ವಿಜಯವಾಣಿ ಸುದ್ದಿಜಾಲ ಕೋಲಾರ
ರಾಜ್ಯ ಒಕ್ಕಲಿಗರ ಸಂಘ ಯಾವ ದಿಕ್ಕಿನತ್ತ ಹೋಗುತ್ತಿದೆ. ಅಧಿಕಾರಕ್ಕಾಗಿ ಪದೇ ಪದೇ ಪದಾಧಿಕಾರಿಗಳ ಬದಲಾವಣೆ, ಆಡಳಿತಾಧಿಕಾರಿಗಳ ನೇಮಕ. ಇಲ್ಲಿ ನಡೆಯುತ್ತಿರುವ ವಿದ್ಯಾಮಾನಗಳು ನಗೆಪಾಟಲಿಗೆ ಈಡಾಗುತ್ತಿದೆ ಎಂದು ಪಟ್ಟದನಾಯನಹಳ್ಳಿ ಪೀಠಾಧ್ಯಕ್ಷರಾದ ಶ್ರೀ ನಂಜಾವದೂತ ಸ್ವಾಮೀಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
Pರಾಜ್ಯ ಒಕ್ಕಲಿಗರ ಸಂಘ ಹಾಗು ಜಿಲ್ಲಾ ಸಂಘದಿAದ ಶನಿವಾರ ರಂಗಮAದಿರಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಕೆಂಪೇಗೌಡ ಜಯಂತಿ ಆಚರಣೆಯಲ್ಲಿ ಬಂದಿದ್ದ ಪಲ್ಲಕ್ಕಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಒಕ್ಕಲಿಗರಿಗೆ ತನ್ನದೇ ಆದ ಸ್ಥಾನಮಾನವಿದೆ. ಆದರೆ ಒಕ್ಕಲಿಗರ ಸಂಘದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ, ಪ್ರತಿಷ್ಠೆಗಾಗಿ ಸಂಘವನ್ನು ಬೀದಿಗೆ ತಂದು ನಿಲ್ಲಿಸುವುದಾದರೆ ಸಮುದಾಯಕ್ಕೆ ಏನು ಸಂದೇಶ ಕೊಡುತ್ತೀರಿ? ಇತರೆ ಸಮುದಾಯದ ಸಂಘಗಳಿಗೆ ರಾಜ್ಯ ಒಕ್ಕಲಿಗರ ಸಂಘ ಮಾದರಿಯಾಗಬೇಕಿತ್ತು. ಆದರೆ ಇಲ್ಲಿ ಅಂತಹ ವಾತಾವರಣ ಕಂಡು ಬರುತ್ತಿಲ್ಲ ಎಂದು ನಿರ್ದೇಶಕರ ನಡೆಯ ವಿರುದ್ದ ಬೇಸರ ವ್ಯಕ್ತಪಡಿಸಿದರು.
ರಾಜ್ಯ ಒಕ್ಕಲಿಗರ ಸಂಘದಲ್ಲಿ ಮೆಡಿಕಲ್, ಇಂಜಿನೀಯರಿAಗ್ ಸೀಟು ಹಂಚಿಕೆ ದೊಡ್ಡ ಸಾಧನೆಯಾಗಬಾರದು. ಹಣ ಮಾಡುವುದಕ್ಕಾಗಿ ವಿದ್ಯಾಸಂಸ್ಥೆಗಳನ್ನು ಬೆಂಗಳೂರಿಗೆ ಸೀಮಿತಮಾಡಿ ಕೊಳ್ಳಬಾರದು. ವಿದ್ಯಾಸಂಸ್ಥೆಗಳನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಬೇಕು. ಬಲಿಷ್ಠ ಒಕ್ಕಲಿಗರಿಗೆ ಸೀಟುಗಳು ಸಿಗುವುದಾದರೆ ಬಡವರು ಎಲ್ಲಿಗೆ ಹೋಗಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರನ್ನು ಪ್ರಶ್ನಿಸಿದರು.
ಬಡತನ ರೇಖೆಗಿಂತ ಕಡಿಮೆ ಇರುವ ಸಮುದಾಯಕ್ಕೆ ಧ್ವನಿಯಾಗಿ ನಿಲ್ಲಬೇಕು. ಉಳ್ಳವರಿಗೆ ಸೀಟು ಹಂಚಿಕೆ ಮಾಡುವುದರ ಜೊತೆಗೆ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕೆಂದು ಕಿವಿಮಾತು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘವನ್ನು ರಾಜಕಾರಣಿಗಳು ಬೆದರಿಸುವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅಧಿಕಾರಕ್ಕಾಗಿ ನಡೆಯುತ್ತಿರುವ ಹಗ್ಗ-ಜಗ್ಗಾಟದಿಂದ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡುತ್ತಿದೆ. ಇನ್ಮುಂದೆ ಇಂತಹ ವಾತಾವರಣ ನಿರ್ಮಾಣವಾಗದಂತೆ ಎಚ್ಚರ ವಹಿಸಿ ಸಮುದಾಯಕ್ಕೆ ಸೇವೆ ಮಾಡುವ ಕೆಲಸ ಮಾಡಬೇಕೆಂದು ಹೇಳಿದರು.
ಹೊಟ್ಟೆಪಾಡಿಗಾಗಿ ವಿದ್ಯಾಭ್ಯಾಸ ಬೇಡ:
ಇವತ್ತಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೊಟ್ಟೆಪಾಡಿಗಾಗಿ ವಿದ್ಯಾಭ್ಯಾಸ ಮಾಡುವ ಮಟ್ಟಕ್ಕೆ ಬಂದಿದ್ದಾರೆ. ಕೇವಲ ಹಣ ಗಳಿಸುವ ಉದ್ದೇಶದಿಂದ ಶಿಕ್ಷಣ ಪಡೆದರೆ ಸಾಲದು. ದೇಶ-ರಾಜ್ಯ, ಸಮುದಾಯಕ್ಕೆ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು. ತಾವುಗಳು ಜೀವನದಲ್ಲಿ ಬೆಳೆದ ಬಂದ ದಾರಿಯನ್ನು ಮರೆಯದೆ ಆಗಾಗ ತಿರುಗಿ ನೋಡಬೇಕೆಂದರು.
ಪೂರ್ಣಗೊಳ್ಳದ ಒಕ್ಕಲಿಗರ ಸಂಘದ ಕಟ್ಟಡ: ಸ್ವಾಮೀಜಿ ಬೇಸರ
ಕೋಲಾರ ಜಿಲ್ಲಾ ಕೇಂದ್ರದಲ್ಲಿ ಒಕ್ಕಲಿಗ ಸಂಘದ ಕಟ್ಟಡದ ಕಾಂಗಾರಿ ವಿಳಂಭಕ್ಕೆ ಶ್ರಿ ನಂಜಾವದೂತ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ಕಳೆದ ಎರಡು ವರ್ಷಗಳಿಂದ ಕಾಂಗಾರಿಯನ್ನು ಯಾಕೆ ಪೂರ್ಣ ಗೊಳಿಸಲಿಲ್ಲ ಎಂದು ವೇದಿಕೆ ಮೇಲಿದ್ದ ಮುಖಂಡರನ್ನು ಪ್ರಶ್ನಿಸಿದರು.
ಸಮುದಾಯಲ್ಲಿ ಸಾಕಷ್ಟು ಮಂದಿ ಬಲಿಷ್ಠರಾಗಿದ್ದಾರೆ. ಅವರು ಮನಸ್ಸು ಮಾಡಿದರೆ ಒಕ್ಕಲಿಗರ ಸಂಘದ ಕಟ್ಟಡ ಒಂದೇ ವರ್ಷದಲ್ಲಿ ಪೂರ್ಣಗೊಳಿಸಬಹುದಾಗಿತ್ತು. ಕೆಲವು ಮಂದಿ ಕಟ್ಟಡಕ್ಕೆ ಅಗತ್ಯ ನೆರವು ನೀಡುವ ಬಗ್ಗೆ ಭರವಸೆಯನ್ನು ಕೊಟ್ಟಿದ್ದರು. ಆದರೆ ಯಾಕೆ ವಿಳಂಭ ಮಾಡುತ್ತಿದ್ದಾರೆ? ಸಮುದಾಯಕ್ಕೆ ಕೊಟ್ಟ ಭರವಸೆಯನ್ನು ಯಾರು ನಿರ್ಲಕ್ಷö್ಯ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಯುಪಿಎಸ್ಸಿಯಲ್ಲಿ ೧೬೦ನೇ ರ‍್ಯಾಂಕ್ ಪಡೆದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮದ ನಾಗೇಂದ್ರಬಾಬು ಅವರನ್ನು ಶ್ರಿ ನಂಜಾವದೂತಸ್ವಾಮೀಜಿ ಅವರು ಸನ್ಮಾನಿಸಿದರು.
ಜನಪ್ರತಿನಿಧಿಗಳ ಗೈರು:
ಕೋಲಾರ ಜಿಲ್ಲಾ-ರಾಜ್ಯ ಒಕ್ಕಲಿಗರ ಸಂಘದಿAದ ಹಮ್ಮಿಕೊಂಡಿದ್ದ ಪ್ರತಿಭಾ-ಪುರಸ್ಕಾರ ಕಾರ್ಯಕ್ರಮಕ್ಕೆ ಜಿಲ್ಲೆಯ ಜನಪ್ರತಿನಿದಿಗಳಿಗೆ ಆಹ್ವಾನ ನೀಡಲಾಗಿತ್ತು. ಆದರೆ ಯಾವೋಬ್ಬ ಜನಪ್ರತಿನಿಧಿಯೂ ಕಾರ್ಯಕ್ರಮದ ಕಡೆ ತಿರುಗಿ ನೋಡಲಲ್ಲ.
ಶಾಸಕರಾದ ಜಿ.ಕೆ ವೆಂಕಟಶಿವಾರೆಡ್ಡಿ, ಕೆ.ವೈ ನಂಜೇಗೌಡ, ಇಂಚರ ಗೋವಿಂದರಾಜು, ಎಂ.ಎಲ್ ಅನಿಲ್‌ಕುಮಾರ್, ಚಿದಾನಂದಗೌಡ, ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಮಾಜಿ ಶಾಸಕರಾದ ಕೆ.ಎಸ್.ಮಂಜುನಾಥಗೌಡ, ವೈ.ಎ ನಾರಾಯಣಸ್ವಾಮಿ, ತೂಪಲ್ಲಿ ಆರ್.ಚೌಡರೆಡ್ಡಿ ಯಾರು ಕೂಡ ಕಾರ್ಯಕ್ರಮದ ಕಡೆ ಮುಖ ಮಾಡದಿರುವುದು ಸಮುದಾಯದ ಆಕ್ರೋಶಕ್ಕೆ ಕಾರಣವಾಯಿತು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನAದನಾಥಸ್ವಾಮೀಜಿ ಆಶೀರ್ವಚನೆ ನೀಡಿದರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಕೋನಪ್ಪರೆಡ್ಡಿ, ಯಳುವಹಳ್ಳಿ ರಮೇಶ್ ಡಾ.ರಮೇಶ್, ಕೋಲಾರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ ಮಾತನಾಡಿದರು.
ವೇದಿಕೆಯಲ್ಲಿ ಹಿರಿಯ ವಕೀಲ ಬಿಸಪ್ಪಗೌಡ, ಗುತ್ತಿಗೆದಾರ ವಿ.ಕೃಷ್ಣಾರೆಡ್ಡಿ, ಸಿಎಂಆರ್ ಶ್ರೀನಾಥ್, ಲಕ್ಷಿö್ಮÃನಾರಾಯಣ್, ಪತ್ರಕರ್ತ ವಿ.ಮುನಿರಾಜು, ಆಲಂಗೂರು ಶಿವಣ್ಣ, ಬಣಕನಹಳ್ಳಿ ನಟರಾಜ್, ಬಾಬುಮೌನಿ, ಮಾಲೂರು ಪ್ರಭಾಕರ್, ವಕೀಲರ ಸಂಘದ ಅಧ್ಯಕ್ಷ ಮುನೇಗೌಡ, ಅರಾಭಿಕೊತ್ತನೂರು ನಂಜುAಡಗೌಡ, ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ, ಖಾಜಿಕಲ್ಲಹಳ್ಳಿ ಹರೀಶ್‌ಗೌಡ, ಸೀತಿಹೊಸೂರು ಮುರಳಿಗೌಡ, ಕಡಗಟ್ಟೂರು ವಿಜಯ್‌ಕುಮಾರ್, ರಾಮಚಂದ್ರಗೌಡ, ಮಮತ, ಪವನ್ ನಾರಾಯಣಸ್ವಾಮಿ ಮತ್ತಿತರಿದ್ದರು.
ಚಿತ್ರ ೨೭ ಕೆ.ಎಲ್.ಆರ್. ೦೫ Pರಾಜ್ಯ ಒಕ್ಕಲಿಗರ ಸಂಘ ಹಾಗು ಜಿಲ್ಲಾ ಸಂಘದಿAದ ಶನಿವಾರ ರಂಗಮAದಿರಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಕೆಂಪೇಗೌಡ ಜಯಂತಿ ಆಚರಣೆಯಲ್ಲಿ ಬಂದಿದ್ದ ಪಲ್ಲಕ್ಕಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ನಂಜಾವದೂತ ಸ್ವಾಮೀಜಿ, ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನAದನಾಥಸ್ವಾಮೀಜಿ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ ಮುಂತಾದವರಿದ್ದರು.