ನ್ಯೂಸ್

ಕೋಲಾರದ ಕೈಗಾರಿಕಾ ವಲಯದ ಕಾರಿಡಾರ್ ರಸ್ತೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ೩ ತಿಂಗಳಿನಲ್ಲಿ ಟೆಂಡರ್ ಕರೆಯಲಾಗುವುದು / ಲೋಕೋಪಯೋಗಿ ಸಚಿವರ ಉತ್ತರ

ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರದಿಂದ ವೇಮಗಲ್, ಮಾಲೂರಿನಿಂದ ಹೊಸಕೋಟೆಯವರೆಗಿನ ಕೈಗಾರಿಕಾ ಕಾರಿಡಾರ್ ರಸ್ತೆ ಹಾಗೂ ದೇವನಹಳ್ಳಿ, ವಿಜಯಪುರ, ವೇಮಗಲ್, ಮಾಲೂರು ಮೂಲಕ ತಮಿಳುನಾಡು ಗಡಿ ತನಕ ನಿರ್ಮಾಣವಾಗುವ ರಸ್ತೆಗೆ ಒಂದು ವಾರದೊಳಗಾಗಿ ಡಿಪಿಆರ್ ಪಡೆದು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ೩ ತಿಂಗಳೊಳಗಾಗಿ ಕಾಮಗಾರಿಗೆ ಟೆಂಡರ್ ಕರೆಯಲಾಗುವುದೆಂದು ಲೋಕೋಪಯೋಗಿ ಸಚಿವರು ಪರಿಷತ್ತಿನಲ್ಲಿ ಎಂ.ಎಲ್.ಸಿ. ಅನಿಲ್ ಕುಮಾರ್ ರವರ ಪ್ರಶ್ನೆಗೆ ಉತ್ತರಿಸಿದರು.

ಬುಧವಾರ ನಡೆದ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ೨೦೨೩-೨೪ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿಗಳು ಕೈಗಾರಿಕಾ ಕಾರ್ಡಾ ರಸ್ತೆ ಎಂದು ಘೋಷಿಸಿದ್ದ ದೇವನಹಳ್ಳಿ-ವಿಜಯಪುರ-ಎಚ್'ಕ್ರಾಸ್ -ವೇಮಗಲ್ - ಮಾಲೂರು- ತಮಿಳುನಾಡು ಗಡಿ ವರೆಗೆ ಸುಮಾರು ೧೮೨೬ ಕೋಟಿ ವೆಚ್ಚದ ರಸ್ತೆ ಕಾಮಗಾರಿಯು ಯಾವ ಹಂತದಲ್ಲಿದೆ ಹಾಗೂ ಕೋಲಾರದಿಂದ ವೇಮಗಲ್ ಮತ್ತು ಮಾಲೂರಿನಿಂದ ಹೊಸಕೋಟೆವರೆಗೂ ಈ ಕೈಗಾರಿಕಾ ಕಾರಿಡಾರ್ ರಸ್ತೆಯಲ್ಲೇ ಸೇರ್ಪಡೆಗೊಂಡು ತ್ವರಿತವಾಗಿ ಕಾರ್ಯರೂಪಕ್ಕೆ ತರಬೇಕೆಂದು ವಿನಂತಿಸಿದರು.

ಅದಕ್ಕೆ ಲೋಕೋಪಯೋಗಿ ಸಚಿವರು ಉತ್ತರಿಸಿ, ಈ ರಸ್ತೆಗೆ ಸಂಬAಧಿಸಿದAತೆ ಈ ವಾರದಲ್ಲೇ ಡಿಪಿಆರ್ ವರದಿಯು ಬರಲಿದ್ದು , ಡಿಪಿಆರ್ ಬಂದ ನಂತರ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು, ಮೂರು ತಿಂಗಳಲ್ಲೇ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ವಿವರಿಸಿದರು.

ಚಿತ್ರ ೨೪ ಕೆ.ಎಲ್.ಆರ್. ೦೫ : ಎಂ.ಎಲ್.ಸಿ. ಅನಿಲ್ ಕುಮಾರ್ ರವರ ಭಾವಚಿತ್ರ