಸರ್ಕಾರದ ಬಾಬಾ ಅಣು ಸಂಶೋಧನಾ ಕೇಂದ್ರದ ಡಾ.ತರುಣ್ ದತ್ತ, ಮೆಮೋರಿಯಲ್ ಪ್ರಶಸ್ತಿ ಹಾಗೂ ೨೦೧೩ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ವಿಷನ್ ಗ್ರೂಪ್‌ನ ಯುವ ವಿಜ್ಞಾನಿ ಪ್ರಶಸ್ತಿಗೆ ಬಾಜರಾಗಿರುತ್ತಾರೆ.

ಚಿತ್ರ ೦೭ ಕೆ.ಎಲ್.ಆರ್. ೦೧ : ಡಾ. ಮಂಜುನಾಥ ಭಾವಚಿತ್ರ