ನ್ಯೂಸ್

ಕೋಲಾರ ಜಿಲ್ಲಾಧಿಕಾರಿಗಳ ವರ್ಗಾವಣೆಯ ವಿಷಯ / ಏಕಾಂಗಿಯಾದ ಶಾಸಕ ಎಸ್.ಎನ್ / ಜಿಲ್ಲಾ ಉಸ್ತುವಾರಿ ಸಚಿವರ, ಮಾಲೂರು, ಕೋಲಾರ ಶಾಸಕರ ಮಾತಿಗೆ ಮನ್ನಣೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕೋಲಾರ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಅಕ್ರಂಪಾಷಾರನ್ನು ವರ್ಗಾವಣೆ ಮಾಡಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕೋಲಾರ, ಮಾಲೂರು ಶಾಸಕರು ಯಶಸ್ವಿಯಾಗಿದ್ದು, ಅವರು ಅಂದುಕೊAಡAತೆ ನೂತನವಾಗಿ ಆಗಮಿಸುವ ಡಾ.ಎಂ.ಆರ್.ರವಿ ರವರನ್ನು ಕೋಲಾರ ಜಿಲ್ಲಾಧಿಕಾರಿಗಳಾಗಿ ವರ್ಗಾವಣೆ ಮಾಡಿಸಿಕೊಂಡು ಬರುವಲ್ಲಿಯೂ ಯಶಸ್ಸು ಕಂಡಿದ್ದಾರೆ.

ಈ ಹಿಂದೆ ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಅಕ್ರಂಪಾಷ ರವರನ್ನು ವರ್ಗಾವಣೆ ಮಾಡಿಸಲು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಎಂ.ಎಲ್.ಸಿ.ಅನಿಲ್ ಕುಮಾರ್, ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಬಳಿ ತೆರಳಿ ಮನವಿ ಸಲ್ಲಿಸಿದ್ದರು.

ಒಂದು ತಿಂಗಳ ಹಿಂದೆಯೇ ಅಕ್ರಂಪಾಷ ವರ್ಗಾವಣೆಯ ಸದ್ದು ಕೇಳಿ ಬಂತು. ಹೊಸ ಜಿಲ್ಲಾಧಿಕಾರಿಯಾಗಿ ಕೋಲಾರಕ್ಕೆ ಯಾರನ್ನು ತರಬೇಕು ಎಂಬ ವಿಷಯದಲ್ಲಿ ಬಹಿರಂಗವಾಗಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೋಲಾರ ಜಿಲ್ಲೆಯಲ್ಲಿ ಬಲಗೈ ಸಮುದಾಯದವರು ಹೆಚ್ಚಾಗಿದ್ದಾರೆ. ಅವರಿಗೆ ಯಾವುದೇ ರೀತಿಯ ಪ್ರಾತಿನಿತ್ಯ ದೊರೆತಿಲ್ಲ. ಆದ ಕಾರಣ ಕೋಲಾರಕ್ಕೆ ಬಲಗೈ ಸಮುದಾಯದ ಜಿಲ್ಲಾಧಿಕಾರಿಯೊಬ್ಬರನ್ನು ತರಬೇಕು ಎಂದು ವಾದ ಮುಂದಿಟ್ಟದ್ದರು. ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಧಿಕಾರಿಯಾಗಿದ್ದ ನಾಗರಾಜ್ ರವರನ್ನು ಕೋಲಾರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಬೇಕೆಂದು ಬೇಡಿಕೆಯನ್ನು ಸರ್ಕಾರದ ಮಟ್ಟದಲ್ಲಿ ಮುಂದಿಟ್ಟದ್ದರು.

ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕೋಲಾರ, ಮಾಲೂರು ಹಾಗೂ ಎಂ.ಎಲ್.ಸಿ. ಬೇರೆಯವರನ್ನು ಕೋಲಾರಕ್ಕೆ ವರ್ಗಾವಣೆ ಮಾಡಿಸಬೇಕೆಂದು ಮಹಿಳಾ ಐಎಎಸ್ ಅಧಿಕಾರಿಯೊಬ್ಬರ ಹೆಸರನ್ನು ಮುನ್ನಲೆಗೆ ತಂದಿದ್ದರು. ಇದರಿಂದ ಬೇಸರಗೊಂಡ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿರೋಧ ವ್ಯಕ್ತಪಡಿಸಿ ನನ್ನನ್ನು ಮುಖ್ಯಮಂತ್ರಿಗಳ ಬಳಿ ಕರೆದೊಯ್ದು ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಅಕ್ರಂಪಾಷ ವರ್ಗಾವಣೆ ಪತ್ರಕ್ಕೆ ಸಹಿ ಯಾಕೆ ಹಾಕಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ವಪಕ್ಷ ಶಾಸಕ ವಿರುದ್ಧವೂ ಬಹಿರಂಗವಾಗಿ ಆರೋಪಿಸಿದ್ದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಸಹ ಅಕ್ರಂಪಾಷ ರವರ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ ಕಾರಣ ಜಿಲ್ಲಾಧಿಕಾರಿ ವರ್ಗಾವಣೆಯ ವಿಷಯ ಸದ್ಯಕ್ಕೆ ತಟಸ್ಥವಾಗಿತ್ತು. ದಿಢೀರನೆ ಬುಧವಾರ ಜಿಲ್ಲಾಧಿಕಾರಿ ಅಕ್ರಂಪಾಷ ವರ್ಗಾವಣೆಯ ಆದೇಶ ಹೊರಬಿತ್ತು. ಗುರುವಾರ ನೂತನವಾಗಿ ಕೋಲಾರಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಧಿಕಾರ ವಹಿಸಿಕೊಂಡಿದ್ದಾರೆ.

ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿಯವರ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಇತ್ತೀಚೆಗೆ ಜಿಲ್ಲೆಯ ಕಾಂಗ್ರೇಸ್ ಶಾಸಕರಲ್ಲಿ ಅಸಮಾಧಾನದ ಹೊಗೆಯು ಕಾಣಿಸಿಕೊಂಡಿದೆ. ಕೋಲಾರ ಡೈರಿ ವಿಷಯದಲ್ಲಿ ಎಸ್.ಎನ್.ನಾರಾಯಣಸ್ವಾಮಿ ಕೆಲವೊಂದು ವಿಚಾರಗಳ ಬಗ್ಗೆ ಬಹಿರಂಗ ಹೇಳಿಕೆಯನ್ನು ನೀಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಕೋಲಾರದ ಕಡೆ ಮುಖ ಮಾಡುವುದನ್ನು ಮರೆತುಬಿಟ್ಟಿದ್ದಾರೆ.

ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸದ್ಯಕ್ಕೆ ಏಕಾಂಗಿಯಾಗಿದ್ದಾರೆ. ಕೋಲಾರ ಜಿಲ್ಲೆ ಕಾಂಗ್ರೇಸ್ ಪಕ್ಷದಲ್ಲಿ ೪ನೇ ಶಾಸಕರು ಒಬ್ಬ ಎಂ.ಎಲ್.ಸಿ. ಇದ್ದಾರೆ. ಕೆ.ಜಿ.ಎಫ್.ಶಾಸಕಿ ರೂಪಕಲಾ ರವರು ತನ್ನ ಕ್ಷೇತ್ರದ ಅಭಿವೃದ್ಧಿ ಹೊರತುಪಡಿಸಿ ಜಿಲ್ಲೆಯ ರಾಜಕಾರಣದಲ್ಲಿ ಮೂಗು ತೋರಿಸುತ್ತಿಲ್ಲ. ನೇರವಾಗಿ ಮುಖ್ಯಮಂತ್ರಿಗಳನ್ನು ಮತ್ತು ಆಯಾ ಇಲಾಖೆಗೆ ಸಂಬAಧಿಸಿದ ಮಂತ್ರಿಗಳ ಬಳಿ ತೆರಳಿ ಕ್ಷೇತ್ರಕ್ಕೆ ಬೇಕಾದ ಅನುದಾನ ಮತ್ತು ಇಲಾಖೆಗೆ ಸಂಬAಧಿಸಿದ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.

ಬಾಕ್ಸ್

ಜಿಲ್ಲಾಧಿಕಾರಿ ವರ್ಗಾವಣೆ ವಿಷಯದಲ್ಲಿ ಸಮುದಾಯದವರ ಹೆಸರನ್ನು ಪ್ರಸ್ತಾಪ ಮಾಡಿಲ್ಲ. ಎಸ್.ಎನ್.ನಾರಾಯಣಸ್ವಾಮಿ ವಿರುದ್ಧ ಕೆಲವು ಸಂಘ ಸಂಸ್ಥೆಗಳು ಆರೋಪ ಮಾಡಿ, ಜಿಲ್ಲಾಧಿಕಾರಿ ವಿಷಯದಲ್ಲಿ ಸಮುದಾಯದವರನ್ನೇ ತರಬೇಕೆಂದು ಹೇಳುವುದು ಸರಿಯಲ್ಲ. ಅಧಿಕಾರಿ ವಿಷಯದಲ್ಲಿ ಜಾತಿ ರಾಜಕಾರಣ ಅಗತ್ಯವೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು.

ಕೋಟ್

ಜಿಲ್ಲಾಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಕಾಂಗ್ರೇಸ್‌ನ ಶಾಸಕರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಕೈವಾಡ ಇದ್ದಂತೆ ಕಾಣುತ್ತಿಲ್ಲ. ನಾನಂತೂ ಇಂಥವರೇ ಜಿಲ್ಲಾಧಿಕಾರಿಯಾಗಿ ಬರಬೇಕು ಮತ್ತು ಹಿಂದಿನ ಜಿಲ್ಲಾಧಿಕಾರಿ ವರ್ಗಾವಣೆಯಾಗಬೇಕೆಂದು ಬೇಡಿಕೆನು ಇಟ್ಟಿಲ್ಲ, ಒತ್ತಡವೂ ತಂದಿಲ್ಲ. ಸರ್ಕಾರವೇ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿ ನೂತನ ಜಿಲ್ಲಾಧಿಕಾರಿಯನ್ನು ಕೋಲಾಕ್ಕೆ ನೇಮಕ ಮಾಡಿದ್ದಾರೆ. ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ಬಿಡುವುದು ಸರ್ಕಾರಕ್ಕೆ ಸಂಬAಧಿಸಿದ ವಿಷಯ.

-ಎಂ.ಎಲ್.ಸಿ. ಅನಿಲ್‌ಕುಮಾರ್

ಚಿತ್ರ ೨೮ ಕೆ.ಎಲ್.ಆರ್. ೦೬ : ಜಿಲ್ಲಾ ಉಸ್ತುವಾರಿ ಸಚಿವರ ಬೈರತಿ ಸುರೇಶ್ ರವರ ಭಾವಚಿತ್ರ

ಚಿತ್ರ ೨೮ ಕೆ.ಎಲ್.ಆರ್. ೦೬ಎ : ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ರವರ ಭಾವಚಿತ್ರ

ಚಿತ್ರ ೨೮ ಕೆ.ಎಲ್.ಆರ್. ೦೬ಬಿ : ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ರವರ ಭಾವಚಿತ್ರ

ಚಿತ್ರ ೨೮ ಕೆ.ಎಲ್.ಆರ್. ೦೬ಸಿ : ಎಂ.ಎಲ್.ಸಿ. ಅನಿಲ್‌ಕುಮಾರ್ ರವರ ಭಾವಚಿತ್ರ