ನ್ಯೂಸ್

ಕೋಲಾರ ಕ್ರೀಡಾ ಸಂಘದಿAದ ತರಬೇತಿ ಪಡೆದಯುವಕರು / ಅಗ್ನಿಪಥ ಯೋಜನೆಯಡಿ ಸೇನೆಗೆ ಆಯ್ಕೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಅಗ್ನಿಪಥ್ ಯೋಜನೆಯಡಿ ೨೦೨೩ ರ ಸಾಲಿಗೆ ಅಗ್ನಿವೀರರ ಆಯ್ಕೆ ಪಟ್ಟಿ ಸೆ.೨೧ ರಂದು ಪ್ರಕಟವಾಗಿದ್ದು, ಇದರಲ್ಲಿ ಕೋಲಾರ ಕ್ರೀಡಾ ಸಂಘದಿAದ ತರಬೇತಿ ಪಡೆದ ಹಲವು ಯುವಕರು ಅಗ್ನಿವೀರರಾಗಿ ಆಯ್ಕೆಯಾಗಿದ್ದು, ಇವರನ್ನು ಸಂಘವು ಅಭಿನಂದಿಸುತ್ತದೆ ಎಂದು ಕೋಲಾರ ಕ್ರೀಡಾ ಸಂಘದ ಅಧ್ಯಕ್ಷ ಸಾಮಾ ಅನಿಲ್ ಕುಮಾರ್ ತಿಳಿಸಿದ್ದಾರೆ.

ಕಳೆದ ಜುಲೈ-ಆಗಸ್ಟ್ ೨೦೨೩ ರಲ್ಲಿ ಸಂಘದ ವತಿಯಿಂದ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದ ಯುವಕರಿಗೆ ಉಚಿತವಾಗಿ ದೈಹಿಕ ತರಬೇತಿಯನ್ನು ನೀಡಲಾಗಿತ್ತು. ಮಾಜಿ ಸೈನಿಕರು ಮತ್ತು ಜಿಲ್ಲಾ ಪಂಚಾಯತ್ ಸಹಾಯಕ ಸಾಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ ಮತ್ತು ಎಸ್.ಪಿ. ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುರೇಶ್ ಬಾಬು (ಕಮಾಂಡೋ) ಇವರ ಮಾರ್ಗದರ್ಶನದಲ್ಲಿ ಈ ಯುವಕರಿಗೆ ನಲವತ್ತೆöÊದು ದಿನಗಳ ಕಾಲ ತರಬೇತಿ ನೀಡಿದ್ದರು. ತರಬೇತಿಯ ನೇತೃತ್ವವನ್ನು ಸಂಘದ ಹಿರಿಯ ಸದಸ್ಯರಾದ ಪುರುಷೋತ್ತಮ್ ವಹಿಸಿದ್ದರು.

ಆಯ್ಕೆಯಾದ ಎಲ್ಲಾ ಯುವಕರಿಗೆ ಸಂಘದ ಕಾರ್ಯದರ್ಶಿ ಹರೀಶ್ ಬಾಬು, ಖಜಾಂಜಿ ಕೃಷ್ಣನ್, ಉಪಾಧ್ಯಕ್ಷರಾದ ಅಪ್ಪಿ ನಾರಾಯಣ ಸ್ವಾಮಿ, ಪದಾಧಿಕಾರಿಗಳಾದ ವಿಜಯ್ ಎಂ ವರ್ಣೇಕರ್, ಜಯಪ್ರಕಾಶ್, ನಾಗೇಂದ್ರ, ಮಲ್ಲಿಕಾರ್ಜುನ್, ನಾರಾಯಣ ಸ್ವಾಮಿ, ಲೋಕೇಶ್, ಚೇತನ್, ಚರಣ್ ಸೇರಿದಂತೆ ಎಲ್ಲಾ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಚಿತ್ರ ೨೨ ಕೆ.ಎಲ್.ಆರ್. ೧೦ : ಅಗ್ನಿಪಥ್ ಯೋಜನೆಯಡಿ ೨೦೨೩ ರ ಸಾಲಿಗೆ ಅಗ್ನಿವೀರರ ಆಯ್ಕೆ ಪಟ್ಟಿಯಲ್ಲಿ ಕೋಲಾರ ಕ್ರೀಡಾ ಸಂಘದಿAದ ತರಬೇತಿ ಪಡೆದ ಹಲವು ಯುವಕರು ಅಭಿನಂದಿಸುತ್ತಿರುವುದು.