ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಗೋಪಾಲಕರ ಸಂಘದಿAದ ಹೊಸ ವರ್ಷ ಮತ್ತು ಸಂಕ್ರಾAತಿ ಅಂಗವಾಗಿ ಅಧಿಕ ಹಾಲು ಕರೆಯುವ ಸ್ಪರ್ಧೆಯನ್ನು ಬೈರೇಗೌಡ ನಗರದ ಮೈದಾನದಲ್ಲಿ ಜ.೫ ರಿಂದ ೭ ರವರೆಗೆ ಆಯೋಜಿಸಲಾಗಿದೆ.
ಜ.೫ ರಂದು ಶುಕ್ರವಾರ ಸಂಜೆ ೫ ಗಂಟೆಗೆ ಬೈರೇಗೌಡ ನಗರದ ಶ್ರೀಕೃಷ್ಣನ ದೇವಸ್ಥಾನದಲ್ಲಿ ಗೋಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಲಿದ್ದಾರೆ. ನಂತರ ಸಮೀಪದಲ್ಲಿನ ಮೈದಾನದಲ್ಲಿ ಹಾಲು ಕರೆಯುವ ಸ್ಪರ್ಧೆಗೆ ಅಧಿಕೃತ ಚಾಲನೆ ದೊರೆಯಲಿದೆ.
೫ ರಿಂದ ೧೦ ಲಕ್ಷ ರೂ.ಮೌಲ್ಯದ ಸುಮಾರು ೨೫ ಹಸುಗಳ ನೋಂದಣಿ ಈಗಾಗಲೇ ಆಗಿದ್ದು, ಅಂತಿಮವಾಗಿ ಸುಮಾರು ೫೦ ರಾಸುಗಳು ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಶುಕ್ರವಾರ ಸಂಜೆ ಮತ್ತು ಶನಿವಾರ ಬೆಳಗ್ಗೆ ಹಾಗೂ ಸಂಜೆ ಪ್ರಾಯೋಗಿಕವಾಗಿ ಹಾಲು ಕರೆಯುವ ಸ್ಪರ್ಧೆ ನಡೆಯಲಿದ್ದು, ಭಾನುವಾರ ಬೆಳಗ್ಗೆ ಮತ್ತು ಸಂಜೆ ಅಂತಿಮ ಸ್ಪರ್ಧೆ ನಡೆಯಲಿದೆ.
ಜ.೭ ರಂದು ಭಾನುವಾರ ಸಂಜೆ ನಡೆಯುವ ಸಮಾರಂಭದಲ್ಲಿ ಮೊದಲ ಬಹುಮಾನವಾಗಿ ರಾಯಲ್ ಎನ್‌ಫಿಲ್ಡ್ ಕ್ಲಾಸಿಕ್ ಬುಲೆಟ್ ೩೫೦ ಸಿಸಿ ನೀಡಲಾಗುತ್ತಿದ್ದು, ಒಂದು ಲಕ್ಷ ರೂ. ಎರಡನೇ ಬಹುಮಾನ, ೭೫ ಸಾವಿರ ರೂ. ಮೂರನೇ ಬಹುಮಾನ, ೫೦ ಸಾವಿರ ರೂ. ನಾಲ್ಕನೇ ಬಹುಮಾನ ಹಾಗೂ ೨೫ ಸಾವಿರ ರೂ. ಐದನೇ ಬಹುಮಾನ ನೀಡಲಾಗುತ್ತಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ಗೋಪಾಲಕರಿಗೂ ಸಮಾಧಾನಕರ ಬಹುಮಾನವಿದೆ. ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ರಾಜ್ಯ ಯಾದವರ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ಬೆಂಗಳೂರು ಉತ್ತರ ಡಿಸಿಪಿ ಡಿ.ದೇವರಾಜ್, ಮೈಸೂರು ಮಾಜಿ ಮಹಾ ಪೌರರಾದ ಧೃವಕುಮಾರ್, ಕೋಲಾರ ಹಾಲು ಒಕ್ಕೂಟದ ಎಂಡಿ ಗೋಪಾಲಮೂರ್ತಿ, ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಡಾ.ಜಿ.ಟಿ.ರಾಮಯ್ಯ ಮತ್ತು ಪೌರಾಯುಕ್ತ ಶಿವಾನಂದ್ ಅವರು ವಿಜೇತ ಹಸುವಿನ ಮಾಲೀಕರಿಗೆ ಬಹುಮಾನ ವಿತರಿಸಲಿದ್ದಾರೆ.
ಇತ್ತೀಚೆಗೆ ಚಂದಾಪುರದಲ್ಲಿ ನಡೆದ ಹಾಲು ಕರೆಯುವ ಸ್ಪರ್ಧೆಯಲ್ಲಿ ಕಿಲಾರಿಪೇಟೆಯ ಕೆ.ಎನ್.ವೆಂಕಟೇಶ್ ಅವರು ಬಹುಮಾನ ಪಡೆಯುವ ಮೂಲಕ ಕೋಲಾರದ ಕೀರ್ತಿ ಪತಾಕೆಯನ್ನು ರಾಜಧಾನಿಯಲ್ಲಿ ಹಾರಿಸಿದ್ದು, ಇದರಿಂದ ಪ್ರೇರಿತವಾಗಿ ಕ್ಷೀರ ತವರು ಕೋಲಾರದಲ್ಲಿ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಒಂದು ದಿನಕ್ಕೆ ಕನಿಷ್ಟ ೩೦ ಲೀಟರ್ ಹಾಲು ಕರೆಯುವ ಹಸುಗಳನ್ನು ಮಾತ್ರವೇ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಗೋಪಾಲಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕೆಂದು ಮುಖಂಡ ಶಬರೀಶ್ ಯಾದವ್ ಮನವಿ ಮಾಡಿದ್ದು ಆಸಕ್ತರು ೯೮೪೫೯೮೪೦೯೦(ವೆಂಕಟೇಶ್) ಸಂಪರ್ಕಿಸಬೇಕಾಗಿ ಕೋರಲಾಗಿದೆ.
ಕಾರ್ಯಕ್ರಮ ನಗರಸಭೆ ಮಾಜಿ ಸದಸ್ಯ ಮೇಸ್ತಿç ನಾರಾಯಣಸ್ವಾಮಿ, ಸರ್‌ಎಂವಿ ಇಂಟರ್ ನ್ಯಾಷನಲ್ ಶಾಲೆಯ ಸ್ಥಾಪಕರು ಮತ್ತು ನಾಗಾರ್ಜುನ ಹೋಟೆಲ್ ಮಾಲೀಕರಾದ ರಮೇಶ್ ಯಾದವ್ ಹಾಗೂ ಶಬರೀಶ್ ಯಾದವ್ ಉಸ್ತುವಾರಿಯಲ್ಲಿ ನಡೆಯಲಿದೆ.