ನ್ಯೂಸ್

ಕೋಲಾರ ಬಂದ್ ಯಶಸ್ವಿ / ಬೀದಿಗಿಳಿಯದ ಬಸ್, ಆಟೋ / ಅಂಗಡಿ ಮುಂಗಟ್ಟುಗಳು ಬಂದ್ / ಪರದಾಡಿದ ಪ್ರಯಾಣಿಕರು

ವಿಜಯವಾಣಿ ಸುದ್ದಿಜಾಲ ಕೋಲಾರ

ಕೇಂದ್ರ ಗೃಹ ಮಂತ್ರಿ ಅಮಿತ್‌ಶಾ ರವರು ಸಂಸತ್ತಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿರುವ ಹೇಳಿಕೆಯನ್ನು ಖಂಡಿಸಿ ಶುಕ್ರವಾರ ದಲಿತಪರ ಸಂಘಟನೆಗಳಿAದ ಕೋಲಾರ ಬಂದ್‌ಗೆ ನೀಡಿದ್ದ ಕರೆ ಯಶಸ್ವಿಯಾಗಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಶುಕ್ರವಾರ ಬೆಳ್ಳಿಗ್ಗೆ ೫ ಗಂಟೆಯಿAದಲೇ ಟೈರುಗಳಿಗೆ ಬೆಂಕಿ ಹಾಕುವ ಮೂಲಕ ಪ್ರತಿಭಟನಾಕಾರರು ರಸ್ತೆಗಳಲ್ಲಿ ಪ್ರತಿಭಟನೆ ಮಾಡಿದರು. ಬಂದ್‌ಗೆ ಕನ್ನಡಪರ, ಪ್ರಗತಿಪರ, ವರ್ತಕರ ಸಂಘ, ಕಾಂಗ್ರೇಸ್ ಪಕ್ಷ ಬಂದ್‌ಗೆ ಬೆಂಬಲ ನೀಡಿದ್ದರು.

ಕೋಲಾರ ನಗರದಿಂದ ಹೊರ ಹೋಗುವ ಮತ್ತು ಒಳಬರುವ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿತ್ತು. ಪ್ರಮುಖ ವೃತ್ತಗಳಲ್ಲಿ ಪ್ರತಿಭಟನಾಕಾರರು ಮಾನವ ಸರಪಳಿಯನ್ನು ನಿರ್ಮಿಸಿ ಬಿಜೆಪಿ ಸರ್ಕಾರ ಮತ್ತು ಅಮಿತ್‌ಶಾ ಗೆ ಧಿಕ್ಕಾರಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.

ಕೆ.ಎಸ್.ಆರ್.ಟಿ.ಸಿ. ಡಿಪೋದಿಂದ ಬಸ್ಸುಗಳನ್ನು ಹೊರಬಿಡದೆ ಪ್ರತಿಭಟನೆ ನಡೆಸಿ ಡಿಪೋ ಮುಂಭಾಗದ ಗೇಟಿಗೆ ಬೀಗ ಜಡಿದರು. ಖಾಸಗಿ ಸೇರಿದಂತೆ ಸರ್ಕಾರಿ ಬಸ್ಸುಗಳು ರಸ್ತೆಗೆ ಇಳಿಯಲಿಲ್ಲ. ನಗರದ ಎಲ್ಲಾ ವೃತ್ತಗಳಲ್ಲಿ ಪ್ರತಿಭಟನಾಕಾರರು ಟೈರುಗಳಿಗೆ ಬೆಂಕಿ ಹಚ್ಚಿ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು.

ವಾಗ್ವಾದ :

ನಗರದಿಂದ ಹಾದುಹೋಗುವ ರಸ್ತೆಗಳ ಮೂಲಕ ಯಾವುದೇ ವಾಹನಗಳನ್ನು ಬಿಡದೆ ಅಡ್ಡಿಪಡಿಸಿದಾಗ ಪೋಲಿಸರ ಮತ್ತು ಪ್ರತಿಭಟನಾಕಾರರ ಮಧ್ಯೆ ಆಗಾಗ ವಾಗ್ವಾದಗಳು ನಡೆಯುತ್ತಲೇ ಇದ್ದವು. ಪ್ರತಿಭಟನಾಕಾರರು ದ್ವಿಚಕ್ರ ವಾಹನಗಳ ಮೂಳಕ ನಗರದ ರಸ್ತೆಗಳಲ್ಲಿ ಸಂಚರಿಸಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಸೂಚನೆ ನೀಡಿದರು.

ಪ್ರಯಾಣಿಕರ ಪರದಾಟ :

ಆಟೋ ಸೇರಿದಂತೆ ಬಸ್ಸುಗಳು ರಸ್ತೆಗಳಿಗೆ ಇಳಿಯದೇ ಇದ್ದ ಕಾರಣ ಪ್ರಯಾಣಿಕರು ಪರದಾಡುವಂತಾಗಿತ್ತು. ಬಂದ್ ಅರಿವಿಲ್ಲದೆ ಕೆಲವು ಪ್ರಯಾಣಿಕರು ಬಸ್ಸಿಗಾಗಿ ಬಸ್ ನಿಲ್ದಾಣದಲ್ಲಿ ಬಂದು ಕಾಯುವಂತಾಗಿತ್ತು. ಹೂವಿನ ವ್ಯಾಪಾರಿಗಳು, ತರಕಾರಿ ವ್ಯಾಪಾರಿಗಳು ಹಾಗೂ ರೈತರು ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದರು.

ಶಾಲೆಗಳಿಗೆ ಬಂದ್ ಬಿಸಿ :

ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗದ ಕಾರಣ ಹಾಜರಾತಿ ಇರಲಿಲ್ಲ. ಕೆಲವೊಂದು ಖಾಸಗಿಯವರು ವೈಯುಕ್ತಿಕವಾಗಿ ರಜೆ ಘೋಷಣೆ ಮಾಡಿದ್ದರು. ಸರ್ಕಾರಿ ಶಾಲಾ ಕಾಲೇಜುಗಳು ರಜೆ ಘೋಷಣೆ ಮಾಡದ ಕಾರಣ ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಇಲ್ಲದೆ ಮನೆಯಲ್ಲಿಯೇ ಉಳಿದರೆ ಶಾಲಾ ಕಾಲೇಜುಗಳಿಗೆ ಬಂದವರು ವಾಪಸ್ಸಾಗುತ್ತಿದ್ದುದು ಕಂಡು ಬಂದಿತ್ತು.

ಖಾಸಗಿ ಶಾಲಾ ಕಾಲೇಜುಗಳ ವಾಹನಗಳನ್ನು ಪ್ರತಿಭಟನಾಕಾರರು ತಡೆದು ವಾಪಸ್ಸು ಕಳುಹಿಸುತ್ತಿದ್ದರು. ಮಹಿಳಾ ಪಿ.ಯು.ಕಾಲೇಜು ಮುಂತಾದ ಕಾಲೇಜುಗಳಿಗೆ ತೆರಳಿದ ಪ್ರತಿಭಟನಾಕಾರರು ರಜೆ ಘೋಷಣೆ ಮಾಡುವಂತೆ ಒತ್ತಾಯಪಡಿಸಿ ವಿದ್ಯಾರ್ಥಿಗಳನ್ನು ವಾಪಸ್ಸು ಕಳುಹಿಸಿದರು.

ಖಾಸಗಿ ಕಾಲೇಜುಗಳಿಗೂ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಶಾಲಾ ಕಾಲೇಜುಗಳಿಗೆ ರಜೆ ಮಾಡುವಂತೆ ಒತ್ತಡ ಹೇರಿ ರಜೆ ನೀಡುವಂತೆ ಮಾಡಿದರು.

ಬಿಕೋ ಎಂದ ಬಸ್ ನಿಲ್ದಾಣ :

ಡಿಪೋದಿಂದ ಬಸ್ಸುಗಳು ಬಿಡದ ಕಾರಣ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಸ್ಸುಗಳು ಇರಲಿಲ್ಲ. ಪ್ರಯಾಣಿಕರು ಮಾತ್ರ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಮಹಿಳೆಯರು ಮತ್ತು ವಿದ್ಯಾರ್ಥಿಗಳು, ದಿವ್ಯಾಂಗರು ಕಾಯುತ್ತಾ ಪರದಾಡುತ್ತಿದ್ದುದು ಕಂಡುಬAತು.

ಪೋಲಿಸ್ ಬಿಗಿ ಬಂದೋಬಸ್ತ್ :

ನಗರದ ಎಲ್ಲಾ ವೃತ್ತಗಳಲ್ಲಿ ಹಾಗೂ ಪ್ರತಿಭಟನಾಕಾರರು ಇದ್ದ ಜಾಗದಲ್ಲಿ ಬಿಗಿ ಪೋಲಿಸ್ ಬಂದೋಬಸ್ತನ್ನು ಏರ್ಪಡಿಸಲಾಗಿತ್ತು. ಪ್ರಮುಖ ವೃತ್ತಗಳಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಾ ಕುಳೀತು ವಾಹನಗಳನ್ನು ಬಿಡದ ಕಾರಣ ನಗರಕ್ಕೆ ಅರ್ಧ ಕಿ.ಮೀ ದೂರದಲ್ಲಿ ಪೋಲಿಸರು ನಗರ ಪ್ರವೇಶಕ್ಕೆ ವಾಹನಗಳವರಿಗೆ ಅಡ್ಡಿಪಡಿಸಿ ಬೇರೆ ರಸ್ತೆಗಳಲ್ಲಿ ಸಂಚರಿಸುವAತೆ ಸೂಚನೆ ನೀಡುತ್ತಿದ್ದುದು ಕಂಡುಬAದಿತು.

ಅಂಗಡಿ ಮುಂಗಟ್ಟು ಬಂದ್ :

ನಗರದ ಎಂ.ಬಿ.ಎ ರಸ್ತೆ, ದೊಡ್ಡಪೇಟೆ, ಬಂಬೂಬಜಾರ್, ಅಮ್ಮಾವಾರಿಪೇಟೆ, ಹೊಸ ಬಸ್‌ನಿಲ್ದಾಣ, ಹಳೇ ಬಸ್‌ನಿಲ್ದಾಣ, ಡ್ಯೂಂಲೈಟ್ ಸರ್ಕಲ್, ಬಂಗಾರಪೇಟೆ ವೃತ್ತ, ಟೇಕಲ್ ರಸ್ತೆ, ಟವರ್ ಮುಂತಾದ ಪ್ರಮುಖ ರಸ್ತೆಗಳಲ್ಲಿನ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ, ಬಂದ್ ಬೆಂಬಲ ವ್ಯಕ್ತಪಡಿಸಿದರು.

ಅಮಿತ್‌ಶಾ ರಾಜಿನಾಮೆಗೆ ಒತ್ತಾಯ :

ಪಂಡಿತ್ ಮುನಿವೆಂಕಟಪ್ಪ, ಅಂಬರೀಷ್, ಕೃಷ್ಣಪ್ಪ, ವರದೇನಹಳ್ಳಿ ವೆಂಕಟೇಶ್ ಸೇರಿದಂತೆ ದಲಿತಪರ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು, ಅಮಿತ್‌ಶಾ ರಾಜೀನಾಮೆಗೆ ಒತ್ತಾಯಪಡಿಸುತ್ತಾ ಧಿಕ್ಕಾರಗಳನ್ನು ಕೂಗಿದರು.

ಎಂ.ಎಲ್.ಸಿ.ಕಾರಿಗೆ ಅಡ್ಡ :

ಎಂ.ಎಲ್.ಸಿ.ಗೋವಿAದರಾಜು ರವರ ಕಾರಿಗೆ ಅಡ್ಡಗಟ್ಟಿ ಕಾರನ್ನು ನಿಲ್ಲಿಸಿದರು. ಆಗ ಪೋಲಿಸರ ಮತ್ತು ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆಯಿತು. ಎಂ.ಎಲ್.ಸಿ.ಗೋವಿAದರಾಜು ಕಾರು ಇಳಿದು ಕಾರು ಬಿಡುವಂತೆ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದಾಗ ಕಾರು ಬಿಡಲಾಯಿತು.

ಚಿತ್ರ ೦೩ ಕೆ.ಎಲ್.ಆರ್. ೦೧ : ಬಂದ್ ಹಿನ್ನಲೆಯಲ್ಲಿ ಎಂ.ಜಿ.ರಸ್ತೆ ಬಿಕೋ ಎನ್ನುತ್ತಿರುವುದು.

ಚಿತ್ರ ೦೩ ಕೆ.ಎಲ್.ಆರ್. ೦೧ಎ : ಪ್ರತಿಭಟನಾಕಾರರ ಮತ್ತು ಪೋಲಿಸರ ಮಧ್ಯೆ ವಾಗ್ವಾದ ನಡೆಯುತ್ತಿರುವುದು.

ಚಿತ್ರ ೦೩ ಕೆ.ಎಲ್.ಆರ್. ೦೧ಬಿ : ಅಂಬೇಡ್ಕರ್ ಭಾವಚಿತ್ರವಿಟ್ಟು ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು.