ನ್ಯೂಸ್

ಕೋಲಾರ ಜಿಲ್ಲೆಯಾದ್ಯಂತ ಕಾಲುಬಾಯಿ ಜ್ವರಕ್ಕೆ ಲಸಿಕೆ ಅಭಿಯಾನ / ೧,೨೯,೪೪೬ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ / ಉಪ ನಿರ್ದೇಶಕ ಇ.ಟಿ.ರಾಮಯ್ಯ

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲೆಯಾದ್ಯಂತ ೨೦೨೦ನೇ ಜಾನುವಾರು ಗಣತಿ ಪ್ರಕಾರ ಒಟ್ಟು ೨,೩೬,೧೬೭ ಎಮ್ಮೆ ಮತ್ತು ಹಸುಗಳು ಇದ್ದು, ೩ನೇ ಸುತ್ತಿನಲ್ಲಿ ೨,೨೨,೫೮೨ ಹಸು ಮತ್ತು ಎಮ್ಮೆಗಳಿಗೆ ಕಾಲುಬಾಯಿ ರೋಗದ ವಿರುದ್ದ ಲಸಿಕೆ ಮಾಡಲಾಗಿದ್ದು, ಈ ವರ್ಷ ೪ನೇ ಸುತ್ತಿನ ಲಸಿಕೆ ಅಭಿಯಾನವನ್ನು ಕಳೆದ ತಿಂಗಳು ೨೬ ರಿಂದ ಪ್ರಾರಂಭಿಸಲಾಗಿದ್ದು, ಇದುವರೆವಿಗೂ ೧,೫೦,೪೪೬ ಜಾನುವಾರುಗಳಿಗೆ ಲಸಿಕೆಯನ್ನು ನೀಡಲಾಗಿದೆಯೆಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಇ.ಟಿ.ರಾಮಯ್ಯ ತಿಳಿಸಿದ್ದಾರೆ.

ಕಾಲುಬಾಯಿ ರೋಗದ ವಿರುದ್ಧ ಲಸಿಕೆ ಅಭಿಯಾನವನ್ನು ಜಿಲ್ಲೆಯಾದ್ಯಂತ ಪಶುಪಾಲನಾ ಇಲಾಖೆ ಮತ್ತು ಕೋಲಾರ ಹಾಲು ಒಕ್ಕೂಟದ ವೈದ್ಯರ ನೇತೃತ್ವದಲ್ಲಿ ೨೫೬ ಲಸಿಕಾ ಕಾರ್ಯಕರ್ತರು ಲಸಿಕಾ ಅಭಿಯಾನದಲ್ಲಿ ಪಾಲ್ಗೋಳ್ಳುವ ಮೂಲಕ ಪ್ರಗತಿ ಸಾಧಿಸಿದ್ದಾರೆ.

ಅ.೨೫ರ ತನಕ ಈ ಲಸಿಕೆ ಅಭಿಯಾನ ಕಾರ್ಯಕ್ರಮ ಮುಂದುವರೆಯಲಿದೆ. ಜಾನುವಾರುಗಳು ತಪ್ಪದೇ ಕಾಲುಬಾಯಿ ಜ್ವರದ ಲಸಿಕೆಯನ್ನು ಕಡ್ಡಾಯವಾಗಿ ಪಶುಪಾಲಕರು ಹಾಕಿಸಬೇಕಾಗಿರುತ್ತದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಆವರಣದಲ್ಲಿ ಪ್ರತಿ ಗ್ರಾಮದಲ್ಲಿ ಲಸಿಕೆ ಅಭಿಯಾನ ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಎಂದು ಉಪ ನಿರ್ದೇಶಕ ಇ.ಡಿ.ರಾಮಯ್ಯ ತಿಳಿಸಿದ್ದಾರೆ.

ರೋಗದ ಲಕ್ಷಣಗಳು

ಕಾಲುಬಾಯಿ ಜ್ವರ ರಾಸುಗಳಲ್ಲಿ ಕಾಣಿಸಿಕೊಂಡರೆ ಬಾಯಿ ಹುಣ್ಣಾಗುವುದು, ರಾಸುಗಳ ಪಾದಗಳಲ್ಲಿ ಬೊಬ್ಬೆ ಬರುವುದು, ಕಣ್ಣಲ್ಲಿ ನೀರು ಸೋರುವುದು, ನಡೆಯಲು ಆಗದೇ ಇರುವುದು, ಮೇವು ತಿನ್ನವುದು ದಿನೇ ದಿನೇ ಕಡಿಮೆ ಮಾಡುವುದು, ಹಾಲು ಕರೆಯುವ ಹಸು ಮತ್ತು ಎಮ್ಮೆಗಳಲ್ಲಿ ಹಾಲು ಕಡಿಮೆಯಾಗುವುದು ಇವು ರೋಗದ ಲಕ್ಷಣಗಳಾಗಿರುತ್ತವೆ.

ಬಾಕ್ಸ್

೨೦೦೩ರಲ್ಲಿ ಒಂದು ಬಾರಿ ಕೋಲಾರ ಜಿಲ್ಲೆಯಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದು, ಹೊರತುಪಡಿಸಿ ಇದುವರೆವಿಗೂ ಜಿಲ್ಲೆಯಲ್ಲಿ ಕಾಲುಬಾಯಿ ಜ್ವರ ರಾಸುಗಳಲ್ಲಿ ಕಾಣಿಸಿಕೊಂಡಿಲ್ಲ. ವರ್ಷಕ್ಕೆ ೨ ಬಾರಿ ಲಸಿಕೆ ಅಭಿಯಾನವನ್ನು ಮುಂಜಾಗ್ರತಾ ಕ್ರಮವಾಗಿ ರಾಸುಗಳಿಗೆ ಲಸಿಕೆ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ ಎಂದು ಉಪ ನಿರ್ದೇಶಕ ಇ.ಟಿ.ರಾಮಯ್ಯ ತಿಳಿಸಿದ್ದಾರೆ.

ಕೋಟ್

ಇಂಡಿಯನ್ ಇಮ್ಯುನಿಲಾಜಿಕಲ್ಸ್ ಹೈದರಾಬಾದ್ ಇವರಿಂದ ಅವಶ್ಯಕತೆ ಇರುವ ೨೩೬೦೦೦ ಡೋಸ್ ಲಸಿಕೆ ಸರಬರಾಜು ಆಗಿರುತ್ತದೆ. ಕಾಲುಬಾಯಿ ರೋಗದ ವಿರುದ್ಧ ಲಸಿಕೆ ಹಾಕುವ ಕಾರ್ಯಕ್ರಮ ಸುಗಮವಾಗಿ ನಡೆಯುತ್ತಿದೆ.

-ಇ.ಡಿ.ರಾಮಯ್ಯ, ಉಪ ನಿರ್ದೇಶಕರು, ಪಶುಪಾಲನಾ ಇಲಾಖೆ, ಕೋಲಾರ.

ಚಿತ್ರ ೦೭ ಕೆ.ಎಲ್.ಆರ್. ೦೨ : ಕೋಲಾರ ತಾಲ್ಲೂಕು, ವಿಟ್ಟಪ್ಪನಹಳ್ಳಿ ಗ್ರಾಮದಲ್ಲಿ ಕಾಲುಬಾಯಿ ರೋಗದ ವಿರುದ್ಧ ಲಸಿಕೆ ಅಭಿಯಾನ ಕೈಗೊಂಡಿರುವುದು.