ನ್ಯೂಸ್

ಕೋಲಾರ ಜಿಲ್ಲಾ ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ವೇದಿಕೆಯಿಂದ ಡಿಡಿಪಿಐಗೆ ಮನವಿ / ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ವಿಜ್ಞಾನ ಪ್ರಶ್ನೆಪತ್ರಿಕೆ ಮಕ್ಕಳ ಮನೋಸ್ಥೆöÊರ್ಯ ಕುಗ್ಗಿಸದಂತಿರಲಿ

ವಿಜಯವಾಣಿ ಸುದ್ದಿಜಾಲ ಕೋಲಾರ
ಪ್ರಸ್ತುತ ೨೦೨೪-೨೫ ನೇ ಸಾಲಿನಿಂದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆ ವಿನ್ಯಾಸದಲ್ಲಿ ಬದಲಾವಣೆ ತರುವ ಮೂಲಕ ಮಕ್ಕಳ ಮನೋಸ್ಥೆöÊರ್ಯ ಕುಗ್ಗದಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಕೋಲಾರ ಜಿಲ್ಲಾ ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ವೇದಿಕೆಯಿಂದ ಡಿಡಿಪಿಐ ಮೂಲಕ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಡಿಡಿಪಿಐ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿದ ಜಿಲ್ಲಾ ವಿಜ್ಞಾನ ಶಿಕ್ಷಕರ ವೇದಿಕೆಯ ಅಧ್ಯಕ್ಷರಾಗಿ ವೇಮಗಲ್ ಪ್ರೌಢಶಾಲೆಯ ಮುನಿರಾಜು ಮಾತನಾಡಿ, ಶಿಕ್ಷಣ ವಿದ್ಯಾರ್ಥಿ ಕೇಂದ್ರಿತವಾಗಿರುವAತೆ ಮಕ್ಕಳಿಗೆ ನೀಡುವ ಪ್ರಶ್ನೆಪತ್ರಿಕೆಗಳು ಸಹಾ ವಿದ್ಯಾರ್ಥಿ ಕೇಂದ್ರಿತವಾಗಿರಬೇಕು ಎಂಬುದನ್ನು ಮನಗಂಡು ಪ್ರಶ್ನೆಪತ್ರಿಕೆ ತಯಾರಿಸಲು ಆಗ್ರಹಿಸಿದರು.

ಇತ್ತೀಚಿನ ಅರ್ಧವಾರ್ಷಿಕ ಪರೀಕ್ಷೆಯ ವಿಜ್ಞಾನ ಪ್ರಶ್ನೆಪತ್ರಿಕೆಯು ೧೦ನೇ ತರಗತಿ ಮಕ್ಕಳಿಗೆ ಕಬ್ಬಿಣದ ಕಡಲೆ ಅಲ್ಲ ವಜ್ರದ ಕಡಲೆಯಾಗಿತ್ತು. ಮಕ್ಕಳ ಮನೋಸ್ಥೆöÊರ್ಯವನ್ನು ತಗ್ಗಿಸುವಂತಿತ್ತು. ಕೆಲವು ಪ್ರಶ್ನೆಗಳು ಮಕ್ಕಳಿಗೆ ಅರ್ಥವೇ ಆಗಲಿಲ್ಲ. ಇದು ಮಕ್ಕಳು ಮುಂದಿನ ದಿನಗಳಲ್ಲಿ ವಿಜ್ಞಾನ ಓದುವುದೋ ಬೇಡವೋ ಎಂಬ ಜಿಜ್ಞಾಸೆಯಲ್ಲಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ವಿಜ್ಞಾನ ಪ್ರಶ್ನೆಪತ್ರಿಕೆ ನೀಡಿಕೆಯಲ್ಲಿನ ಲೋಪದಿಂದಾಗಿ ಪಿ.ಯು ಕಾಲೇಜ್‌ಗಳಲ್ಲಿ ವಿಜ್ಞಾನ ಓದುವವರ ಸಂಖ್ಯೆ ದಿನ ದಿನಕ್ಕೆ ಕ್ಷೀಣಿಸುತ್ತಿದೆ. ಮಕ್ಕಳಲ್ಲಿ ವಿಜ್ಞಾನವೆಂದರೆ ಭಯ ಆತಂಕ ಮೂಡಿಸುವಂತೆ ಪ್ರಶ್ನೆಪತ್ರಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.

ಮಕ್ಕಳಲ್ಲಿ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಅಂಕ ಮತ್ತು ಆಸಕ್ತಿ ಗಳಿಸಲು ಅನುವಾಗುವಂತೆ ಮುಂಬರುವ ದಿನಗಳಲ್ಲಿ ಹತ್ತನೇ ತರಗತಿಯ ವಿಜ್ಙಾನ ಪ್ರಶ್ನೆಪತ್ರಿಕೆಯಲ್ಲಿ ಬದಲಾವಣೆ ತರಲು ಆಗ್ರಹಿಸಿ, ಎಸ್ಸೆಸ್ಸೆಲ್ಸಿ ವಿಜ್ಞಾನ ಪ್ರಶ್ನೆಪತ್ರಿಕೆಯನ್ನು ಸಹ ಪಿ.ಯು.ಸಿ. ಪ್ರಶ್ನೆ ಪತ್ರಿಕೆಯ ಮಾದರಿಯಲ್ಲಿ ಪರಿಷ್ಕಸಲು ಮನವಿ ಮಾಡಿದರು.

ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ್, ತಾಲ್ಲೂಕು ಅಧ್ಯಕ್ಷ ನಾರಾಯಣ ರೆಡ್ಡಿ, ಉಪಾಧ್ಯಕ್ಷ ಸತೀಶ್ ಕುಮಾರ್ ಮಾತನಾಡಿ ಡಿಡಿಪಿಐ ಅವರಿಗೆ ವಿಜ್ಞಾನ ಶಿಕ್ಷಕರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟರು.

ವಿಜ್ಞಾನ ಶಿಕ್ಷಕರ ವೇದಿಕೆಗೆ ಆಯ್ಕೆ :
ಇದೇ ಸಂದರ್ಭದಲ್ಲಿ ಜಿಲ್ಲಾ ವಿಜ್ಞಾನ ಶಿಕ್ಷಕರ ವೇದಿಕೆಯ ಅಧ್ಯಕ್ಷರಾಗಿ ವೇಮಗಲ್ ಪ್ರೌಢಶಾಲೆಯ ಮುನಿರಾಜು, ಗೌರವಾಧ್ಯಕ್ಷರಾಗಿ ಕೋಲಾರ ಬಾಲಕಿರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ಶಶಿವಧನ, ಕಾರ್ಯದರ್ಶಿಗಳಾಗಿ ಮುಳುಬಾಗಿಲು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಾಗೇಶ್, ಖಜಾಂಚಿ ಕೆಪಿಎಸ್ ಸುಂದರ ಪಾಳ್ಯ ಶಾಲೆಯ ನವೀನ್ ಕುಮಾರ್, ಉಪಾಧ್ಯಕ್ಷರಾಗಿ ಬಂಗಾರಪೇಟೆ ಬಾಲಕರ ಪದವಿಪೂರ್ವ ಕಾಲೇಜಿನ ನಂಜುAಡಪ್ಪ ಆಯ್ಕೆಯಾದರು.

ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚೌಡಪ್ಪ, ಜಿಲ್ಲಾಧ್ಯಕ್ಷ ಮುರಳಿ ಮೋಹನ್, ವಿಜ್ಞಾನ ಶಿಕ್ಷಕರ ವೇದಿಕೆಯ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು. ಶಿಕ್ಷಕರಾದ ರಾಜಶೇಖರ್, ಗೋಪಾಲ್ ರಾವ್, ರಮೇಶ್, ಪುಷ್ಪ, ಜಯಸುಧ, ಲೇಖ, ಎಂ.ಬಿ.ಶ್ವೇತಾ, ಸುಲೋಚನ, ರೇಣುಕಾ, ಪವಿತ್ರ ಜಿಲ್ಲೆಯ ಇನ್ನೂ ಹಲವಾರು ವಿಜ್ಞಾನ ಶಿಕ್ಷಕರು ಹಾಜರಿದ್ದರು.

ಚಿತ್ರ ೧೦ ಕೆ.ಎಲ್.ಆರ್. ೦೫ : ಪ್ರಸ್ತುತ ೨೦೨೪-೨೫ ನೇ ಸಾಲಿನಿಂದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆ ವಿನ್ಯಾಸದಲ್ಲಿ ಬದಲಾವಣೆ ತರುವ ಮೂಲಕ ಮಕ್ಕಳ ಮನೋಸ್ಥೆöÊರ್ಯ ಕುಗ್ಗದಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಕೋಲಾರ ಜಿಲ್ಲಾ ವಿಜ್ಞಾ ಶಿಕ್ಷಕರ ವೇದಿಕೆಯಿಂದ ಡಿಡಿಪಿಐ ಮೂಲಕ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.