ನ್ಯೂಸ್

ಕೋಲಾರ ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿ, ಕಲೋತ್ಸವ ಸ್ವರ್ಧೆಗಳಿಗೆ ಚಾಲನೆ / ನೈಪುಣ್ಯತೆ ಹೊಂದಿ ಮಕ್ಕಳನ್ನು ಸ್ಪರ್ಧಾತ್ಮಕ ಪೈಪೋಟಿಗೆ ಸಿದ್ದಗೊಳಿಸಿ/ಡಿ.ಟಿ.ಶ್ರೀನಿವಾಸ್

ವಿಜಯವಾಣಿ ಸುದ್ದಿಜಾಲ ಕೋಲಾರ

ಕಲಿಕೆಗೆ ಪೂರಕವಾದ ನೈಪುಣ್ಯತೆ ಹೊಂದಿ ಮಕ್ಕಳಿಗೆ ಬೋಧನೆ ಮಾಡಿದರೆ ಮಾತ್ರವೇ ಶಿಕ್ಷಕ ವೃತ್ತಿಗೆ ನ್ಯಾಯ ಒದಗಿಸಬಹುದು ಮತ್ತು ಸ್ಪರ್ಧಾತ್ಮಕ ಪೈಪೋಟಿಗೆ ಅನುಗುಣವಾಗಿ ಮಕ್ಕಳನ್ನು ಸಿದ್ದಪಡಿಸಲು ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ತಿಳಿಸಿದರು.

ಮಂಗಳವಾರ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರತಿಭಾಕಾರಂಜಿ ಮತ್ತು ಕಲೋತ್ಸವ ಸ್ವರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ಜೀವನದಲ್ಲಿ ಶಿಸ್ತು ಇದ್ದರೆ ಮಾತ್ರವೇ ಗುರಿ ತಲುಪಲು ಸಾಧ್ಯ ಎಂಬ ಸತ್ಯ ಅರಿತು, ಮಕ್ಕಳಲ್ಲಿ ಶಿಸ್ತು ಮೂಡಿಸಿ, ಶಿಕ್ಷಣಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಲು ಬದ್ದತೆಯಿಂದ ಶಿಕ್ಷಕರು ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರತನ್ನಿ, ರಾಜ್ಯಮಟ್ಟದಲ್ಲೂ ಕೋಲಾರ ಜಿಲ್ಲೆ ಮಕ್ಕಳು ಸಾಧನೆ ಮಾಡಿ ಕೀರ್ತಿ ತನ್ನಿ ಎಂದು ಹಾರೈಸಿ, ಪ್ರತಿಭಾ ಕಾರಂಜಿ ಮಕ್ಕಳ ಸಾಧನೆಯ ಪ್ರದರ್ಶನಕ್ಕೆ ಸೂಕ್ತ ವೇದಿಕೆಯಾಗಿದೆ ಎಂದರು.

ಅನುದಾನಿತ ಶಾಲೆಗಳಲ್ಲಿನ ಹುದ್ದೆಗಳ ಭರ್ತಿಗೆ ಕ್ರಮ :

ಅನುದಾನಿತ ಶಾಲೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ೪೨೯ ಕೋಟಿ ಆರ್ಥಿಕ ಹೊರೆಯಾದರೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ನೇಮಕಾತಿ ಅಧಿಸೂಚನೆ ಹೊರಡಿಸಲು ಕ್ರಮವಹಿಸಲಾಗಿದೆ. ಶಿಕ್ಷಕರ ಎಲ್ಲಾ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಕಾಣಿಸುವುದು ತಮ್ಮ ಆದ್ಯತೆ ಎಂದು ತಿಳಿಸಿದರು.

ತಾವು ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ೭ನೇ ವೇತನ ವರದಿ ಅನುಷ್ಟಾನಗೊಳಿಸಲಾಗಿದೆ. ಒಪಿಎಸ್ ಜಾರಿಗೂ ನಮ್ಮ ಸರ್ಕಾರ ಬದ್ದವಿರಿದ್ದು, ಸಮಿತಿ ವರದಿ ಬಂದ ನಂತರ ಖಂಡಿತ ಜಾರಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಕೆಡಿಪಿ ಸಭೆಗಿಲ್ಲದ ಆಹ್ವಾನ ಆಕ್ಷೇಪ :

ನಾನು ಶಾಸಕನಾಗಿದ್ದೇನೆ ಎಂಬುದನ್ನೇ ಅಧಿಕಾರಿಗಳು ಮರೆತಂತಿದೆ. ಕೆಡಿಪಿ ಸಭೆಗೂ ಆಹ್ವಾನ ನೀಡುತ್ತಿಲ್ಲ. ಇದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಅವರು, ಖಾಸಗಿ ಶಾಲೆಗಳ ನವೀಕರಣದಲ್ಲಿ ಸರ್ಕಾರದ ಮಾನದಂಡ ಪಾಲಿಸಲು ತಾಕೀತು ಮಾಡಿದರು.

ಶೈಕ್ಷಣಿಕ ಪ್ರಗತಿಯಲ್ಲಿ ಖಾಸಗಿ ಶಾಲೆಗಳ ಪಾಲು ಶೇ.೭೦ ರಷ್ಟಿದೆ, ಖಾಸಗಿ ಶಾಲೆಗಳು ಮುಚ್ಚಿದರೆ ಶಿಕ್ಷಣ ನೀಡಲು ಸರ್ಕಾರದ ಬಜೆಟ್ ಪೂರ್ತಿ ಶಿಕ್ಷಣ ಕ್ಷೇತ್ರಕ್ಕೆ ಸಾಕಾಗುವುದಿಲ್ಲ ಎಂದರು.

ಜಿಲ್ಲಾಧಿಕಾರಿ ಅಕ್ರಂ ಪಾಷಾ ಮಾತನಾಡಿ, ದಾಸ್ಯದ ಸಂಕೋಲೆಯಿAದ ಮುಕ್ತರಾದ ನಮಗೆ ದಾರಿ ತೋರಿದ ಸಂವಿಧಾನ ಮತ್ತು ಅದರ ರಚನೆ ಮಾಡಿದವರ ಸ್ಮರಣೆ ಇಂದಿನ ಅಗತ್ಯವಾಗಿದೆ. ಸಂವಿಧಾನದ ಪೀಠಿಕೆ ಸಂವಿಧಾನದ ಹೃದಯ ಎಂದು ಅಂಬೇಡ್ಕರ್ ಅವರೇ ಹೇಳಿದ್ದಾರೆ. ಅದನ್ನು ಶಾಲೆಗಳಲ್ಲಿ ವಾಚಿಸುವ ಮೂಲಕ ಗೌರವ ಅರ್ಪಿಸಲಾಗುತ್ತಿದೆ ಎಂದರು.

ನಾವಿAದು ಗೌರವಯುಕ್ತವಾದ ಜೀವನ ನಡೆಸಲು, ಶೋಷಣೆಯಿಂದ ಮುಕ್ತರಾಗಿ ಸಾಮಾಜಿಕ ನ್ಯಾಯದಡಿ ಬದುಕಲು, ನಮ್ಮ ಸಂವಿಧಾನ ನಮಗೆ ಶಕ್ತಿ ನೀಡಿದೆ. ಬಡಕುಟಂಬದಲ್ಲಿ ಹುಟ್ಟಿದವರೂ ಐಎಎಸ್ ಮಾಡಿ ಅಧಿಕಾರಿಯಾಗಬಹುದು ಎಂದು ತೋರಿಸಿಕೊಟ್ಟಿದೆ ಎಂದರು.

ಪ್ರತಿಭಾ ಕಾರಂಜಿ ಹೆಸರೇ ಸೂಚಿಸುವಂತೆ ಮಕ್ಕಳಲ್ಲಿನ ಪ್ರತಿಭೆ ಚಿಲುಮೆಯಂತೆ ಹೊರ ಚಿಮ್ಮಲಿ, ನಮ್ಮ ಸಂಸ್ಕೃತಿ, ಸಂಪ್ರದಾಯ,ಸAಸ್ಕಾರ ಎತ್ತಿಹಿಡಿಯುವ ಕಲೆಗಳಿಗೂ ಪ್ರೋತ್ಸಾಹ ನೀಡಿ. ಮಕ್ಕಳಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಸಮಗ್ರ ಶಿಕ್ಷಣದ ಭಾಗವಾಗಲಿ ಎಂದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ತಾಲ್ಲೂಕು ಹಂತದಲ್ಲಿ ಪ್ರಥಮ ಸ್ಥಾನ ಪಡೆದ ಮಕ್ಕಳು ಜಿಲ್ಲಾಮಟ್ಟಕ್ಕೆ ಆಗಮಿಸಿದ್ದಾರೆ. ೩೯ ವಿವಿಧ ಸ್ಪರ್ಧೆಗಳನ್ನು ನಡೆಸಲು ಸಿದ್ದತೆ ನಡೆಸಲಾಗಿದೆ. ತೀರ್ಪುಗಾರರು ನಿಷ್ಪಕ್ಷಪಾತ ತೀರ್ಪು ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಪೀಠಿಕೆಯನ್ನು ಡಿಡಿಪಿಐ ಕೃಷ್ಣಮೂರ್ತಿ ಬೋಧಿಸಿದರು. ಸುವರ್ಣ ಸೆಂಟ್ರಲ್ ಶಾಲೆ ಮಕ್ಕಳು ನಾಡಗೀತೆ ನಡೆಸಿಕೊಟ್ಟರು.

ಪ್ರತಿಭಾಕಾರಂಜಿ ನೋಡಲ್ ಅಧಿಕಾರಿ ಜಿ.ಆರ್.ಶಂಕರೇಗೌಡ, ಡಿಡಿಪಿಐ ಕಚೇರಿಯ ಶರಣಪ್ಪ ಜಮಾದಾರ್, ರೂಪ್ಸಾ ಉಪಾಧ್ಯಕ್ಷ ಎಸ್.ಮುನಿಯಪ್ಪ, ಶಿಕ್ಷಣಾಧಿಕಾರಿಗಳಾದ ವೀಣಾ, ಸಗೀರಾ ಅಂಜುA, ಬಿಇಒ ಉಮಾ, ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿ ವಿಜಯಲಕ್ಷಿö್ಮ, ವಿಷಯ ಪರಿವೀಕ್ಷಕರಾದ ಸಮೀವುಲ್ಲಾ, ವೆಂಕಟೇಶಬಾಬು, ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದ ಎ.ಬಿ.ರಾಮಕೃಷ್ಣಪ್ಪ, ಎಸ್.ಚೌಡಪ್ಪ, ಅಪ್ಪೇಗೌಡ, ಎಂ.ನಾಗರಾಜ್, ಮುನಿಯಪ್ಪ, ರಾಮಾಂಜನೇಯ, ಆಂಜನೇಯ, ಮುರಳಿಮೋಹನ್, ಮುಂತಾದವರಿದ್ದರು.

ಚಿತ್ರ ೨೬ ಕೆ.ಎಲ್.ಆರ್. ೦೩ : ಕೋಲಾರ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರತಿಭಾಕಾರಂಜಿ ಮತ್ತು ಕಲೋತ್ಸವ ಸ್ವರ್ಧೆಗಳಿಗೆ ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಅಕ್ರಂಪಾಷ, ಡಿಡಿಪಿಐ ಕೃಷ್ಣಮೂರ್ತಿ ಮುಂತಾದವರಿದ್ದರು.