ನ್ಯೂಸ್

ಕೋಲಾರ ನಗರದಲ್ಲಿ ಮತ್ತೆ ಸದ್ದು ಮಾಡುತ್ತಿರುವ ಕಸದ ರಾಶಿಗಳು / ನಗರವನ್ನು ಕ್ಲೀನ್‌ಸಿಟಿ ಮಾಡಲು ನಗರಸಭೆಯಿಂದ ಸಾಧ್ಯವೇ? / ಕಸದ ರಾಶಿಗಳನ್ನು ತೆರವುಗೊಳಿಸಲು ಸಾರ್ವಜನಿಕರಿಂದ ಒತ್ತಾಯ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ನಗರದಲ್ಲಿ ಕಸದ ರಾಶಿಗಳು ಮತ್ತೆ ಸದ್ದು ಮಾಡುತ್ತಿವೆ. ನಗರದಲ್ಲಿ ಜಿಲ್ಲಾದಿಕಾರಿಗಳ ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಮುಂದಾಗಿದ್ದಾರೆ. ಪ್ರತಿದಿನ ಬೀಳುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ನಗರಸಭೆಯಿಂದ ಸಾಧ್ಯವಾಗಿಲ್ಲ. ಇನ್ನು ನಗರವನ್ನು ಕ್ಲೀನ್ ಸಿಟಿ ಮಾಡಲು ಇವರಿಂದ ಸಾಧ್ಯವೇ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ನಗರದ ಬಂಬು ಬಜಾರ್ ರಸ್ತೆಯ ಮೇಲ್ಸೇತುವೆ ಮೇಲೆಯೇ ಸುಮಾರು ೨ ಲೋಡ್ ಆಗುವಷ್ಟು ತ್ಯಾಜ್ಯದ ರಾಶಿಗಳು ಬಿದ್ದಿವೆ. ಮೇಲ್ಸೇತುವೆ ಕೆಳಗಡೆ ರಾಜಕಾಲುವೆ ಹಾದುಹೋಗುತ್ತಿದೆ. ರಾಜಕಾಲುವೆಯಲ್ಲಿಯೂ ತ್ಯಾಜ್ಯ ತುಂಬಿದ್ದು, ಅಕ್ಕಪಕ್ಕದ ಮನೆಗಳವರಿಗೆ ದುರ್ವಾಸನೆ ಬೀರುವಂತೆ ಆಗಿದೆ. ಇದರ ಮಧ್ಯೆ ಕಾಲುವೆ ಪಕ್ಕದಲ್ಲಿಯೇ ತ್ಯಾಜ್ಯದ ರಾಶಿಗಳು ಬಿದ್ದಿವೆ.

ಇತ್ತೀಚೆಗೆ ಮಳೆ ಸುರಿಯುತ್ತಿರುವುದರಿಂದ ತ್ಯಾಜ್ಯ ಚರಂಡಿ ಸೇರುವಂತಾಗಿದೆ. ಹಾಗೂ ರಸ್ತೆಯಲ್ಲಿಯೇ ತ್ಯಾಜ್ಯ ಬಿದ್ದಿರುವುದರಿಂದ ರಸ್ತೆಯ ಅಕ್ಕಪಕ್ಕದಲ್ಲಿರುವ ವ್ಯಾಪಾರಸ್ಥರು ಸೇರಿದಂತೆ ಮನೆಳಗವರಿಗೆ ತ್ಯಾಜ್ಯದಿಂದ ಕಿರಿಕಿರಿ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಮಳೆಗಾಲ ಆಗಿರುವ ಕಾರಣ ರಾಜಕಾಲುವೆ ಅಂತರಗAಗೆ ಬೆಟ್ಟದ ಮೇಲಿಂದ ಬರುವ ನೀರು ರಾಜಕಾಲುವೆಯ ಮೂಲಕ ಕೋಲಾರಮ್ಮ ಕೆರೆಗೆ ನೀರು ಸೇರುತ್ತದೆ. ಇದರ ಜೊತೆಗೆ ತ್ಯಾಜ್ಯವು ಸೇರುವಂತೆ ಆಗಿದೆ.

ನಗರದ ಬಹುತೇಕ ಕಡೆಗಳಲ್ಲಿ ತ್ಯಾಜ್ಯ ರಸ್ತೆಗಳಲ್ಲಿ ರಾಶಿ ರಾಶಿಗಳಾಗಿ ಬೀಳುತ್ತಿವೆ. ನಗರಸಭೆಯವರು ಒಂದು ದಿನ ತ್ಯಾಜ್ಯ ವಿಲೇವಾರಿ ಮಾಡುವುದು ತಡವಾದರೆ ದೊಡ್ಡ ಮಟ್ಟದ ರಾಶಿಗಳು ಬೀಳುತ್ತಿವೆ. ಇತ್ತೀಚೆಗೆ ನಗರದಲ್ಲಿ ನಾಯಿಗಳ ಸಂತತಿ ಹೆಚ್ಚಾಗಿರುವುದರಿಂದ ಕಸದ ರಾಶಿಗಳ ಬಳಿ ನಾಯಿಗಳ ದಂಡು ಇರುತ್ತವೆ. ಹಿರಿಯರು ಮತ್ತು ಚಿಕ್ಕಮಕ್ಕಳು ರಸ್ತೆಗಳಲ್ಲಿ ಓಡಾಡಲು ಭಯಪಡುವಂತಹ ವಾತಾವರಣ ಉಂಟಾಗಿದೆ.

ಕಸದ ರಾಶಿಗಳಿಂದ ಬರುವ ವಾಸನೆಯನ್ನು ಸವಿಯುವುದಕ್ಕಿಂತ ನಾಯಿಗಳ ಭಯ ಹೆಚ್ಚಾಗಿ ಸಾರ್ವಜನಿಕರನ್ನು ಕಾಡುತ್ತಿದೆ. ಇದಕ್ಕೆ ಕಾರಣ ತ್ಯಾಜ್ಯ ರಾಶಿಗಳು ಆಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಮನೆಗಳಿಂದ ಬೀಳುವ ನಾನಾ ರೀತಿಯ ತ್ಯಾಜ್ಯವನ್ನು ರಸ್ತೆಗಳಲ್ಲಿಯೇ ಸುರಿಯುತ್ತಿರುವುದರಿಂದ ನಾಯಿಗಳಿಗೆ ಇದು ಆಹಾರವೂ ಆಗುತ್ತಿರುವುದರಿಂದ ನಾಯಿಗಳ ಸಂತತಿ ದಿನೇ ದಿನೇ ಹೆಚ್ಚಾಗುತ್ತಿದೆ.

ಜಿಲ್ಲಾಧಿಕಾರಿಗಳು ಉದ್ಯಾನವನಗಳನ್ನು ಸ್ವಚ್ಛ ಮಾಡಲು ಮುಂದಾಗಿದ್ದಾರೆ. ನಗರ ಸ್ವಚ್ಛತೆಗೊಳಿಸಿ ನಂತರ ಉದ್ಯಾನವನಗಳನ್ನು ಸ್ವಚ್ಛ ಮಾಡಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದ್ದು, ಕೋಲಾರ ನಗರದಲ್ಲಿ ರಹಮತ್ ನಗರ, ನೂರ್ ನಗರ, ಪೋಲ್‌ಷಾ ನಗರ, ಬೀಡಿ ಕಾಲೋನಿ ಗಳನ್ನು ಹೆಚ್ಚು ಕಸದ ರಾಶಿಗಳು ಬಿದ್ದಿದ್ದು, ಕೂಡಲೇ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಪಡಿಸುತ್ತಿದ್ದಾರೆ.

ಚಿತ್ರ ೨೩ ಕೆ.ಎಲ್.ಆರ್. ೦೨ : ನಗರದ ಬಂಬೂ ಬಜಾರ್ ಮುಖ್ಯರಸ್ತೆಯ ಮೇಲ್ಸೇತುವೆಯ ಮೇಲೆ ಕಸದ ರಾಶಿಗಳು ಬಿದ್ದಿರುವುದು.