ನ್ಯೂಸ್

ಕೋಲಾರ ಚಿಕ್ಕಬಳ್ಳಾಪುರ ಶಾಸಕರು ರಮೇಶ್ ಕುಮಾರ್ ರವರನ್ನು ಎಂ.ಎಲ್.ಸಿ. ಮಾಡಬೇಕೆಂದು ಸಿ.ಎಂ. ಮತ್ತು ಡಿ.ಸಿ.ಎಂ. ರವರ ಭೇಟಿ

ವಿಜಯವಾಣಿ ಸುದ್ದಿಜಾಲ ಶ್ರೀನಿವಾಸಪುರ
ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ರವರಿಗೆ ಎಂ.ಎಲ್.ಸಿ. ಸ್ಥಾನ ನೀಡಬೇಕೆಂದು ಮಂಗಳವಾರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕರುಗಳು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರನ್ನು ಭೇಟಿ ಮಾಡಿ, ಒತ್ತಾಯಪಡಿಸಿದರು.

ಕಳೆದ ವಾರ ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೇಸ್ ಕಾರ್ಯಕರ್ತರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಹಾಗೂ ಕೆಲವರು ಸಚಿವರನ್ನು ಭೇಟಿ ಮಾಡಿ, ರಮೇಶ್‌ಕುಮಾರ್ ರವರನ್ನು ಎಂ.ಎಲ್.ಸಿ. ಮಾಡಬೇಕೆಂದು ಒತ್ತಾಯಪಡಿಸಿದರು. ಆ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಮ್ಮ ಬಳಿ ಒತ್ತಾಯಪಡಿಸುವುದಕ್ಕಿಂತ ನಿಮ್ಮ ರಮೇಶ್‌ಕುಮಾರ್ ರವರನ್ನು ಮೊದಲು ಒಪ್ಪಿಸಿ, ಸರ್ಕಾರಕ್ಕೆ ಅಂತಹವರ ಅವಶ್ಯಕತೆ ಇದೆ, ಎಂದು ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ತಿಳಿಸಿದ್ದರು.

ಇದಾದ ನಂತರ ಇತ್ತೀಚಿಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ನೇತೃತ್ವದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಪರವಾಗಿ ಕೋಲಾರದಲ್ಲಿ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕರ್ತರ ಸಭೆಗೆ ಶ್ರೀನಿವಾಸಪುರ ಕ್ಷೇತ್ರದ ಕಾರ್ಯಕರ್ತರು ಆಗಮಿಸಿ, ರಮೇಶ್‌ಕುಮಾರ್ ರವರನ್ನು ಎಂ.ಎಲ್.ಸಿ. ಮಾಡಬೇಕೆಂದು ಸಚಿವರ ಬಳಿ ಒತ್ತಾಪಡಿಸಿದ್ದರು.

ಮಂಗಳವಾರ ಕೋಲಾರ ಕ್ಷೇತ್ರಕ್ಕೆ ಕೊತ್ತೂರು ಮಂಜುನಾಥ್, ಬೇಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಎಂ.ಎಲ್.ಸಿ.ಗಳಾದ ನಜೀರ್ ಅಹ್ಮದ್, ಅನಿಲ್ ಕುಮಾರ್, ಲೋಕಸಭಾ ಕಾಂಗ್ರೇಸ್ ಅಭ್ಯರ್ಥಿ ಗೌತಮ್ ಇವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ರವರ ಜೊತೆಗೂಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರನ್ನು ಭೇಟಿ ಮಾಡಿ, ರಮೇಶ್‌ಕುಮನಾರ್ ರವರನ್ನು ಎಂ.ಎಲ್.ಶಿ ಮಾಡಬೇಕಾಗಿ ಒತ್ತಾಯಪಡಿಸಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಮಾತನಾಡಿ, ರಮೇಶ್ ಕುಮಾರ್ ರವರನ್ನು ಎಂ.ಎಲ್.ಸಿ. ಮಾಡಲು ನಮ್ಮದೇನೂ ಅಭ್ಯಂತರ ಇಲ್ಲ. ಅವರನ್ನು ಎಂ.ಎಲ್.ಸಿ. ಮಾಡಿ ಎಂದು ಒತ್ತಾಯದ ಅವಶ್ಯಕತೆಯೂ ಇಲ್ಲ. ಅವರಂಥ ಹಿರಿಯರು ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಅವಶ್ಯಕತೆ ಇದೆ. ನಮ್ಮಲ್ಲಿ ಖಾಲಿ ಇರುವುದು ೭ ಸ್ಥಾನಗಳು ಮಾತ್ರ, ಇದರಲ್ಲಿ ಎಲ್ಲಾ ಸಮುದಾಯಕ್ಕೂ ಆದ್ಯತೆ ಇಡಬೇಕಾಗಿದೆ. ಹೈಕಮ್ಯಾಂಡ್ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು ಎನ್ನಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಇದೇ ಉತ್ತರವನ್ನು ನೀಡಿದ ಮುಖ್ಯಮಂತ್ರಿಗಳು ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದೆ. ರಮೇಶ್ ಕುಮಾರ್ ರವರು ನನ್ನ ಆತ್ಮೀಯರು ಅವರಿಗಾಗಿ ಲಾಬಿ ನಡೆಸುವ ಅವಶ್ಯಕತೆ ಇಲ್ಲ. ಹೈಕಮ್ಯಾಂಡ್ ಗಮನಕ್ಕೆ ತರಲಾಗುವುದು. ಕಾರ್ಯಕರ್ತರು ಹಾಗೂ ಎರಡೂ ಜಿಲ್ಲೆಯ ಶಾಸಕರು ಅವರನ್ನು ಒಪ್ಪಿಸಿ ಕರೆತಂದ್ದೀರಿ. ನಿಮ್ಮ ಹಾಗೇ ನಮಗೂ ರಮೇಶ್‌ಕುಮಾರ್ ರವರನ್ನು ಎಂ.ಎಲ್.ಸಿ ಮಾಡಬೇಕೆಂಬ ಆಸೆ ಇದೆ. ಇದನ್ನು ಕೈಕಮ್ಯಾಂಡ್ ಗಮನಕ್ಕೆ ತರುವುದಾಗಿ ತಿಳಸಿದರು ಎನ್ನಲಾಗಿದೆ.

ಚಿತ್ರ ೨೮ ಕೆ.ಎಲ್.ಆರ್. ೦೧ : ಬೆಂಗಳೂರಿನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರನ್ನು ಕೋಲಾರ, ಚಿಕ್ಕಬಳ್ಳಾಪುರ ಶಾಸಕರು ಭೇಟಿ ಮಾಡಿ, ರಮೇಶ್‌ಕುಮಾರ್ ರವರನನು ಎಂ.ಎಲ್.ಸಿ. ಮಾಡಬೇಕೆಂದು ಒತ್ತಾಯಪಡಿಸಿದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ರವರು ಸಹ ಉಪಸ್ಥಿತರಿದ್ದಾರೆ.