ನ್ಯೂಸ್

ಕೋಲಾರ ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಮತ್ತೆ ಕುಸಿತ / ಗುಣಮಟ್ಟವಿಲ್ಲದ ಟೊಮೆಟೋ ಮಾರುಕಟ್ಟೆಗೆ / ಫಲವತ್ತತೆ ಕಳೆದುಕೊಂಡಿರುವ ಕೋಲಾರ ಜಿಲ್ಲೆಯ ಭೂಮಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಟಮೆಟೋ ಬೆಲೆ ಮತ್ತೆ ಕುಸಿತ ಕಂಡಿದೆ. ಕಳೆದ ವಾರದ ಹಿಂದೆ ೧೫ ಕೆ.ಜಿ.ಬಾಕ್ಸ್ ೬೦೦ ರಿಂದ ೭೦೦ ರೂ.ಗಳ ತನಕ ಮಾರಾಟವಾಗಿತ್ತು. ಈಗ ಒಂದು ವಾರದಿಂದ ಮತ್ತೆ ದಿಢೀರನೆ ಕುಸಿತ ಕಂಡಿದ್ದು, ೧೫ ಕೆ.ಜಿ.ಬಾಕ್ಸ್ ೧೫೦ ರಿಂದ ೪೦೦ ರೂ.ಗಳ ತನಕ ಮಾರಾಟವಾಗುತ್ತಿದೆ.

ಕೋಲಾರದ ಟೊಮೆಟೋ ಗುಣಮಟ್ಟ ಕಳೆದುಕೊಳ್ಳುತ್ತಿರುವುದರಿಂದ ಹೊರ ಜಿಲ್ಲೆಗಳಾದ ಚಿತ್ರದುರ್ಗ, ಹೊರರಾಜ್ಯಗಳಾದ ಆಂಧ್ರಪ್ರದೇಶದಿAದ ಬರುವ ಗುಣಮಟ್ಟದ ಟೊಮೆಟೋಗೆ ಬೆಲೆ ಸಿಗುತ್ತಿದೆ. ಮಹಾರಾಷ್ಟç ಮತ್ತು ಆಂಧ್ರಪ್ರದೇಶದಲ್ಲಿ ಟೊಮೆಟೋ ಉತ್ಪತ್ತಿ ಹೆಚ್ಚಾಗುತ್ತಿರುವುದರಿಂದ ದೇಶದ ವಿವಿಧ ಭಾಗಗಳಿಗೆ ಅಲ್ಲಿಂದಲೇ ರಫ್ತಾಗುತ್ತಿರುವುದರಿಂದ ಕೋಲಾರದ ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಕುಸಿಯತೊಡಗುತ್ತಿದೆ.

ಇತ್ತೀಚೆಗೆ ಒಂದು ತಿಂಗಳಿAದ ಮಳೆ ಹೆಚ್ಚಾಗಿರುವ ಕಾರಣ ಹವಾಮಾನದಲ್ಲಿ ವೈಪ್ಯರೀತ್ಯಗಳು ಹೆಚ್ಚಾಗಿರುವ ಕಾರಣ ಗುಣಮಟ್ಟದ ಟೊಮೆಟೋ ಬೆಳೆಯಲು ರೈತರಿಂದ ಸಾಧ್ಯವಾಗದೇ ಇರುವುದರಿಂದ ಟೊಮೆಟೋ ಬೆಲೆ ಏರಿಕೆ ಆಗದೇ ಇರುವುದು ಒಂದು ಕಾರಣವಾದರೆ, ಕೋಲಾರ ಜಿಲ್ಲೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಭೂಮಿ ಕಡಿಮೆ ಇರುವ ಕಾರಣ ಅಜ್ಜ ತಾತನ ಕಾಲದಿಂದಲೂ ಇರುವ ಭೂಮಿಯಲ್ಲಿಯೇ ತರಕಾರಿ ಬೆಳೆಗಳು ಸೇರಿದಂತೆ ಟೊಮೆಟೋ ಬೆಳೆಯುತ್ತಿದ್ದು, ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳ ಸಿಂಪಡಣೆಯಿAದ ಭೂಮಿಯ ಫಲವತ್ತತೆ ಕಳೆದುಕೊಂಡಿರುವುದರಿAದ ಗುಣಮಟ್ಟದ ಟೊಮೆಟೋ ಬೆಳೆಯಲು ಕೋಲಾರದ ರೈತರಿಂದ ಸಾಧ್ಯವಾಗುತ್ತಿಲ್ಲ.

ಚಿತ್ರದುರ್ಗಕ್ಕೆ ವಲಸೆ :

ಕೋಲಾರ ರೈತರು ಚಿತ್ರದುರ್ಗ, ತುಮಕೂರು, ಮೈಸೂರು ಮುಂತಾದ ಜಿಲ್ಲೆಗಳಿಗೆ ವಲಸೆ ಹೋಗಿ ಅಲ್ಲಿ ಗುಣಮಟ್ಟದ ಟೊಮೆಟೋವನ್ನು ಬೆಳೆದು ಕೋಲಾರ ಮಾರುಕಟ್ಟೆಗೆ ತಂದು ಉತ್ತಮ ಬೆಲೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ತುಮಕೂರು ಜಿಲ್ಲೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ರೈತರು ಹತ್ತಾರು ಎಕೆರೆ ಜಮೀನನ್ನು ಹೊಂದಿದ್ದಾರೆ. ಆ ಭಾಗದ ಜಮೀನು ಫಲವತ್ತತೆಯಿಂದ ಕೂಡಿದೆ. ಮತ್ತು ಆ ಭಾಗದ ಜನಸಂಖ್ಯೆಗಿAತ ಹೆಚ್ಚು ಜಮೀನು ಇರುವುದರಿಂದ ಅಲ್ಲಿ ಅನೇಕ ಜಮೀನುಗಳು ಬೆಳೆ ಮಾಡದೆ ಖಾಲಿ ಉಳಿದಿದ್ದು, ಕೋಲಾರ ಜಿಲ್ಲೆಯ ರೈತರು ಆ ಭಾಗದ ರೈತರಿಂದ ಭೋಗ್ಯಕ್ಕೆ ಪಡೆದು ಟೊಮೆಟೋ ಬೆಳೆ ಮಾಡಲು ಮುಂದಾಗಿದ್ದಾರೆ.

ಗುಣಮಟ್ಟದ ಟೊಮೆಟೋ :

ಕೋಲಾರ ಜಿಲ್ಲೆಗೆ ಹೋಲಿಕೆ ಮಾಡಿದರೆ ಹೊರ ಜಿಲ್ಲೆಗಳಲ್ಲಿ ಬೆಳೆಯುವ ಟೊಮೆಟೋ ಗುಣಮಟ್ಟದಿಂದ ಕೂಡಿರುತ್ತದೆ. ಮತ್ತು ಹಣ್ಣು ಗಟ್ಟಿಯಾಗಿರುವುದರಿಂದ ರಫ್ತಿಗೂ ತಡೆಯುತ್ತದೆ. ಆದ್ದರಿಂದ ಅಲ್ಲಿನ ಟೊಮೆಟೋ ಕೋಲಾರದಲ್ಲಿ ೬೦೦ ರಿಂದ ೭೦೦ ರೂ.ಗಳಿಗೆ ಮಾರಾಟವಾದರೆ ಕೋಲಾರ ಜಿಲ್ಲೆಯ ಟೊಮೆಟೋ ೧೫೦ ರಿಂದ ೩೦೦ ರೂ.ಗಳ ತನಕ ಮಾರಾಟವಾದರೆ ಹೆಚ್ಚು ಎನ್ನುವಂತಾಗಿದೆ.

ಮಹಾರಾಷ್ಟçದ ನಾಸಿಕ್ ಮತ್ತು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆ ಸೇರಿದಂತೆ ಇತರೆ ಭಾಗಗಳಲ್ಲಿ ಹೆಚ್ಚು ಟೊಮೆಟೋ ಬೆಳೆಯುತ್ತಿರುವುದರಿಂದ ಅಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಟೊಮೆಟೋ ಫಸಲು ಹೆಚ್ಚಾಗಿ ಬರುತ್ತಿದ್ದು, ಗುಣಮಟ್ಟದಿಂದ ಕೂಡಿರುವ ಕಾರಣ ಅಲ್ಲಿಂದಲೇ ರಫ್ತಾಗುತ್ತಿರುವುದರಿಂದ ಕೋಲಾರ ಮಾರುಕಟ್ಟೆಗೆ ಬರುವ ವ್ಯಾಪಾರಸ್ಥರ ಸಂಖ್ಯೆ ಕಡಿಮೆಯಾಗಿರುವುದರಿಂದ ಕೋಲಾರ ಮಾರುಕಟ್ಟೆಯಲ್ಲಿ ಬೆಲೆ ಕುಸಿಯಲು ಕಾರಣವಾಗಿದೆ.

ಕೋಟ್

ಕಳೆದ ನಾಲ್ಕೆöÊದು ದಿನಗಳಿಂದ ಟೊಮೆಟೋ ೧೫ ಕೆ.ಜಿ.ಬಾಕ್ಸ್ ೧೫೦ ರೂ.ಗಳಿಂದ ೩೦೦ ರೂ.ಳವರೆಗೆ ಮಾರಾಟವಾಗುತ್ತಿತ್ತು. ಭಾನುವಾರ ೪೦೦ ರೂ.ಗಳಿಗೆ ಏರಿಕೆಯಾಗಿದೆ. ಭಾನುವಾರ ಮಾರುಕಟ್ಟೆಗೆ ಟೊಮೆಟೋ ಬರುವುದು ಕಡಿಮೆ. ಗುಣಮಟ್ಟದ ಟೊಮೆಟೋ ಇತ್ತೀಚೆಗೆ ಬರುತ್ತಿಲ್ಲ. ಬೆಲೆಯೂ ಕುಸಿಯುತ್ತಿದೆ. ಹೊರ ರಾಜ್ಯಗಳ ಟೊಮೆಟೋ ಈಗ ಬರುತ್ತಿಲ್ಲ. ಅಲ್ಲಿಂದಲೇ ಬೇರೆ ರಾಜ್ಯ ಮತ್ತು ದೇಶಗಳಿಗೆ ರಫ್ತಾಗುತ್ತಿರುವುದರಿಂದ ಕೋಲಾರ ಮಾರುಕಟ್ಟೆಯಲ್ಲಿ ಟೊಮೆಟೋಗೆ ಬೆಲೆ ಇಲ್ಲದಂತೆ ಆಗಿದೆ. ಹಾಗೂ ನಮ್ಮ ಜಿಲ್ಲೆಯ ಭೂಮಿ ಫಲವತ್ತತೆ ಕಳೆದುಕೊಂಡಿದೆ. ಗುಣಮಟ್ಟ ಇಲ್ಲದ ಟೊಮೆಟೋವನ್ನು ಕೇಳುವವರು ಇಲ್ಲದಂತೆ ಆಗಿದೆ.

-ಮುನೇಗೌಡ ಮಂಡಿ ಮಾಲೀಕ

ಚಿತ್ರ ೩೧ ಕೆ.ಎಲ್.ಆರ್. ೦೭ : ಕೋಲಾರ ಮಾರುಕಟ್ಟೆಯಲ್ಲಿ ಟೊಮೆಟೋ

ಚಿತ್ರ ೩೧ ಕೆ.ಎಲ್.ಆರ್. ೦೭ಎ : ಮುನೇಗೌಡ ಮಂಡಿ ಮಾಲೀಕ