ನ್ಯೂಸ್

ಕೋಲಾರ ರಾಷ್ಟಿçÃಯ ಹೆದ್ದಾರಿ ೭೫ರ ಆಟೋದಲ್ಲಿ ಶವ ಪತ್ತೆ / ದುಷ್ಕರ್ಮಿಗಳಿಂದ ಕೊಲೆ

ವಿಜಯವಾಣಿ ಸುದ್ದಿಜಾಲ ಕೋಲಾರ :

ಕೋಲಾರದ ರಾಷ್ಟಿçÃಯ ಹೆದ್ದಾರಿ ೭೫ರ ಕೆಂದಟ್ಟಿ ಬಳಿ ಮಂಗಳವಾರ ಬೆಳ್ಳಿಗ್ಗಿನ ಜಾವ ಆಟೋವೊಂದರಲ್ಲಿ ವ್ಯಕ್ತಿಯ ಶವವೊಂದು ಪತ್ತೆಯಾಗಿದ್ದು, ದುಷ್ಕರ್ಮಿಗಳನ್ನು ವ್ಯಕ್ತಿಯನ್ನು ಕೊಲೆ ಮಾಡಿ ಆಟೋದಲ್ಲಿಯೇ ಶವವನ್ನು ಬಿಟ್ಟು ಪರಾರಿಯಾಗಿದ್ದಾರೆ.

ಕೊಲೆಯಾದ ವ್ಯಕ್ತಿ ಬಂಗಾರಪೇಟೆ ತಾಲ್ಲೂಕಿನ ಎಳೆಸಂದ್ರ ಗ್ರಾಮದ ಆಫ್ರೀದ್ (೨೬) ಎಂದು ತಿಳಿದು ಬಂದಿದೆ. ಮಂಗಳವಾರ ಮುಂಜಾನೆ ಈ ಕೊಲೆ ನಡೆದಿದ್ದು, ಮೃತ ವ್ಯಕ್ತಿಯ ತಲೆಗೆ ದುಷ್ಕರ್ಮಿಗಳು ಮಾರಕಾಸ್ತçಗಳಿಂದ ಹೊಡೆದಿದ್ದು, ಶವ ಪತ್ತೆಯಾದ ಆಟೋದಲ್ಲಿ ರಕ್ತ ಸುರಿದಿರುವ ಕಾರಣ ಬೆಳ್ಳಗ್ಗಿನ ಜಾವವೇ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಕೊಲೆ ಮಾಡಿರುವ ದುಷ್ಕರ್ಮಿಗಳು ಆಟೋ ಸಮೇತ ಪರಾರಿಯಾಗಿದ್ದು, ಕೋಲಾರ ಗ್ರಾಮಾಂತರ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡು ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ. ಮೃತ ಆರೋಪಿ ಗಾಂಜಾ ಸೇದುತ್ತಿದ್ದ ಎಂದು ಅವರ ಪೋಷಕರ ಕಡೆಯಿಂದ ಮಾಹಿತಿ ಲಭ್ಯವಾಗಿದ್ದು, ಗಾಂಜಾ ಸೇದುವ ಮತ್ತಿನಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಚಿತ್ರ ೨೧ ಕೆ.ಎಲ್.ಆರ್. ೦೬ : ಆಟೋದಲ್ಲಿ ಶವ ಬಿಟ್ಟು ಪರಾರಿಯಾಗಿರುವ ದುಷ್ಕರ್ಮಿಗಳು