ವಿಜಯವಾಣಿ ಸುದ್ದಿಜಾಲ ಕೋಲಾರ
ಪರಿಶಿಷ್ಟ ಜಾತಿ ಸಮುದಾಯದ ಬಹುದಿನದ ಬೇಡಿಕೆಯಾದ ಒಳ ಮೀಸಲಾತಿಗೆ ಸಮೀಕ್ಷೆ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿದ್ದು, ಸೋಮವಾರದಿಂದ ಮನೆ ಮನೆ ಸಮೀಕ್ಷೆ ಕಾರ್ಯ ಪ್ರಾರಂಭವಾಗಿದೆ.
ಬೆಳ್ಳಗ್ಗೆ ೭ ರಿಂದ ಸಂಜೆ ೬ ರ ತನಕ ಗಣತಿದಾರರು ಮನೆ ಮನೆ ತೆರಳಿ ಸಮೀಕ್ಷೆ ಮಾಡುವ ಅವಕಾಶ ಕಲ್ಪಿಸಲಾಗಿದ್ದು, ಬೆಳ್ಳಗ್ಗೆ ೭ ರಿಂದ ಸಮೀಕ್ಷೆ ಗಣತಿದಾರರಿಗೆ ಲಭ್ಯವಾಗಲಿದೆ. ಪ್ರಥಮ ದಿನವಾದ ಸೋಮವಾರ ೧೦.೩೦ ರ ನಂತರ ಆ್ಯಫ್ ಓಪನ್ ಆಗಿದ್ದರಿಂದ ತಡವಾಗಿ ಸಮೀಕ್ಷೆ ಪ್ರಾರಂಭವಾಯಿತು. ಜಿಲ್ಲಾಧಿಕಾರಿ ಎಂ.ಆರ್. ರವಿ ನಿವಾಸದಿಂದ ಚಾಲನೆ ನೀಡಬೇಕೆಂದು ಅಧಿಕಾರಿಗಳು ಕಾತುರದಿಂದ ಇದ್ದರು. ಆದರೆ ಆ್ಯಫ್ ತಡವಾಗಿ ಓಪನ್ ಆದ ಕಾರಣ ಜಿಲ್ಲಾಧಿಕಾರಿಗಳು ಕಾರ್ಯನಿಮಿತ್ತ ತೆರಳಿದ ಕಾರಣ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಗಣತಿದಾರೇ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿದ್ದಾರೆ.
ಒಳಮೀಸಲಾತಿ ಪರಿಶಿಷ್ಟ ಜಾತಿ ಸಮುದಾಯದ ಹಲವು ದಶಕಗಳ ಬೇಡಿಕೆಯಾಗಿದ್ದು, ಪರಿಶಿಷ್ಟ ಜಾತಿ ಸಮುದಾಯದಲ್ಲಿನ ಅತ್ಯಂತ ಹಿಂದುಳಿದ ಉಪಜಾತಿಗಳಿಗೆ ಒಳ ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ದಶಕಗಳಿಂದ ಹೋರಾಟಗಳು ನಡೆಯುತ್ತಿದೆ. ಕಳೆದ ೨೦೨೪ರ ಆ.೧.ರಂದು ರಾಜ್ಯಗಳಿಗೆ ಎಸ್.ಸಿ. ಒಳಮೀಸಲಾತಿ ಕಲ್ಪಿಸುವ ಅಧಿಕಾರವನ್ನು ಸರ್ವೋಚ್ಚ ನ್ಯಾಯಾಲಯದ ೭ ನ್ಯಾಯಾದೀಶರನ್ನು ಒಳಗೊಂಡ ಪೀಠವು ಮಹತ್ವದ ತೀರ್ಪಿನ ಆದೇಶವನ್ನು ಜಾರಿ ಮಾಡಿತ್ತು.
ಈ ಸಂಬAಧವಾಗಿ ೨೦೨೪ರ ನ.೧೨ಕ್ಕೆ ಎಸ್.ಸಿ. ಮೀಸಲು ವರ್ಗಿಕರಣಕ್ಕೆ ಶಿಫಾರಸ್ಸುಗಳ ಸಹಿತ ವರದಿಯನ್ನು ಸಲ್ಲಿಸಲು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್. ಎನ್.ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಏಕ ಸದಸ್ಯ ಪೀಠದ ಆಯೋಗವನ್ನು ರಚಿಸಿ, ರಾಜ್ಯ ಸರ್ಕಾರವು ಅದೇಶವನ್ನು ಹೊರಡಿಸಿತು.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಒಟ್ಟು ೧೦೧ ಉಪಜಾತಿಗಳಿದ್ದು, ಈ ಪೈಕಿ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂದ್ರ, ಉಪ ಜಾತಿಗಳು ಯಾವ ಜಾತಿಗೆ ಸೇರಿದೆ ಎಂಬ ಗೊಂದಲವನ್ನು ಇತ್ಯರ್ಥ ಪಡೆಸ ಬೇಕಾಗಿದೆ. ಇದಕ್ಕೆ ಸಂಬAಧಿಸಿದ ದಾಖಲೆ, ಪುರಾವೆ, ಅಂತರ್ ಹಿಂದುಳಿದಿರುವಿಕೆ ಮಾಹಿತಿಗಳನ್ನು ಇನ್ನಿತರ ಸಂಗ್ರಹಿಸಿ ವೈಜಿನಿಕ ಮತ್ತು ತರ್ಕಬದ್ದವಾಗಿ ಎಸ್.ಸಿ ಮೀಸಲು ವರ್ಗಿಕರಣದ ವರದಿಯನ್ನು ಸಿದ್ದಪಡಿಸಬೇಕಾಗಿದ್ದು ೨ ತಿಂಗಳ ಕಾಲವಕಾಶವನ್ನು ನೀಡಿದೆ.
ಆಯೋಗ ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು ಸಮೀಕ್ಷೆ ನಡೆಸುವಂತೆ ಶಿಫಾರಸ್ಸು ಮಾಡಿತ್ತು. ಅದರಂತೆ ರಾಜ್ಯ ಸಚಿವ ಸಂಪುಟ ಸಭೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗವು ಪರಿಶಿಷ್ಟಜಾತಿ ಒಳ ಮೀಸಲಾತಿ ಅನುಷ್ಠನಕ್ಕಾಗಿ ಸಮುದಾಯದ ಉಪಜಾತಿಗಳು ಪ್ರಾತಿನಿಧ್ಯತೆ ಕುರಿತು ಮನೆ ಮನೆಗೆ ತೆರಳಿ ಮೇ ೫ ರಿಂದ ಸಮೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ ಮೇ ೫ ರಿಂದ ೧೭ರ ವರೆಗೆ ಮನೆ ಮನೆಗೆ ತೆರಳಿ ಎಸ್.ಸಿ. ಸಮುದಾಯದ ಉಪಜಾತಿಗಳು ಪ್ರಾತಿನಿಧ್ಯತೆ ಆರ್ಥಿಕ ಸ್ಥಿತಿಗತಿಗಳನ್ನು ಸಮಗ್ರವಾಗಿ ಸಮೇಕ್ಷೆ ನೇತೃತ್ವದ ಏಕ ಸದಸ್ಯ ಪೀಠದ ಆಯೋಗಕ್ಕೆ ೬ ತಿಂಗಳಲ್ಲಿ ಸಮೀಕ್ಷೆ ನಡೆಸಿ ವರದಿ ನೀಡಲು ಸೂಚಿಸಿದೆ.
ಚಿತ್ರ ೦೫ ಕೆ.ಎಲ್.ಆರ್. ೦೮ : ಪರಿಶಿಷ್ಟ ಜಾತಿ ಜನಗಣತಿ ೩ ಹಂತಗಳಲ್ಲಿ ನಡೆಯಲು ಕೋಲಾರ ಜಿಲ್ಲೆಯಲ್ಲಿ ಸಿದ್ಧತೆಗಳು. ಇದರ ಸಂಗ್ರಹ ಲೋಗೋ