ವಿಜಯವಾಣಿ ಸುದ್ದಿಜಾಲ ಕೋಲಾರ
ಬಜರಂಗದಳ ಹಾಗೂ ವಿಶ್ವಹಿಂದೂಪರಿಷತ್ ಆಶ್ರಯದಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಶೌರ್ಯಜಾಗರಣ ರಥಯಾತ್ರೆ ಕೋಲಾರದ ಪ್ರಮುಖ ರಥ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದು, ಸಂಸದ ಎಸ್.ಮುನಿಸ್ವಾಮಿ ಸೇರಿದಂತೆ ಬಜರಂಗದಳ ಮುಖಂಡರು ನೇತೃತ್ವ ವಹಿಸಿದ್ದರು.
ಸಂಸದ ಎಸ್.ಮುನಿಸ್ವಾಮಿ ರಥಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿ, ನಮ್ಮದು ಶೌರ್ಯ ಮತ್ತು ತ್ಯಾಗದ ಪರಂಪರೆಯಾಗಿದೆ, ಹಿಂದೂಗಳು ಎಂದಿಗೂ ಇತರರ ಮೇಲೆ ಧಾಳಿ ಮಾಡಿದ ನಿದರ್ಶನಗಳಿಲ್ಲ, ನಮ್ಮ ಧರ್ಮ ಶಾಂತಿ, ಸೌಹಾರ್ದತೆಯನ್ನು ಸ್ಥಾಪಿಸುವ ಧ್ಯೇಯ ಹೊಂದಿದೆ ಎಂದು ತಿಳಿಸಿದರು.
ಹಿಂದೂ ಧರ್ಮ ಎಂದು ವಿಶ್ವಕ್ಕೆ ಮಾನ್ಯವಾಗಿದೆ, ನಮ್ಮ ಸನಾತನ ಸಂಸ್ಕೃತಿಯ ಯೋಗಕ್ಕೆ ವಿಶ್ವವೇ ಬೆರಗಾಗಿ ಅಳವಡಿಸಿಕೊಂಡಿದೆ, ವಸುದೈವ ಕುಟುಂಬಕA ಎಂಬ ಧ್ಯೇಯ ವಾಕ್ಯವನ್ನು ನಮ್ಮ ಭಾರತೀಯ ಸಂಸ್ಕೃತಿ ಹೊಂದಿದ್ದು, ಅದೇ ಉದ್ದೇಶವನ್ನು ಸಪಲಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದರು.
ಇಡೀ ವಿಶ್ವದಲ್ಲಿ ಶಾಂತಿ ಸ್ಥಾಪನೆಗೆ ಭಾರತವೇ ಮುಂದಾಳತ್ವ ವಹಿಸುವಂತಾಗಿದೆ, ಮೋದಿಯವರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಭಾರತ ವಿಶ್ವಮಾನ್ಯವಾಗಲಿದೆ ಎಂದ ಅವರು, ನಮ್ಮ ಸಂಸ್ಕೃತಿಯನ್ನು ಗೌರವಿಸೋಣ ನಾವೂ ಪಾಲಿಸುವ ಮೂಲಕ ಉಳಿಸಿ ಬೆಳೆಸೋಣ ಎಂದರು.
ರಥಯಾತ್ರೆಯಲ್ಲಿ ಬಜರಂಗದಳ, ವಿಶ್ವಹಿಂದೂಪರಿಷತ್ ಪದಾಧಿಕಾರಿಗಳು, ಕಾರ್ಯಕರ್ತರು ಅನೇಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ರಥಯಾತ್ರೆಯುದ್ದಕ್ಕೂ ಸಂಸದ ಎಸ್.ಮುನಿಸ್ವಾಮಿ ಬೈಕ್ ಓಡಿಸುವ ಮೂಲಕ ಪಾಲ್ಗೊಂಡು ರಥಯಾತ್ರೆಯನ್ನು ಬೀಳ್ಕೊಟ್ಟರು.
ಬಾಕ್ಸ್
ಉಡುಪಿಯಲ್ಲಿ ಆರಂಭಗೊAಡಿರುವ ಶೌರ್ಯಜಾಗರಣ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತಿದ್ದು, ಕೋಲಾರದಲ್ಲಿ ಸೋಮೇಶ್ವರ ಸ್ವಾಮಿ ದೇವಾಲಯದಿಂದ ಆರಂಭಗೊAಡು ಕಾಲೇಜು ವೃತ್ತ, ದೊಡ್ಡಪೇಟೆ, ಬ್ರಾಹ್ಮಣರ ಬೀದಿ, ಕಾಳಮ್ಮ ಗುಡಿ ರಸ್ತೆ, ಅಮ್ಮವಾರಿಪೇಟೆ ವೃತ್ತ, ಎಂ.ಜಿ.ರಸ್ತೆಗೆ ಆಗಮಿಸಿ ಅಲ್ಲಿಂದ ಇಟಿಸಿಎಂ ಆಸ್ಪತ್ರೆ ರಸ್ತೆಯ ಮೂಲಕ ಯಲಹಂಕಕ್ಕೆ ತೆರಳಿತು.
ಚಿತ್ರ ೦೬ ಕೆ.ಎಲ್.ಆರ್.೦೪ : ಬಜರಂಗದಳ ಹಾಗೂ ವಿಶ್ವಹಿಂದೂಪರಿಷತ್ ಆಶ್ರಯದಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಶೌರ್ಯಜಾಗರಣ ರಥಯಾತ್ರೆ ಕೋಲಾರದ ಪ್ರಮುಖ ರಥ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದು, ಸಂಸದ ಎಸ್.ಮುನಿಸ್ವಾಮಿ ಸೇರಿದಂತೆ ಬಜರಂಗದಳ ಮುಖಂಡರು ನೇತೃತ್ವ ವಹಿಸಿದ್ದರು.