ನ್ಯೂಸ್

ಕೋಲಾರ ಜಿಲ್ಲೆಗೆ ನಮೋ ಹೈಸ್ಪೀಡ್ ರೈಲು ಭಾಗ್ಯ / ಕ್ರಿಯಾ ಯೋಜನೆಗೆ ಮುಂದಾದ ಕೇಂದ್ರ ಸರ್ಕಾರ / ಬೆಂಗಳೂರಿಗೆ ಮತ್ತಷ್ಟು ಹತ್ತಿರವಾಗಲಿರುವ ಕೋಲಾರ ಜಿಲ್ಲೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕೋಲಾರ ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆ ಕನಸಾಗುವ ಕಾಲ ಹತ್ತಿರವಾಗುತ್ತಿದ್ದು, ಕೋಲಾರದಿಂದ ಬೆಂಗಳೂರು ನಗರಕ್ಕೆ ನೇರ ರೈಲು ಸಂಪರ್ಕಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಕೇವಲ ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಿದ್ದ ನಮೋ ಭಾರತ್ ಹೈ ಸ್ಪೀಡ್ ರೈಲು ಸಂಪರ್ಕ ಕಲ್ಪಿಸಲು ಎನ್.ಸಿ.ಆರ್.ಟಿ.ಸಿ ಯ ಕಾರ್ಯಯೋಜನೆ ಸಿದ್ದಪಡಿಸಲು ಮುಂದಾಗಿದ್ದು, ಸೆಮಿ ಹೈಸ್ಪೀಡ್ ನಮೋ ಭಾರತ್ ಕಾರಿಡಾರ್ ನಿರ್ಮಾಣ ಮಾಡಲು ಡಿಪಿಆರ್ ತಯಾರಿಸಲು ಸೂಚನೆ ನೀಡಿದೆ.

ಈ ಯೋಜನೆ ಸಿದ್ದವಾದರೆ ಕೋಲಾರ ಬೆಂಗಳೂರು ನಗರಕ್ಕೆ ಹತ್ತಿರದಲ್ಲಿದೆ. ಇತ್ತೀಚೆಗೆ ಕೋಲಾರ ಜಿಲ್ಲೆಯ ನರಸಾಪುರ ಮತ್ತು ವೇಮಗಲ್ ಪ್ರದೆಶದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿರುವುದರಿಂದ ಕೋಲಾರ ಜನತೆಗೆ ನಮೋ ಭಾರತ್ ಹೈ ಸ್ಪೀಡ್ ರೈಲು ವರದಾನವಾಗಲಿದೆ. ಪ್ರತಿ ದಿನ ಬೆಂಗಳೂರು ನಗರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಯುವಕ-ಯುವತಿಯರು ಉದ್ಯೋಗ ಹರಸಿ ಬೆಂಗಳೂರು ನಗರಕ್ಕೆ ಹೋಗುತ್ತಿದ್ದಾರೆ. ಅವರಿಗೆ ಈ ರೈಲು ಸಂಚಾರದಿAದ ಅನುಕೂಲವಾಗುತ್ತದೆ.

ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಿದ್ದ ನಮೋ ಭಾರತ್ ಹೈಸ್ಪೀಡ್ ರೈಲುಗಳ ಸೌಕರ್ಯ ಕರ್ನಾಟಕಕ್ಕೂ ಸಿಗುವ ದಿನಗಳು ಈಗ ಹತ್ತಿರವಾಗುತ್ತಿವೆ. ಬೆಂಗಳೂರು ನಗರವನ್ನು ಕೇಂದ್ರವಾಗಿ ಇರಿಸಿಕೊಂಡು ಸುತ್ತಮುತ್ತಲಿನ ೧೫೦ ಕಿಲೋ ಮೀಟರ್ ವ್ಯಾಪ್ತಿಯ ಪ್ರಮುಖ ಪ್ರದೇಶಗಳಿಗೆ ಮೆಟ್ರೋ ಮಾದರಿಯ ಹೈಸ್ಪೀಡ್ ರೈಲುಗಳ ಸಂಚಾರ ವ್ಯವಸ್ಥೆ ಕಲ್ಪಿಸುವ ಕಾರ್ಯ ಯೋಜನೆಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸುತ್ತಿದೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ರಾಜಧಾನಿ ಪ್ರಾದೇಶಿಕ ಸಾರಿಗೆ ನಿಗಮ (ಎನ್.ಸಿ.ಆರ್.ಟಿ.ಸಿ,)ಕ್ಕೆ ರಾಜಧಾನಿ ಬೆಂಗಳೂರನ್ನು ಕೇಂದ್ರವಾಗಿ ಇಟ್ಟುಕೊಂಡು ಕೋಲಾರ, ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಂಗಾರಪೇಟೆ, ಮಾಲೂರು, ಮಾಗಡಿ ಹಾಗೂ ತಮಿಳುನಾಡಿನ ಹೊಸೂರುಗಳಿಗೆ ಹೈಸ್ಪೀಡ್ ರೈಲು ವ್ಯವಸ್ಥೆ ಕಾರ್ಯಗತಗೊಳಿಸಲು ಅಂದಾಜು ಯೋಜನೆ ಸಿದ್ಧಪಡಿಸುವಂತೆ ಕೇಂದ್ರ ಸರ್ಕಾರ ಎನ್ ಸಿ ಆರ್ ಟಿ ಸಿ ಗೆ ಸೂಚನೆ ನೀಡಿದೆ ಎನ್ನಲಾಗಿದೆ.

ಆರಂಭದಲ್ಲಿ ಬೆಂಗಳೂರು ನಗರವನ್ನು ಮಾತ್ರ ಗುರಿಯಾಗಿ ಇಟ್ಟುಕೊಂಡು ರೂಪಿಸಿದ್ದ ಈ ಯೋಜನೆಯನ್ನು ಈಗ ಸುತ್ತಮುತ್ತಲಿನ ತುಮಕೂರು, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಮಾಲೂರು, ಬಂಗಾರಪೇಟೆ, ಮಾಗಡಿ ಮತ್ತು ಹೊಸೂರುಗಳಿಗೂ ವಿಸ್ತರಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ.

ಈಗಾಗಲೇ ಯೋಜನೆ ಸಂಬAಧ ಕರ್ನಾಟಕ ಸರ್ಕಾರ, ರೈಲ್ವೆ ಇಲಾಖೆ ಮತ್ತು ಕೆ-ರೈಡ್ ನಡುವೆ ಮಾತುಕತೆ ನಡೆಯುತ್ತಿದೆ. ಸಬ್‌ಅರ್ಬನ್ ರೈಲು ಯೋಜನೆಗೆ ರೂ.೭,೪೩೮ ಕೋಟಿ ಸಾಲ ಪಡೆಯಲು ಜರ್ಮನಿಯ ಕೆ.ಎಫ್.ಡಬ್ಲ್ಯು ಸಂಸ್ಥೆ ಜೊತೆ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಇದರ ಜೊತೆಗೆ ಇ.ಐ.ಬಿ ಸಂಸ್ಥೆಯಿAದ ೩೦೦ ಮಿಲಿಯನ್ ಯೂರೋ ಸಾಲ ನೆರವು ಪಡೆಯಲು ಉದ್ದೇಶಿಸಲಾಗಿದೆ.

ಇದರ ಭಾಗವಾಗಿ ಮೊದಲ ಹಂತದಲ್ಲಿ ಬೆಂಗಳೂರು ಮೈಸೂರು (೧೪೫ಕಿ.ಮೀ), ಬೆಂಗಳೂರು-ಹೊಸಕೋಟೆ-ಕೋಲಾರ (೬೫ ಕಿ.ಮೀ) ಮತ್ತು ಬೆಂಗಳೂರು-ತುಮಕೂರು (೬೦ಕಿ.ಮೀ) ಹೈ ಸ್ಪೀಡ್ ನಮೋ ರೈಲು ಮಾರ್ಗಕ್ಕೆ ಅಗತ್ಯವಾದ ಕ್ರಿಯಾಯೋಜನೆ ರೂಪಿಸುವ ಕಾರ್ಯದಲ್ಲಿ ಎನ್.ಸಿ.ಆರ್.ಟಿ.ಸಿ ಯು ಮುಂದಾಗಿದೆ.

-----------------------------------------------------

ಏನಿದು ಎನ್.ಸಿ.ಆರ್.ಟಿ.ಸಿ :

ಆಯಾ ರಾಜ್ಯಗಳಲ್ಲಿ ಇರುವ ಸಾರಿಗೆ ಸಂಸ್ಥೆಗಳ ರೀತಿಯಲ್ಲೇ ರಾಷ್ಟ್ರೀಯ ಮಟ್ಟದಲ್ಲಿ ಹೈ ಸ್ಪೀಡ್ ಸಾರಿಗೆ ಸಂಪರ್ಕಕ್ಕಾಗಿ ರೂಪಿತವಾಗಿರುವ ಸಂಸ್ಥೆ ಎನ್.ಸಿ.ಆರ್.ಟಿ.ಸಿ. ಈ ಸಂಸ್ಥೆಯು ಉತ್ತರ ಭಾರತದ ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ದೆಹಲಿ ರಾಜ್ಯಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಆಯಾ ರಾಜ್ಯಗಳ ರಾಜಧಾನಿಗಳನ್ನು ಕೇಂದ್ರಕೃತವಾಗಿ ಇಟ್ಟುಕೊಂಡು ಸಮೀಪದ ನಗರಗಳಿಗೆ ಸುಗಮ ಹೈ ಸ್ಪೀಡ್ ರೈಲು ಸಂಚಾರ ವ್ಯವಸ್ಥೆ ಮಾಡಿಕೊಟ್ಟಿದೆ.

ಕೋಟ್

ನಮೋ ಭಾರತ್ ಹೈ ಸ್ಪೀಡ್ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಈ ಯೋಜನೆ ಕಾರ್ಯಗತಗೊಂಡರೆ ಕೋಲಾರ ಜಿಲ್ಲೆಯ ಅಭಿವೃದ್ದಿಗೆ ಒತ್ತು ನೀಡಿದಂತಾಗುತ್ತದೆ. ಸಂಸದ ಮಲ್ಲೇಶ್ ಬಾಬು ಈ ಯೋಜನೆಯ ಹಿಂದೆ ಬಿದ್ದು ಆದಷ್ಟು ಬೇಗ ಕಾರ್ಯಗತಗೊಳಿಸಲು ಕಾರ್ಯೋನ್ಮುಖರಾಗಬೇಕು. ಈ ಯೋಜನೆಯಿಂದ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವಂತೆ ಆಗುತ್ತದೆ. ಬೆಂಗಳೂರು ಮಹಾನಗರದ ಮೇಲೆ ಬೀಳುವ ಒತ್ತಡ ಕಡಿಮೆಯಾದಂತೆ ಆಗುತ್ತದೆ ಹಾಗು ವಾಣಿಜ್ಯ ಸಂಪರ್ಕ ಸೇರಿದಂತೆ ಕೃಷಿ ಉತ್ಪಾದನೆ ಮತ್ತು ರಪ್ತು, ಆಮ್ದು ಮುಂತಾದ ವ್ಯವಹಾರಗಳಿಗೆ ಅನುಕೂಲವಾಗಲಿದೆ.

-ಇರಗಸಂದ್ರ ವಿಶ್ವನಾಥ್, ಜೆಡಿಎಸ್ ಯುವ ಮುಖಂಡ

ಚಿತ್ರ ೧೫ ಕೆ.ಎಲ್.ಆರ್. ೦೧ : ಇರಗಸಂದ್ರ ವಿಶ್ವನಾಥ್, ಜೆಡಿಎಸ್ ಯುವ ಮುಖಂಡ ಭಾವಚಿತ್ರ

ಚಿತ್ರ ೧೫ ಕೆ.ಎಲ್.ಆರ್. ೦೧ : ನಮೋ ಭಾರತ ಹೈಸ್ಪೀಡ್ ರೈಲು ಸಂಗ್ರಹ ಚಿತ್ರ