ನ್ಯೂಸ್

ಕೋಲಾರ ಜಿಲ್ಲಾ ಕಾಂಗ್ರೇಸ್ ಪಕ್ಷದಲ್ಲಿ ಮುಂದುವರೆದ ಬಣ ರಾಜಕಾರಣ / ಮೌನವಹಿಸಿರುವ ಹೈಕಮ್ಯಾಂಡ್ / ಸಮುದಾಯ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿರುವ ಅಧ್ಯಕ್ಷರ ಮೇಲಿನ ಹಲ್ಲೆ

ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಜಿಲ್ಲಾ ಕಾಂಗ್ರೇಸ್ ಪಕ್ಷದಲ್ಲಿನ ಬಣ ರಾಜಕಾರಣದಿಂದ ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದ್ದರೂ ಎಚ್ಚೆತ್ತುಕೊಳ್ಳದೆ ಮತ್ತೆ ಜಿಲ್ಲೆಯಲ್ಲಿ ಬಣ ರಾಜಕಾರಣ ಮುಂದುವರೆದಿದ್ದು, ಸಭೆಗಳಲ್ಲಿ ಮಾರಾಮಾರಿ ಹಂತಕ್ಕೆ ತಲುಪಿದ್ದರೂ ಸಹ ಕಾಂಗ್ರೇಸ್ ಹೈಕಮ್ಯಾಂಡ್ ಜಿಲ್ಲಾ ಕಾಂಗ್ರೇಸ್ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸದೆ ಮೌನ ನಡೆಯಿಂದ ಸಮುದಾಯ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಂತಾಗಿದೆ.

೨೦೧೯ರ ಲೋಕಸಭಾ ಚುನಾವಣೆಗೆ ಮುಂಚೆ ಜಿಲ್ಲೆಯಲ್ಲಿ ಬಣ ರಾಜಕಾರಣ ಕಾಣಸಿಕೊಂಡಿತ್ತು. ಆ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ಟಿಕೇಟ್ ವಿಚಾರದಲ್ಲಿಯೂ ಗೊಂದಲ ಉಂಟಾಗಿ ಕೊನೆಗೆ ಪಕ್ಷದ ಅಭ್ಯರ್ಥಿ ಪರಾಭವಗೊಳ್ಳುವ ತನಕ ಬಣ ರಾಜಕಾರಣ ಮುಂದುವರೆಯಿತು.

ಇದೇ ವಿಷಯ ಮುಂದಿಟ್ಟುಕೊAಡು ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಬಣ ರಾಜಕಾರಣ ಪಕ್ಷದ ಕೆಲವು ಶಾಸಕರನ್ನು ಪರಾಭವಗೊಳಿಸಿತು. ೨೦೨೪ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಟಿಕೇಟ್ ವಿಷಯದಲ್ಲಿ ಕಾಂಗ್ರೇಸ್‌ನ ಎರಡೂ ಬಣಗಳ ಜಿದ್ದಾಜಿದ್ದಿ ರಾಜ್ಯ ಹೈಕಮ್ಯಾಂಡ್ ಕದ ತಟ್ಟಿತ್ತು. ಕೊನೆಗೂ ಜಿಲ್ಲೆಯ ಎರಡೂ ಬಣಗಳನ್ನು ಸಂಧಾನ ಮಾಡಲು ಹೈಕಮ್ಯಾಂಡ್ ವಿಫಲವಾಯಿತು. ಅದು ಪಕ್ಷದ ಅಭ್ಯರ್ಥಿಯನ್ನು ಪರಾಭವಗೊಳಿಸುವ ಹಂತಕ್ಕೆ ತಲುಪಿತು.

ಅಷ್ಟಕ್ಕೇ ಕಾಂಗ್ರೇಸ್‌ನ ಬಣ ರಾಜಕಾರಣ ನಿಲ್ಲುತ್ತದೆ ಎಂದು ಎರಡೂ ಬಣಗಳಿಂದ ದೂರವಿದ್ದ ಮುಖಂಡರು ಅಂದುಕೊAಡಿದ್ದರು. ಆದರೆ ಅದು ಸಭೆ ಸಮಾರಂಭಗಳಲ್ಲಿ ಎರಡೂ ಬಣಗಳ ಕಾಂಗ್ರೇಸ್ ಕಾರ್ಯಕರ್ತರು ಕೈಕೈ ಮಿಲಾಯಿಸಿಕೊಂಡು ಪರಸ್ಪರ ಹಲ್ಲೆ ನಡೆಸುವ ಹಂತಕ್ಕೆ ತಲುಪಿದೆ.

ಕಳೆದ ವಾರ ಜಿಲ್ಲಾ ಕಾಂಗ್ರೇಸ್ ಪದಾಧಿಕಾರಿಗಳ ಸಭೆಯಲ್ಲಿ ನಡೆದ ಕಾಂಗ್ರೇಸ್ ಕಾರ್ಯಕರ್ತರ ಗದ್ದಲ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರ ಮೇಲೆ ಹಲ್ಲೆ ನಡೆಸುವ ಮಟ್ಟಕ್ಕೆ ತಲುಪಿದ್ದು, ಈಗ ಅದು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರ ಸಮುದಾಯದವರು ಜಿಲ್ಲೆಯಾದ್ಯಂತ ಪ್ರತಿಭಟನೆಗಳನ್ನು ನಡೆಸುವ ಮೂಲಕ ಸಮುದಾಯ ಸಂಘರ್ಷಕ್ಕೆ ಎಡೆ ಮಾಡಿಕೊಟಿದೆ.

ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕುಂಬಾರ ಸಮುದಾಯದವರಾಗಿದ್ದು, ಅವರ ಪರವಾಗಿ ಕುಂಬಾರ ಸಮುದಾಯದವರು ಪ್ರತಿಭಟಣೆಗಳನ್ನು ನಡೆಸಿ ಅಧ್ಯಕ್ಷರ ಬೆಂಬಲಕ್ಕೆ ನಿಂತು ಗಲಭೆ ನಡೆಸಲು ಮುಂದಾದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಪಡಿಸುತ್ತಿದ್ದಾರೆ.

ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರಗಳಲ್ಲಿ ೪ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ಜೆಡಿಎಸ್ ೨ ವಿಧಾನಸಭಾ ಕ್ಷೇತ್ರದಲ್ಲಿ ಗೆಲವು ಸಾಧಿಸಿದೆ. ಜಿಲ್ಲೆಯಲ್ಲಿ ಕಾಂಗ್ರೇಸ್ ಬಲಿಷ್ಠವಾಗಿದ್ದರೂ ಬಣ ರಾಜಕಾರಣ ಅಷ್ಟೇ ಬಲಿಷ್ಠವಾಗಿ ಬೆಳೆಯತೊಡಗಿದೆ. ಇದಕ್ಕೆ ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡರ ಕುಮ್ಮಕ್ಕು ಇರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಅಗಿದೆ.

ತಮ್ಮ ತಮ್ಮ ಸ್ವಪ್ರತಿಷ್ಠೆಗಳನ್ನು ಮುಂದಿಟ್ಟುಕೊAಡು ಸಭೆ ಸಮಾರಂಭಗಳಲ್ಲಿ ಕಾಂಗ್ರೇಸ್ ಕಾರ್ಯಕರ್ತರನ್ನು ಗೊಂದಲಕ್ಕೆ ಸಿಲುಕುವಂತೆ ಮಾಡುತ್ತಿದ್ದು, ಇದರಿಂದ ಪರಸ್ಪರ ಕಾರ್ಯಕರ್ತರ ಮತ್ತು ಮುಖಂಡರ ಮೇಲೆ ಹಲ್ಲೆಗಳು ನಡೆಯ ಮಟ್ಟಕ್ಕೆ ತಲುಪಿವೆ.

ರಾಜ್ಯ ಕಾಂಗ್ರೇಸ್‌ನಲ್ಲಿ ದಿನಕ್ಕೊಂದು ಬೆಳವಣಿಗೆಗಳು, ವಿದ್ಯಮಾನಗಳು, ಹಗರಣಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದರೆ. ಜಿಲ್ಲಾ ಕಾಂಗ್ರೇಸ್‌ನಲ್ಲಿ ಬಡಿದಾಡಿಕೊಳ್ಳುವ ಹಂತಕ್ಕೆ ತಲುಪಿದೆ. ರಾಜ್ಯ ಕಾಂಗ್ರೇಸ್‌ನ ಮತ್ತು ಸರ್ಕಾರದ ಪರಿಸ್ಥಿತಿಯನ್ನು ಸರಿ ಮಾಡುವವರೇ ಇಲ್ಲದಿರುವಾಗ ಜಿಲ್ಲಾ ಕಾಂಗ್ರೇಸ್‌ನಲ್ಲಿನ ಪರಿಸ್ಥಿತಿಯನ್ನು ಕೇಳುವವರೇ ಇಲ್ಲದಂತಾಗಿದೆ.

ಕೋಟ್
ಕೋಲಾರ ಕಾಂಗ್ರೇಸ್‌ನಲ್ಲಿ ಬಣ ರಾಜಕಾರಣ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಕಾಣದ ಕೈಗಳು ಕೆಲಸ ಮಾಡುತ್ತಿವೆ. ನಾನಂತೂ ಯಾವ ಬಣ ರಾಜಕಾರಣದಲ್ಲಿ ಗುರ್ತಿಸಿಕೊಂಡಿಲ್ಲ. ಎಲ್ಲರೂ ನನಗೆ ಒಂದೇ, ಕೆಲವರು ಬೇಕೆಂತಲೇ ಜಿಲ್ಲಾ ಕಾಂಗ್ರೇಸ್ ನಮ್ಮದೇ ಎಂದು ಪಕ್ಷದಲ್ಲಿ ಮೂಗು ತೂರಿಸಲು ಬರುತ್ತಿದ್ದಾರೆ. ಎಲ್ಲವೂ ಹೈಕಮ್ಯಾಂಡ್‌ಗೆ ಗೊತ್ತಾಗಿದೆ. ಸದ್ಯದಲ್ಲಿಯೇ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ.

-ಶಾಸಕ ಕೊತ್ತೂರು ಮಂಜುನಾಥ್
ಕೋಟ್
ಇತ್ತೀಚೆಗೆ ಕೋಲಾರ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ನಡೆದ ಗೊಂದಲದ ಬಗ್ಗೆ ಹೈಕಮ್ಯಾಂಡ್ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಕೆಲವು ವಿನಾ ಕಾರಣ ಸಭೆ ಸಮಾರಂಭಗಳಲ್ಲಿ ಗೊಂದಲ ಉಂಟುಮಾಡಲೆAದು ಕಾಯುತ್ತಿದ್ದಾರೆ. ಅದು ಯಾರಿಂದ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯವೆ. ಸದ್ಯದಲ್ಲಿ ತಪ್ಪಿತಸ್ಥರು ಯಾರು ಎಂಬುದು ಗೊತ್ತಾಗುತ್ತದೆ.

-ಎಂ.ಎಲ್.ಸಿ. ಅನಿಲ್ ಕುಮಾರ್

ಕೋಟ್
ನನ್ನ ಮೇಲೆ ಪೂರ್ವನಿಯೋಜಿತವಾಗಿ ಹಲ್ಲೆ ನಡೆದಿದೆ. ನಾನು ಈಗಾಗಲೇ ಪೋಲಿಸ್ ಠಾಣೆಗೆ ದೂರು ನೀಡಿದ್ದೇನೆ. ರಾಜ್ಯ ಹೈಕಮ್ಯಾಂಡ್‌ಗೂ ದೂರು ನೀಡಿತ್ತೇನೆ. ಪಕ್ಷದಲ್ಲಿನ ಬಣ ರಾಜಕಾರಣದಿಂದಲೇ ಹಲ್ಲೆ ನಡೆದಿದೆ. ಇದರಿಂದ ನನಗೆ ನೋವಾಗಿದೆ.
-ಲಕ್ಷಿö್ಮÃನಾರಾಯಣ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ

ಚಿತ್ರ ೦೧ ಕೆ.ಎಲ್.ಆರ್. ೦೧ : ಶಾಸಕ ಕೊತ್ತೂರು ಮಂಜುನಾಥ್ ರವರ ಭಾವಚಿತ್ರ
ಚಿತ್ರ ೦೧ ಕೆ.ಎಲ್.ಆರ್. ೦೧ಎ : ಎಂ.ಎಲ್.ಸಿ. ಅನಿಲ್ ಕುಮಾರ್ ರವರ ಭಾವಚಿತ್ರ
ಚಿತ್ರ ೦೧ ಕೆ.ಎಲ್.ಆರ್. ೦೧ಬಿ : ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಲಕ್ಷಿö್ಮÃನಾರಾಯಣ ರವರ ಭಾವಚಿತ್ರ