ನ್ಯೂಸ್

ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಚುನಾವಣೆಗೆ ೪ ದಿನಗಳು ಮಾತ್ರ ಬಾಕಿ / ಮತದಾರರನ್ನು ಓಲೈಸಿಕೊಳ್ಳಲು ಅಭ್ಯರ್ಥಿಗಳಿಂದ ಕಸರತ್ತುಗಳು / ಆಸೆ ಆಮಿಷಗಳ ಜೊತೆಗೆ ರಾಜಕೀಯ ಮುಖಂಡರಿAದ ಒತ್ತಡಗಳು

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿಗೆ ನಡೆಯಬೇಕಾಗಿರುವ ೧೨ ಕ್ಷೇತ್ರಗಳ ಚುನಾವಣೆಯಲ್ಲಿ ೨೯ ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದು, ಮತದಾನಕ್ಕೆ ಇನ್ನೂ ಕೇವಲ ೪ ದಿನಗಳು ಮಾತ್ರ ಬಾಕಿ ಉಳಿದಿದ್ದು, ಮತದಾರರನ್ನು ಓಲೈಸಿಕೊಳ್ಳಲು ಅಭ್ಯರ್ಥಿಗಳು ಆಸೆ ಅಮಿಷಗಳೊಂದಿಗೆ ರಾಜಕೀಯವನ್ನು ಬಳಸಿಕೊಂಡು ಮುಖಂಡರಿAದ ಒತ್ತಡಗಳನ್ನು ತರುವ ಕೆಲಸ ನಡೆಯುತ್ತಿದೆ.

ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಶಾಸಕರುಗಳು ಮತ್ತು ಮುಖಂಡರುಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಶತಾಯಗತಾಯವಾಗಿ ಮಾಜಿ ಅಧ್ಯಕ್ಷ ಗೋವಿಂದೇಗೌಡರನ್ನು ಮಣಿಸಬೇಕು ಎಂದು ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಎಂ.ಎಲ್.ಸಿ. ಅನಿಲ್‌ಕುಮಾರ್, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ಸೇರಿದಂತೆ ಕಾಂಗ್ರೇಸ್‌ನ ಕೆಲವು ಶಾಸಕರು ಮತ್ತು ಮಾಜಿ ಶಾಸಕರು ಪ್ರತಿಷ್ಠೆತೆಯಾಗಿ ತೆಗೆದುಕೊಂಡಿದ್ದಾರೆ.

ಈಗಾಗಲೇ ೬ ಕ್ಷೇತ್ರಗಳಿಂದ ಮೂವರು ಶಾಸಕರು ಇಬ್ಬರು ಮಾಜಿ ನಿರ್ದೇಶಕರ ಜೊತೆಗೆ ಹೊಸದಾಗಿ ಒಬ್ಬರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಹಾಲು ಉತ್ಪಾದಕರ ಸಹಕಾರ ಸಂಘಗಳಿAದ ೨ ಕ್ಷೇತ್ರಗಳಿಂದ ಇಬ್ಬರು ನಿರ್ದೇಶಕರು ಆಯ್ಕೆ ಆಗಬೇಕಾಗಿತ್ತು. ಈ ಕ್ಷೇತ್ರಗಳಲ್ಲಿ ಹೆಚ್ಚು ಮತಗಳು ಹೊಂದಿವೆ. ಉಳಿದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರಗಳಿಂದ ೯ ಮಂದಿ ನಿರ್ದೇಶಕರು ಆಯ್ಕೆ ಆಗಬೇಕಾಗಿದೆ. ಈ ಕ್ಷೇತ್ರಗಳಲ್ಲಿ ಒಂದು ತಾಲ್ಲೂಕಿನಿಂದ ೨೬ಕ್ಕಿಂತ ಕಡಿಮೆ ಮತಗಳು ಹೊಂದಿರುವುದರಿAದ ಮತದಾರರಿಗೆ ಬಾರಿ ಬೇಡಿಕೆ ಉಂಟಾಗಿದೆ.

ಮಾಜಿ ಅಧ್ಯಕ್ಷ ಗೋವಿಂದೇಗೌಡರು ಇತರೆ ಸಹಕಾರ ಸಂಘಗಳಿAದ ನಿರ್ದೇಶಕರಾಗಿ ಆಯ್ಕೆ ಆಗಬೇಕಾಗಿದ್ದು, ಕೋಲಾರ ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳ ವ್ಯಾಪ್ತಿಗೆ ಒಳಪಟ್ಟಿದ್ದು, ೨ ಜಿಲ್ಲೆಗಳಿಂದ ಒಟ್ಟು ೪೮ ಮತಗಳಿವೆ. ಸಹಕಾರ ಕ್ಷೇತ್ರಗಳಲ್ಲಿ ಹೆಚ್ಚು ನಿಪುಣತೆ ಹೊಂದಿರುವ ಗೋವಿಂದೇಗೌಡರಿಗೆ ಎಷ್ಟೇ ಅಡೆತಡೆಗಳು ಎದುರಾದರೂ ಗೆಲುವು ಸಾಧಿಸಲಿದ್ದಾರೆ. ಆದರೂ ಸಹ ಕೆಲವು ಶಾಸಕರು ಮತ್ತು ಮುಖಂಡರು ಗೆಲುವಿಗೆ ಅಡ್ಡಗಾಲು ಹಾಕಲು ಮುಂದಾಗಿದ್ದಾರೆ.

ಕ್ಷೇತ್ರವಾರು ಮತಗಳ ವಿವರ :

ಕೃಷಿ ಪತ್ತಿನ ಸಹಕಾರ ಕ್ಷೇತ್ರಗಳಿಂದ ಮತಗಳ ವಿವರ :

೧. ಕೋಲಾರ ಕ್ಷೇತ್ರದಿಂದ ೧೨

೨. ಬಂಗಾರಪೇಟೆ ಕ್ಷೇತ್ರದಿಂದ ೧೪

೩. ಮುಳಬಾಗಿಲು ಕ್ಷೇತ್ರದಿಂದ ೧೯

೪. ಶ್ರೀನಿವಾಸಪುರ ಕ್ಷೇತ್ರದಿಂದ ೦೫

೫. ಚಿಂತಾಮಣಿ ಕ್ಷೇತ್ರದಿಂದ ಸದ್ಯಕ್ಕೆ ೧೮ (ನ್ಯಾಯಾಲಯಕ್ಕೆ ಒಳಪಟ್ಟಿರುವುದರಿಂದ ತೀರ್ಪಿನ ನಂತರ ಮತಗಳು ಹೆಚ್ಚಾಗುವ ಸಾಧ್ಯತೆ ಇದೆ.)

೬. ಚೋಳೂರು ಕ್ಷೇತ್ರದಿಂದ ೦೯

೭. ಗೌರಿಬಿದನೂರು ಕ್ಷೇತ್ರದಿಂದ ೨೬

೮. ಗುಡಿಬಂಡೆ ಕ್ಷೇತ್ರದಿಂದ ೦೮

೯. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ೧೬

ಎರಡೂ ಜಿಲ್ಲೆಗಳಿಂದ ಹಾಲು ಉತ್ಪಾದಕರ ಸಹಕಾರ ಕ್ಷೇತ್ರದಿಂದ ಮತಗಳ ವಿವರ :

೧. ಕೋಲಾರ ಹಾಲು ಉತ್ಪಾದಕರ ಸಹಕಾರ ಕ್ಷೇತ್ರದಿಂದ ೧೨೬

೨. ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಕ್ಷೇತ್ರದಿಂದ ೧೪೭

ಡಿಸಿಸಿ ಬ್ಯಾಂಕಿಗೆ ಒಳಪಡುವ ಇತರೆ ಸಹಕಾರ ಕ್ಷೇತ್ರದಿಂದ ಎರಡೂ ಜಿಲ್ಲೆಗಳಿಂದ ೪೮ ಮತಗಳಿವೆ. (ಇದೂ ಸಹ ನ್ಯಾಯಾಲಯಕ್ಕೆ ಒಳಪಟ್ಟಿರುವುದರಿಂದ ಮತ್ತೊಂದು ಮತ ತೀರ್ಪಿನ ನಂತರ ಸೇರ್ಪಡೆಯಾಗುವ ಸಾಧ್ಯತೆ ಇದೆ)

ಚಿತ್ರ ೨೪ ಕೆ.ಎಲ್.ಆರ್. ೦೧ : ಡಿಸಿಸಿ ಬ್ಯಾಂಕ್ ಚಿತ್ರ