ನ್ಯೂಸ್

ಕೋಲಾರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ೧೯ ಅಭ್ಯರ್ಥಿಗಳ ನಾಮಪತ್ರಗಳ ಅಂಗೀಕಾರ / ೬ ನಾಮಪತ್ರಗಳು ತಿರಸ್ಕೃತ

ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ನಾಮಪತ್ರಗಳ ಪರಿಶೀಲನೆ ಶುಕ್ರವಾರ ನಡೆಯಿತು. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷ ನಾಮಪತ್ರಗಳ ಪರಿಶೀಲನೆ ನಡೆಸಿದರು. ಹತ್ತೊಂಬತ್ತು ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದು, ಚುನಾವಣಾಧಿಕಾರಿಗಳು ಅಂಗೀಕರಿಸಿದ್ದಾರೆ. ಕ್ರಮಬದ್ಧವಿಲ್ಲದ ಆರು ಮಂದಿ ಅಭ್ಯರ್ಥಿಗಳ ನಾಮಪತ್ರಗಳನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ.

ಈ ಕೆಳಕಂಡ ಹತ್ತೊಂಬತ್ತು ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರವಾಗಿವೆ. ಕೆ.ವಿ. ಗೌತಮ್ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಎಂ. ಮಲ್ಲೇಶ ಬಾಬು ಜನತಾದಳ (ಜಾತ್ಯತೀತ), ಸುರೇಶ್. ಎಸ್.ಬಿ ಬಹುಜನ ಸಮಾಜ ಪಕ್ಷ, ಡಿ. ಗೋಪಾಲಕೃಷ್ಣ ಸೊಷಿಯಲಿಸ್ಟ್ ಪಾರ್ಟಿ (ಇಂಡಿಯಾ), ತಿಮ್ಮರಾಯಪ್ಪ ರಿಪಬ್ಲಿಕ್ ಪಾರ್ಟಿ ಆಪ್ ಇಂಡಿಯಾ- (ಕರ್ನಾಟಕ) ಪಕ್ಷ, ದೇವರಾಜ ಎ. ಉತ್ತಮ ಪ್ರಜಾಕೀಯ ಪಾರ್ಟಿ, ಕೆ.ಆರ್. ದೇವರಾಜ ದಿಲ್ಲಿ ಜನತಾ ಪಾರ್ಟಿ, ಎ.ವಿ.ಮಹೇಶ್. ಕರ್ನಾಟಕ ರಾಷ್ಟç ಸಮಿತಿ, ಎಂ.ಸಿ ಹಳ್ಳಿ ವೇಣು ವಿಡುತಲೈ ಚಿರೈತಗಲ್ ಕಚ್ಚಿ.

ಈ ಕೆಳಕಂಡ ಪಕ್ಷೇತರ ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರವಾಗಿವೆ. ಎನ್.ಕೃಷ್ಣಯ್ಯ, ಮೇಡಿಹಾಳ ಎಂ.ಚAದ್ರಶೇಖರ, ಎಸ್.ಎನ್ ನಾರಾಯಣಸ್ವಾಮಿ. ವಿ.ಎಂ.ಎಸ್. ಬದರಿನಾರಾಯಣ, ಎಂ. ಮುನಿಗಂಗಪ್ಪ, ಆರ್. ರಾಜೇಂದ್ರ, ಆರ್. ರಂಜಿತ್ ಕುಮಾರ್, ಡಾ. ಎಂ. ವೆಂಕಟಸ್ವಾಮಿ, ಹೋಳೂರು ಶ್ರೀನಿವಾಸ, ಹೆಚ್.ಎನ್.ಸುಮನ್.

ಈ ಕೆಳಕಂಡ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿಲ್ಲ ಎಂಬ ಕಾರಣಕ್ಕೆ ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ.
ಬಿ.ಇ.ವಿಶ್ವನಾಥ್, ಕೆ.ಹೆಚ್.ಮಧುಸೂದನ್, ಎಲ್. ಬಾಬು, ಎ.ಟಿ. ಕೃಷ್ಣನ್, ಎನ್.ಜೆ. ನರಸಿಂಹಮೂರ್ತಿ, ಜಿ. ಲಲಿತಾ.