ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ಕಛೇರಿಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ದುಡ್ಡೇ ದೊಡ್ಡಪ್ಪ ಎನ್ನುವಂತಾಗಿದೆ. ಯಾವುದೇ ಸರ್ಕಾರಿ ಕಛೇರಿಗಳಲ್ಲಿ ಹಣವಿಲ್ಲದೆ ಕೆಲಸ ನಡೆಯುವುದೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಇದಕ್ಕೆ ಸಾಕ್ಷಿ ಎಂಬAತೆ ಮಂಗಳವಾರ ಸಂಜೆ ಜಿಲ್ಲಾಡಳಿತ ಕೇಂದ್ರದಲ್ಲಿ ಲೋಕಾಯುಕ್ತ ಬಲೆಗೆ ಒಂದೇ ದಿನ ಮೂರು ಮಂದಿ ಸರ್ಕಾರಿ ನೌಕರರು ಸಿಕ್ಕಿಬಿದ್ದಿದ್ದಾರೆ. ಸರ್ಕಾರಿ ಕಛೇರಿಗಳಲ್ಲಿ ಸಣ್ಣ ಪುಟ್ಟ ಕೆಲಸಗಳಿಗೂ ಸಹ ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರಿ ಅಧಿಕಾರಿಗಳಿಂದ ತಿಂಗಳ ಮಾಮೂಲಿಯು ಒಂದು ಕಾರಣವಾದರೆ, ಕೋಲಾರ ಜಿಲ್ಲೆಗೆ ವರ್ಗಾವಣೆಯಾಗಿ ಬರುವ ಅಧಿಕಾರಿಗಳಿಂದಲೇ ಒಂದಷ್ಟು ಹಣ ಪಡೆಯುವುದು ಜನಪ್ರತಿನಿಧಿಗಳ ಮಾಮೂಲಿಯಾಗಿದೆ. ಜಿಲ್ಲೆಯ ಒಂದಿಬ್ಬರು ಶಾಸಕರನ್ನು ಹೊರತುಪಡಿಸಿದರೆ ಶಾಸಕರ ಹೆಸರಿನಲ್ಲಿ ಅವರ ಹಿಂಬಾಲಕರು ಮಾಮೂಲಿ ವಸೂಲಿ ಮಾಡುವುದು ರೂಢಿ ಮಾಡಿಕೊಂಡಿರುವುದರಿAದ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾರ್ವಜನಿಕರಿಂದ ಹಣ ಪಡೆಯುವುದು ರೂಢಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಮಂಗಳವಾರ ಸಂಜೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಭೂಪರಿವರ್ತನೆ ವಿಷಯದಲ್ಲಿ ಮಂಜುನಾಥ್ ಎಂಬುವವರಿAದ ಲಂಚ ಪಡೆಯುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಶಿರಸ್ತೇದಾರರಾಗಿದ್ದ ಚಂದ್ರಪ್ಪ ಹಾಗೂ ಪ್ರಥಮ ದರ್ಜೆ ಗುಮಾಸ್ತ ಅಜಯ್‌ಕುಮಾರ್ ಮತ್ತು ಗ್ರಾಮ ಸಹಾಯಕ ಮುನಿರಾಜು ಲೋಕಾಯುಕ್ತರ ಬಲೆಗೆ ಬಿದ್ದು, ಪೋಲಿಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಎ೧ ಆರೋಪಿಯಾಗಿರುವ ಅಜಯ್‌ಕುಮಾರ್ ಕೆಲಸದ ನಿಮಿತ್ತ ಬೆಂಗಳೂರು ತೆರಳಿದ್ದ ಕಾರಣ ಬಂಧನದಿAದ ತಪ್ಪಿಸಿಕೊಂಡಿದ್ದು, ಬಂಧನಕ್ಕಾಗಿ ಲೋಕಾ ಪೋಲಿಸರು ಹುಡುಕಾಟದಲ್ಲಿ ತೊಡಗಿದ್ದಾರೆ.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಯೇ ಲಂಚಾವತಾರ :
ಜಿಲ್ಲಾಧಿಕಾರಿ ಕಛೇರಿಯಲ್ಲಿಯೇ ಒಂದು ವರ್ಷದಿಂದೀಚೆಗೆ ಐದು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮತ್ತೊಬ್ಬರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಯೇ ಲಂಚಾವತಾರ ತಾಂಡವವಾಡುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಒಂದುವರ್ಷದಿAದ ಶಿರಸ್ತೇದಾರ ಗೋಪಾಲಕೃಷ್ಣ, ಎ.ಸಿ.ಕಛೇರಿಯಲ್ಲಿ ಗುಮಾಸ್ತ ಕೋಮಲ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದು ಜೈಲು ಸೇರಿದ್ದಾರೆ. ಹಾಗೂ ಮಾಜಿ ಸರ್ಕಾರ ನೌಕರರ ಸಂಘದ ಅಧ್ಯಕ್ಷ ಸರ್ವೇ ಇಲಾಖೆಯ ನೌಕರ ಸುರೇಶ್‌ಬಾಬು ಮನೆಯ ಮೇಲೆ ಲೋಕಾಯುಕ್ತರ ದಾಳಿ ಸೇರಿದಂತೆ ಮಂಗಳವಾರ ಸಂಜೆ ಹಾಲಿ ಅಧ್ಯಕ್ಷ ಅಜಯ್‌ಕುಮಾರ್ ಸೇರಿದಂತೆ ಜಿಲ್ಲಾಧಿಕಾರಿಗಳ ಕಛೇರಿಯ ಶಿರಸ್ತೇದಾರ ಚಂದ್ರಪ್ಪ ಮತ್ತು ಗ್ರಾಮ ಸಹಾಯಕ ಮುನಿರಾಜು ಲೋಕಾಯುಕ್ತ ಖಡ್ಡೆಗೆ ಬಿದ್ದ ಸಿಬ್ಬಂದಿಯಾಗಿದ್ದಾರೆ.
ಸರ್ಕಾರಿ ನೌಕರರ ಹಿತ ಕಾಪಾಡುವವರೇ ಲಂಚಾವತಾರ ಪ್ರಕರಣದಲ್ಲಿ ಎ೧ ಆರೋಪಿ :
ಸರ್ಕಾರಿ ನೌಕರರ ಹಿತ ಕಾಪಾಡಲು ಅಧ್ಯಕ್ಷರು ಲಂಚ ಪಡೆಯುವ ಪ್ರಕರಣದಲ್ಲಿ ಎ೧ ಆರೋಪಿಯಾಗಿದ್ದಾನೆ ಎಂದರೆ ಇನ್ನು ಸರ್ಕಾರಿ ನೌಕರರ ಹಿತ ಕಾಪಾಡುವುದು ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇದೇ ರೀತಿ ಮಾಜಿ ಅಧ್ಯಕ್ಷ ಸುರೇಶ್‌ಬಾಬು ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡು ಕೇಸು ದಾಖಲಿಸಿಕೊಂಡಿದ್ದಾರೆ. ಮಾಜಿ ಅಧ್ಯಕ್ಷ ಸುರೇಶ್‌ಬಾಬು ಮನೆ ಮೇಲೆ ಲೋಕಾಪೋಲಿಸರು ಒಂದು ವರ್ಷದಿಂದ ೩ ಬಾರಿ ದಾಳಿ ನಡೆಸಿದ್ದಾರೆ.
೧೪ ದಿನಗಳ ನ್ಯಾಯಾಂಗ ಬಂಧನ :
ಮಂಗಳವಾರ ಸಂಜೆ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿರುವ ಜಿಲ್ಲಾಧಿಕಾರಿಗಳ ಕಛೇರಿಯಿಂದ ಶಿರಸ್ತೇದಾರ ಚಂದ್ರಪ್ಪ ಮತ್ತು ಗ್ರಾಮ ಸಹಾಯಕ ಮುನಿರಾಜು ಮತ್ತು ಮುಳಬಾಗಿಲು ತಾಲ್ಲೂಕು ನಂಗಲಿ ಬಳಿಯ ಬಾರ್‌ವೊಂದರಲ್ಲಿ ತಿಂಗಳ ಮಾಮೂಲಿ ಪಡೆಯುತ್ತಿದ್ದ ನಂಗಲಿ ಪೋಲಿಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಅರ್ಜುನ್‌ಗೌಡ ಮತ್ತು ಗುಪ್ತದಳದ ಪೇದೆ ಸುರೇಶ್ ಎಂಬುವವರನ್ನು ಬಂಧಿಸಿರುವ ಲೋಕಾಯುಕ್ತ ಪೋಲಿಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ನಾಲ್ಕು ಮಂದಿಗೆ ೧೪ ದಿನಗಳ ನ್ಯಾಯಾಂಗ ಬಂಧನವಿರಿಸಿ ಜೈಲಿಗೆ ಕಳುಹಿಸಿದ್ದಾರೆ.
ಚಿತ್ರ ೧೨ ಕೆ.ಎಲ್.ಆರ್. ೦೧ : ಜಿಲ್ಲಾಡಳಿತ ಭವನ ಭಾವಚಿತ್ರ