ನ್ಯೂಸ್

ಕೋಲಾರದ ಗಲ್‌ಪೇಟೆ ಪೋಲಿಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್‌ಗಳಿಗೆ ಎಚ್ಚೆರಿಕೆ / ಮತ್ತೆ ಬಾಲ ಬಿಚ್ಚಿದರೆ ಗೂಂಡಾ ಕಾಯಿದೆ ಅಡಿಯಲ್ಲಿ ಕೇಸು ದಾಖಲು / ಗಡಿಪಾರು ಮಾಡಲಾಗುವುದು / ಡಿ.ವೈ.ಎಸ್.ಪಿ. ಹೆಚ್.ಎಂ.ನಾಗ್ತೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಸಮಾಜಘಾತುಕ ಚಟುವಟಿಕೆಗಳಲ್ಲಿ ಮತ್ತೆ ಕಾಣಿಸಿಕೊಂಡಿರುವ ಗೂಂಡಾ ಕಾಯಿದೆ ಅಡಿಯಲ್ಲಿ ಕೇಸು ದಾಖಲಿಸಿಕೊಳ್ಳಲಾಗುವುದು. ಒಳ್ಳೆಯ ನಡತೆಯಲ್ಲಿ ಜೀವನ ಸಾಗಿಸಿದರೆ ನಿಮ್ಮನ್ನು ರೌಡಿ ಶೀಟರ್ ಪಟ್ಟಿಯಿಂದ ಕೈಬಿಡಲಾಗುವುದು ಎಂದು ಕೋಲಾರ ಗಲ್‌ಪೇಟೆ ಠಾಣೆಯ ವ್ಯಾಪ್ತಿಯ ರೌಡಿಶೀಟರ್‌ಗಳಿಗೆ ಡಿ.ವೈ.ಎಸ್.ಪಿ. ಹೆಚ್.ಎಂ.ನಾಗ್ತೆ ಖಡಕ್ ಎಚ್ಚರಿಕೆ ನೀಡಿದರು.

ಗುರುವಾರ ಗಲ್‌ಪೇಟೆ ಪೋಲಿಸ್‌ಠಾಣೆಯ ವ್ಯಾಪ್ತಿಯಲ್ಲಿ ರೌಡಿಶೀಟರ್‌ಗಳ ಮಾಸಿಕ ಸಭೆ ನಡೆಸಿ, ಈಗಾಗಲೇ ರೌಡಿಶೀಟರ್‌ಗಳಾಗಿದ್ದೀರಿ ಮುಂದೆ ಯಾವುದೇ ಅಪರಾಧ ಪ್ರಕರಣ ಮತ್ತು ಸಮಾಜ ಘಾತುಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ಕಂಡುಬAದಲ್ಲಿ ನಿಮ್ಮನ್ನು ಗಡಿಪಾರು ಮಾಡಲಾಗುವುದು ಹಾಗೂ ಗೂಂಡಾ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ, ಸನ್ನಡತೆಯಿಂದ ನಡೆದುಕೊಂಡರೆ ಉತ್ತಮ, ರೌಡಿಶೀಟರ್‌ನಿಂದ ನಿಮ್ಮನ್ನು ಮುಕ್ತಿಗೊಳಿಸಲಾಗುವುದು ಎಂದರು.

ವೃತ್ತ ನಿರೀಕ್ಷಕ ಎಂ.ಜೆ.ಲೋಕೇಶ್ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡಬೇಕು. ನೀವು ವಾಸಿಸುವ ಸುತ್ತಮುತ್ತ ಜಾಗಗಳಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸಬಾರದು. ಶಾಂತಿ ಕಾಪಾಡಬೇಕು. ವೇಶ್ಯೆವಾಟಿಕೆ, ಜೂಜಾಟ, ಬೆಟ್ಟಿಂಗ್ ಮುಂತಾದ ದಂಧೆಗಳಲ್ಲಿ ಭಾಗವಹಿಸಬಾರದು. ಹಾಗೂ ಅದಕ್ಕೆ ಕುಮ್ಮಕ್ಕು ನೀಡಬಾರದು. ಸಮಾಜಘಾತುಕ ಕೃತ್ಯಗಳಲ್ಲಿ ಭಾಗವಹಿಸಿದ್ದು ಕಂಡುಬAದಲ್ಲಿ ನಿಮ್ಮನ್ನು ಯಾವುದೇ ಮುಲಾಜಿಲ್ಲದೆ ಗಡಿಪಾರು ಮಾಡಲಾಗುವುದು. ಹಾಗೂ ಗೂಂಡಾ ಕಾಯಿದೆ ಅಡಿಯಲ್ಲಿ ಬಂಧಿಸಲಾಗುವುದು ಎಂದು ರೌಡಿ ಶೀಟರ್‌ಗಳಿಗೆ ಎಚ್ಚರಿಕೆ ನೀಡಿದರು.

ಗಲ್‌ಪೇಟೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ೩೩ ರೌಡಿಶೀಟರ್‌ಗಳು ಇದ್ದು, ಇದರಲ್ಲಿ ೧೫ ರೌಡಿ ಶೀಟರ್‌ಗಳು ಭಾಗವಹಿಸಿದ್ದರು. ಕೋಲಾರ ಸೇರಿದಂತೆ ಹೊರ ಜಿಲ್ಲೆ ಹಾಗೂ ಹೊರ ತಾಲ್ಲೂಕುಗಳಿಂದ ಗಲ್‌ಪೇಟೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗವಹಿಸಿದ್ದ ರೌಡಿ ಶೀಟರ್‌ಗಳಿಗೆ ಇಂದು ಖಡಕ್ ಎಚ್ಚರಿಕೆ ನೀಡುವ ಸಲುವಾಗಿ ರೌಡಿಶೀಟರ್‌ಗಳ ಸಭೆ ನಡೆಸಲಾಯಿತು.

ಇತ್ತೀಚೆಗೆ ರಾಜ್ಯದಲ್ಲಿ ಅಪರಾದ ಕೃತ್ಯಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ರಾಜ್ಯಾಂದ್ಯAತ ಆಯಾ ಪೋಲಿಸ್ ಠಾಣೆಯ ವ್ಯಾಪ್ತಿಗಳಲ್ಲಿ ಇರುವ ರೌಡಿಶೀಟರ್‌ಗಳನ್ನು ಕರೆಸಿ ವಾರ್ನಿಂಗ್ ಮಾಡುವ ಕೆಲಸ ಪೋಲಿಸ್ ಇಲಾಖೆ ಮಾಡುತ್ತಿದೆ.

ಗಲ್‌ಪೇಟೆ ಪೋಲಿಸ್‌ಠಾಣೆ ಪಿ.ಎಸ್.ಐ. ವಿಠಲ್‌ತಳವಾರ, ಮುಖ್ಯಪೇದೆಗಳಾದ ವಾಸುದೇವ ಮೂರ್ತಿ, ಗಂಗಾಧರ್, ರಂಗೇಗೌಡ, ಕೃಷ್ಣಮೂರ್ತಿ ಮುಂತಾದವರು ಇದ್ದರು.

ಚಿತ್ರ ೦೮ ಕೆ.ಎಲ್.ಆರ್. ೦೫ : ಗಲ್‌ಪೇಟೆ ಪೋಲಿಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿ, ಸನ್ನಡತೆಯಿಂದ ನಡೆಯುವಂತೆ ಡಿ.ವೈ.ಎಸ್.ಪಿ. ಹೆಚ್.ಎಂ.ನಾಗ್ತೆ ಸೂಚನೆ ನೀಡಿದರು. ವೃತ್ತ ನಿರೀಕ್ಷಕ ಎಂ.ಜೆ.ಲೋಕೇಶ್, ಪಿ.ಎಸ್.ಐ. ವಿಠಲ್‌ತಳವಾರ ಇದ್ದರು.